ನವದೆಹಲಿ: ಟ್ವಿಟರ್ ಸಾಮಾನ್ಯ ಬಳಕೆದಾರರಿಗೆ ಯಾವಾಗಲೂ ಉಚಿತವಾಗಿರುತ್ತದೆ. ಆದರೆ ವಾಣಿಜ್ಯ ಮತ್ತು ಸರ್ಕಾರಿ ಬಳಕೆದಾರರಿಗೆ ಸ್ವಲ್ಪ ವೆಚ್ಚವಾಗಬಹುದು ಎಂದು ಸುಮಾರು $44 ಬಿಲಿಯನ್‌ಗೆ ಟ್ವಿಟರ್ ಖರೀದಿಸಿದ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಟ್ವಿಟರ್ ಆಯ್ತು, ಕೋಕಾ ಕೋಲಾ ಕಂಪನಿ ಮೇಲೆ ಎಲಾನ್ ಮಸ್ಕ್ ಕಣ್ಣು?
ಜನಪ್ರಿಯ ಮೈಕ್ರೋಬ್ಲಾಗಿಂಗ್ ಸೈಟ್ ಖರೀದಿಸಿದ ನಂತರ ಮಸ್ಕ್, ಹೊಸ ವೈಶಿಷ್ಟ್ಯಗಳೊಂದಿಗೆ ಟ್ವಿಟ್ಟರ್ನಲ್ಲಿ ಕೆಲ ಬದಲಾವಣೆ ಮಾಡುವುದಾಗಿ ಹೇಳಿದ್ದರು. ಇದಲ್ಲದೆ, ಇತ್ತೀಚಿನ ವರದಿಗಳ ಪ್ರಕಾರ ಈ ಶತಕೋಟಿ ಉದ್ಯಮಿ, ಟ್ವಿಟರ್‌ಗೆ ಹೊಸ ಮುಖ್ಯ ಕಾರ್ಯನಿರ್ವಾಹಕರನ್ನು ನೇಮಿಸಿದ್ದಾರೆ ಎಂದು ವರದಿಯಾಗಿತ್ತು. ಈ ವರ್ಷದ ಕೊನೆಯಲ್ಲಿ ಟ್ವಿಟ್ಟರ್ ಮಾರಾಟದ ಒಪ್ಪಂದ ಪೂರ್ಣಗೊಳಿಸಿದ ನಂತರ ಭಾರತೀಯ ಮೂಲದ ಪರಾಗ್ ಅಗರವಾಲ್ ಅವರನ್ನು ಸಿಇಒ ಸ್ಥಾನದಿಂದ ಬದಲಾಯಿಸುತ್ತಾರೆ ಎಂದು ಹೇಳಲಾಗುತ್ತಿದೆ.
ಟ್ವಿಟರ್‌ನ ಕಾನೂನು ಮುಖ್ಯಸ್ಥ ವಿಜಯ ಗಡ್ಡೆರನ್ನು ವಜಾ ಮಾಡಲು ಎಲಾನ್ ಮಸ್ಕ್ ಯೋಜಿಸಿದ್ದಾರೆ ಎಂದೂ ವರದಿಯಾಗಿದೆ. ಕಳೆದ ತಿಂಗಳು ಟ್ವಿಟರ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೊದಲು ಎಲಾನ್ ಮಸ್ಕ್, ಟ್ವಿಟರ್ ಬ್ಲೂ ಪ್ರೀಮಿಯಂ ಚಂದಾದಾರಿಕೆ ಸೇವೆಗೆ ಅದರ ಬೆಲೆ ಕಡಿತಗೊಳಿಸುವುದೂ ಸೇರಿದಂತೆ ಕೆಲವು ಬದಲಾವಣೆಗಳನ್ನು ಸೂಚಿಸಿದ್ದರು.