ಸ್ಯಾನ್ ಫ್ರಾನ್ಸಿಸ್ಕೊ: ತನ್ನ ಪ್ಲಾಟ್ಪಾರ್ಮ್ನಲ್ಲಿ ವಿಡಿಯೋ ವೀಕ್ಷಣೆಯ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸುವ ಉದ್ದೇಶದಿಂದ ಮೈಕ್ರೊಬ್ಲಾಗಿಂಗ್ ಸೈಟ್ ಟ್ವಿಟರ್ ಹೊಸ ಬದಲಾವಣೆಗಳನ್ನು ತರುತ್ತಿದೆ. ಇಮ್ಮರ್ಸಿವ್ ವೀವಿಂಗ್ (immersive viewing), ಈಸಿ ಡಿಸ್ಕವರಿ (easy discovery) ಮತ್ತು ಎಕ್ಸ್ಪ್ಲೋರ್ನಲ್ಲಿ ಮೋರ್ ವಿಡಿಯೋಸ್ ಎಂಬ ಎರಡು ಹೊಸ ವೈಶಿಷ್ಟ್ಯತೆಗಳನ್ನು ಟ್ವಿಟರ್ ಪರಿಚಯಿಸಿದೆ. ಪ್ಲಾಟ್ಪಾರ್ಮ್ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೋಡಲು ಈ ವೈಶಿಷ್ಟ್ಯತೆಗಳು ಗ್ರಾಹಕರಿಗೆ ಅನುಕೂಲ ಮಾಡಿಕೊಡಲಿವೆ.
ವಿಡಿಯೋಗಳು ಸಾರ್ವಜನಿಕ ಸಂಭಾಷಣೆಯ ಒಂದು ದೊಡ್ಡ ಭಾಗವಾಗಿವೆ. ಎಲ್ಲಿ ಏನಾಗುತ್ತಿದೆ ಎಂಬುದನ್ನು ಹುಡುಕಲು ಮತ್ತು ವೀಕ್ಷಿಸಲು ಸುಲಭವಾಗುವಂತೆ ಸಹಾಯ ಮಾಡಲು, ಟ್ವಿಟರ್ನಲ್ಲಿ ನೀವು ವಿಡಿಯೋಗಳನ್ನು ಹೇಗೆ ಅನುಭವಿಸುತ್ತೀರಿ ಎಂಬುದರ ಕುರಿತು ನಾವು ಎರಡು ಹೊಸ ನವೀಕರಣಗಳನ್ನು ಹೊರತರುತ್ತಿದ್ದೇವೆ ಎಂದು ಟ್ವಿಟರ್ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ. ಟ್ವಿಟರ್ನ ನವೀಕರಿಸಿದ ಮೀಡಿಯಾ ವೀವರ್ಸ್ನಲ್ಲಿ ವೀಕ್ಷಕರು ಒಂದೇ ಕ್ಲಿಕ್‌ನಲ್ಲಿ ವಿಡಿಯೋಗಳನ್ನು ಪೂರ್ಣ ಪರದೆಗೆ ವಿಸ್ತರಿಸಬಹುದು.
ಇದನ್ನು ಆ್ಯಕ್ಟಿವೇಟ್ ಮಾಡಲು ಟ್ವಿಟರ್ ಅಪ್ಲಿಕೇಶನ್‌ನಲ್ಲಿ ವಿಡಿಯೋವನ್ನು ಟ್ಯಾಪ್ ಮಾಡಿ ಅಥವಾ ಕ್ಲಿಕ್ ಮಾಡಿ. ಒಮ್ಮೆ ವಿಡಿಯೋವನ್ನು ಪೂರ್ಣ-ಸ್ಕ್ರೀನ್ ಮೋಡ್‌ನಲ್ಲಿ ಪ್ರಾರಂಭಿಸಿದರೆ, ವಿಡಿಯೋ ವೀಕ್ಷಣೆಯನ್ನು ಸುಲಭಗೊಳಿಸಿದ್ದೇವೆ.