ಕರ್ನಾಟಕ

karnataka

ETV Bharat / bharat

‘ಜಮ್ಮು-ಕಾಶ್ಮೀರ, ಲಡಾಖ್​ ಭಾರತದ ಭಾಗವಲ್ಲ: ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ Twitter - ಲಡಾಖ್

ಟ್ವಿಟ್ಟರ್ ದಿನದಿಂದ ದಿನಕ್ಕೆ ಒಂದಲ್ಲ ಒಂದು ಎಡವಟ್ಟು ಮಾಡಿಕೊಳ್ಳುತ್ತಲೇ ಇದೆ. ಇದೀಗ ಜಮ್ಮು-ಕಾಶ್ಮೀರ ಮತ್ತು ಲಡಾಖ್​ ದೇಶದ ಭಾಗವಲ್ಲ ಎಂದು ತೋರಿಸಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.

ಟ್ವಿಟ್ಟರ್
ಟ್ವಿಟ್ಟರ್

By

Published : Jul 4, 2021, 12:49 PM IST

ನವದೆಹಲಿ: ಭಾರತದ ವಿಚಾರದಲ್ಲಿ ಟ್ವಿಟ್ಟರ್ ಮಾಡಿಕೊಂಡಿರುವ ಎಡವಟ್ಟು, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ತನ್ನ ವೆಬ್​ಸೈಟ್​​ನಲ್ಲಿ ಭಾರತದ ನಕ್ಷೆಯನ್ನ ತಪ್ಪಾಗಿ ಪ್ರದರ್ಶಿಸಿದ್ದು, ಜಮ್ಮು-ಕಾಶ್ಮೀರ ಮತ್ತು ಲಡಾಖ್​ ದೇಶದ ಭಾಗವಲ್ಲ ಎಂದು ತೋರಿಸಿದೆ. ಟ್ವೀಪ್​ ಲೈಫ್​ ವಿಭಾಗದ ಶೀರ್ಷಿಕೆಯಡಿಯಲ್ಲಿ ಈ ನಕ್ಷೆ ಕಾಣಿಸಲಿದೆ.

ಟ್ವಿಟ್ಟರ್​ನ ಈ ಎಡವಟ್ಟಿಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೀಪಕ್​ಕೋಖ ಎಂಬಾತ ಪ್ರತಿಕ್ರಿಯಿಸಿದ್ದು, ‘@rsprasad is @Twitter new @PMOIndia’ (ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​ ಹಾಗೂ ಪ್ರಧಾನಿ ಮೋದಿ) ಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. ದಿನೇದಿನೆ ಹಿಂದೂಸ್ತಾನಕ್ಕೆ ಅವಮಾನವಾಗುವ ಕೆಲಸ ಮಾಡ್ತಿರುವ ಟ್ವಿಟ್ಟರ್​ ಮೇಲೆ ಯಾಕೆ ಕ್ರಮ ಕೈಗೊಳ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ವಿವೇಕ್​ ಮಾನೆ ಎಂಬುವರು, ಟ್ವಿಟ್ಟರ್​ ಈ ಬಾರಿಯೂ ಕ್ಷಮೆಯಾಚಿಸಲಿ ಎಂದು ಕಾಯುತ್ತಿದ್ದೀರಾ? ಅವರ ಸ್ಥಾನ ಏನೆಂಬುದನ್ನು ಅವರಿಗೆ ತೋರಿಸಿ ಎಂದು ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.

ಟ್ವಿಟ್ಟರ್​ ಇಂಥ ಎಡವಟ್ಟುಗಳನ್ನು ಮಾಡುವುದು ಮೊದಲೇನಲ್ಲ. ಈ ಹಿಂದೆಯೂ 2020ರ ಅಕ್ಟೋಬರ್​ನಲ್ಲಿ ಲಡಾಖ್​ ಚೀನಾದ ಭಾಗ ಎಂದು ಹೇಳಿ ‘ಲೇಹ್’ ಎಂದು ಹೆಸರಿಸಿತ್ತು. ಆಗ ಭಾರತ ಸರ್ಕಾರ ಟ್ವಿಟ್ಟರ್ ಸಿಇಓ ಜಾಕ್​ ಡಾರ್ಸಿಗೆ ಎಚ್ಚರಿಕೆ ನೀಡಿ ನೋಟಿಸ್ ನೀಡಿತ್ತು.

ಇದನ್ನೂ ಓದಿ:ಐಒಎಸ್ ಟ್ವಿಟ್ಟರ್​​ ಹೊಸ ಅಪ್‌ಡೇಟ್: ಇನ್‌ಸ್ಟಾಗ್ರಾಮ್ ಸ್ಟೋರಿಗೆ ಟ್ವೀಟ್ ಶೇರಿಂಗ್ ಆಪ್ಷನ್

ABOUT THE AUTHOR

...view details