ನವದೆಹಲಿ: ಟ್ವಿಟರ್ ಇಂಡಿಯಾದ ಮುಖ್ಯಸ್ಥರಾಗಿದ್ದ ಮನೀಶ್ ಮಹೇಶ್ವರಿ ಅವರನ್ನು ಸ್ಯಾನ್ ಫ್ರಾನ್ಸಿಸ್ಕೋಗೆ ಮರು ನಿಯೋಜಿಸಲಾಗಿದೆ. ಅವರು ಕಾರ್ಯತಂತ್ರ ಮತ್ತು ಕಾರ್ಯಾಚರಣೆಗಳ ಹಿರಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಮನೀಶ್ ಮಹೇಶ್ವರಿಗೆ ಅಮೆರಿಕದ ಪ್ರಧಾನ ಕಚೇರಿಯಲ್ಲಿ ಉನ್ನತ ಹುದ್ದೆ
ಟ್ವಿಟರ್ ಇಂಡಿಯಾದ ಮುಖ್ಯಸ್ಥ ಮನೀಶ್ ಮಹೇಶ್ವರಿಯನ್ನು ಸ್ಯಾನ್ ಫ್ರಾನ್ಸಿಸ್ಕೋಗೆ ಹಿರಿಯ ನಿರ್ದೇಶಕ, ಕಂದಾಯ ಕಾರ್ಯತಂತ್ರ ಮತ್ತು ಕಾರ್ಯಾಚರಣೆಗಳ ಜವಾಬ್ದಾರಿ ವಹಿಸಿ ನಿಯೋಜಿಸಲಾಗಿದೆ.
ಮನೀಶ್ ಮಹೇಶ್ವರಿಗೆ ಅಮೆರಿಕದ ಪ್ರಧಾನ ಕಚೇರಿಯಲ್ಲಿ ಉನ್ನತ ಹುದ್ದೆ
ಈ ಸಂಬಂಧ ಜಪಾನ್, ದಕ್ಷಿಣ ಕೊರಿಯಾ ಮತ್ತು ಏಷ್ಯಾ ಪೆಸಿಫಿಕ್ ವಿಭಾಗದ ಉಪಾಧ್ಯಕ್ಷ ಯು ಸಸಮೊಟೊ ಟ್ವೀಟ್ ಮಾಡಿದ್ದಾರೆ. ಮನೀಶ್ ಮಹೇಶ್ವರಿ ಟ್ವಿಟರ್‌ನಲ್ಲಿಯೇ ಉಳಿದುಕೊಂಡಿದ್ದಾರೆ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಹೊಸ ಹುದ್ದೆಗೆ ಹೋಗುತ್ತಿದ್ದಾರೆ ಎಂದಿದ್ದಾರೆ.
ಟ್ವಿಟರ್ ಕಂಪನಿಯು ಭಾರತ ಸರ್ಕಾರದೊಂದಿಗಿನ ಘರ್ಷಣೆಯ ನಡುವೆ ಮತ್ತು ಇತ್ತೀಚಿನ ವಿರೋಧಗಳ ನಡುವೆಯೇ ಈ ಸುದ್ದಿ ಹೊರ ಬಿದ್ದಿದೆ.