ನವದೆಹಲಿ:ಬಿಲಿಯೇನರ್ ಎಲೋನ್ ಮಸ್ಕ್ ಅಧಿಕಾರ ವಹಿಸಿಕೊಂಡ ಒಂದೇ ತಿಂಗಳಲ್ಲಿ ಭಾರತದಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ನಗ್ನತೆಯನ್ನು ಉತ್ತೇಜಿಸುವ 44,611 ಖಾತೆಗಳನ್ನು ಟ್ವಿಟರ್ ರದ್ದು ಮಾಡಿದೆ.
ಈ ಹಿಂದೆ ಆಗಸ್ಟ್ 26ರಿಂದ ಸೆಪ್ಟೆಂಬರ್ 25ರ ನಡುವಿನ ಅವಧಿಯಲ್ಲೂ ಮಕ್ಕಳ ಲೈಂಗಿಕ ಶೋಷಣೆ ಉತ್ತೇಜಿಸುತ್ತಿದ್ದ 52,141 ಖಾತೆಗಳನ್ನು ರದ್ದು ಟ್ವಿಟರ್ ಮಾಡಿತ್ತು. ಇದೀಗ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 25ರ ನಡುವೆ ಇಂತಹ 44,611 ಖಾತೆಗಳ ಮೇಲೆ ಟ್ವಿಟರ್ ನಿಷೇಧ ಹೇರಿದೆ. ಅಲ್ಲದೇ, ಭಯೋತ್ಪಾದನೆಯನ್ನು ಉತ್ತೇಜಿಸುವ 4,014 ಖಾತೆಗಳನ್ನೂ ಟ್ವಿಟರ್ ತೆಗೆದುಹಾಕಿದೆ.