ಚಂಡೀಗಢ(ಪಂಜಾಬ್):ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಜೊತೆ ನಿನ್ನೆಯಷ್ಟೇ ಗುರುಪ್ರೀತ್ ಕೌರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದರ ಬೆನ್ನಲ್ಲೇ ಅವರು ಬಳಕೆ ಮಾಡುತ್ತಿದ್ದ ಟ್ವಿಟರ್ ಖಾತೆ ಅಮಾನತುಗೊಳಿಸಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಟ್ವಿಟರ್ ಖಾತೆಯಲ್ಲಿ 'ಸಮುದಾಯ ಮಾನದಂಡ ಉಲ್ಲಂಘನೆ' ಮಾಡಿದ್ದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಚಂಡೀಗಢದ ಆನಂದ್ ಕರಾಜ್ನಲ್ಲಿ ನಡೆದ ಸಮಾರಂಭದಲ್ಲಿ ಹರಿಯಾಣದ ಡಾ. ಗುರುಪ್ರೀತ್ ಕೌರ್ ಸಿಎಂ ಭಗವಂತ್ ಮಾನ್ ಅವರೊಂದಿಗೆ ವಿವಾಹವಾದರು. ತಮ್ಮ ಮದುವೆಯ ಅನೇಕ ಚಿತ್ರ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಈ ಬೆಳವಣಿಗೆ ಕಂಡು ಬಂದಿದೆ. ಕೆಲವೊಂದು ಮಾಹಿತಿಗಳ ಪ್ರಕಾರ ಇದು ಫೇಕ್ ಅಕೌಂಟ್ ಎಂದು ಹೇಳಲಾಗುತ್ತಿದೆ.