ಕರ್ನಾಟಕ

karnataka

ETV Bharat / bharat

ಸಕಾಲದಲ್ಲಿ ಸಿಗದ ಆರೋಗ್ಯ ಸೇವೆ: ಗರ್ಭಿಣಿ ಹೊತ್ತೊಯ್ಯುತ್ತಿದ್ದಾಗ ಅವಳಿ ಮಕ್ಕಳು ಸಾವು

ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೋರ್ವಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಸಕಾಲದಲ್ಲಿ ಚಿಕಿತ್ಸೆ ಸಿಗದ ಮಕ್ಕಳು ಸಾವನ್ನಪ್ಪಿವೆ.

pregnant woman in Palghar
pregnant woman in Palghar

By

Published : Aug 16, 2022, 5:38 PM IST

ಪಾಲ್ಘರ್​(ಮಹಾರಾಷ್ಟ್ರ): ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದರೂ ಇನ್ನೂ ಅನೇಕ ಕಡೆಗಳಲ್ಲಿ ಜನರಿಗೆ ಸರಿಯಾದ ರಸ್ತೆ ಸಂಪರ್ಕ, ಆರೋಗ್ಯ ಸೇವೆ ಮರೀಚಿಕೆಯಾಗಿದೆ. ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಗರ್ಭಿಣಿಯೊಬ್ಬರು ನರಕಯಾತನೆ ಅನುಭವಿಸಿದ್ದು ಇದಕ್ಕೊಂದು ಹೊಸ ಉದಾಹರಣೆಯಷ್ಟೇ. ಪಾಲ್ಘರ್​​ನ ಬೋಟೋಶಿ ಗ್ರಾಮ ಪಂಚಾಯ್ತಿಯ ಮರ್ಕಟವಾಡಿಯಲ್ಲಿ ಈ ಘಟನೆ ನಡೆಯಿತು.

ತುರ್ತು ಆರೋಗ್ಯ ಸಮಸ್ಯೆಯಾದರೆ ರೋಗಿಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ಸರಿಯಾದ ರಸ್ತೆ ಸಂಪರ್ಕ ಇಲ್ಲಿಲ್ಲ. ಇದರ ಪರಿಣಾಮ, ರೋಗಿಗಳನ್ನು ಮೂರು ಕಿಲೋ ಮೀಟರ್ ನಡೆದುಕೊಂಡೇ ಸಾಗಿಸಬೇಕಾದ ದುಸ್ಥಿತಿ ಇದೆ.

ಗರ್ಭಿಣಿ ಹೊತ್ತೊಯ್ಯುತ್ತಿದ್ದಾಗ ಅವಳಿ ಮಕ್ಕಳು ಸಾವು

ಇದನ್ನೂ ಓದಿ:ಆರೋಗ್ಯ ಕೇಂದ್ರಕ್ಕೆ ಬೀಗ.. ಕಾಂಪೌಂಡ್​​ ಪಕ್ಕದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ವಿಪರೀತ ಹೆರಿಗೆ ನೋವಿನಿಂದ ಬಳಲುತ್ತಿದ್ದ ವಂದನಾ ಎಂಬುವವರನ್ನು ಗ್ರಾಮಸ್ಥರು ಹೆಗಲ ಮೇಲೆ ಹೊತ್ತುಕೊಂಡು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಆಕೆಗೆ ಹೆರಿಗೆಯಾಗಿದ್ದು, ಅವಳಿ ಮಕ್ಕಳು ದಾರುಣ ಸಾವನ್ನಪ್ಪಿವೆ. ಸಕಾಲಕ್ಕೆ ಆರೋಗ್ಯ ಸೇವೆ ಸಿಗದಿರುವುದಕ್ಕೆ ಶಿಶುಗಳು ಪ್ರಾಣ ಕಳೆದುಕೊಂಡಿವೆ ಎಂದು ಕುಟುಂಬಸ್ಥರು ತೀವ್ರ ಬೇಸರ ವ್ಯಕ್ತಪಡಿಸಿದರು.

ABOUT THE AUTHOR

...view details