ಗಾಜಿಯಾಬಾದ್:9ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ಅವಳಿ ಮಕ್ಕಳು ಬಾಲ್ಕನಿಯಲ್ಲಿ ಆಟವಾಡುತ್ತಿದ್ದ ವೇಳೆ 25ನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಮನಕಲಕುವ ಘಟನೆ ಉತ್ತರ ಪ್ರದೇಶ- ನವದೆಹಲಿ ಗಡಿಭಾಗವಾದ ಗಾಜಿಯಾಬಾದ್ನಲ್ಲಿ ನಡೆದಿದೆ.
ಗಾಜಿಯಾಬಾದ್ನ ಸಿದ್ಧಾರ್ಥ್ ವಿಹಾರದಲ್ಲಿರುವ ಅಪಾರ್ಟ್ಮೆಂಟ್ನ 25ನೇ ಮಹಡಿಯಲ್ಲಿ ಅವಳಿ ಮಕ್ಕಳಾದ ಸತ್ಯನಾರಾಯಣ ಮತ್ತು ಸೂರ್ಯನಾರಾಯಣ ತಮ್ಮ ಪೋಷಕರೊಂದಿಗೆ ವಾಸವಾಗಿದ್ದರು. ಮಕ್ಕಳ ತಂದೆ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದು, ತಡರಾತ್ರಿ ತಾಯಿಯ ಕಣ್ಣು ತಪ್ಪಿಸಿ ಬಾಲ್ಕನಿಯಲ್ಲಿ ಮಕ್ಕಳು ಆಟವಾಡಲು ಆರಂಭಿಸಿದ್ದಾರೆ. ಈ ವೇಳೆ ಆಯತಪ್ಪಿ ಬಾಲ್ಕನಿಯಿಂದ ಕೆಳಗೆ ಬಿದ್ದಿದ್ದಾರೆ.
ಇದನ್ನೂ ಓದಿ:ಟೆರೆಸ್ನಲ್ಲಿ ಮಕ್ಕಳು ಆಡುವಾಗ ಎಚ್ಚರ: ಬೆಂಗಳೂರಲ್ಲಿ 11ನೇ ಮಹಡಿಯಿಂದ ಬಿದ್ದು ಬಾಲಕ ಸಾವು