ಛಿಂದವಾಡಾ (ಮಧ್ಯ ಪ್ರದೇಶ) : ವಿವಾಹ ಬಂಧನಗಳು ಸ್ವರ್ಗದಲ್ಲಿ ನಿರ್ಧಾರವಾಗಿರುತ್ತವೆ ಎಂದು ಹೇಳಲಾಗುತ್ತದೆ. ಈ ನಂಬಿಕೆ ಸತ್ಯ ಎನಿಸುವ ಪ್ರಸಂಗವೊಂದು ಮಧ್ಯ ಪ್ರದೇಶದ ಛಿಂದ್ವಾರಾದಲ್ಲಿ ನಡೆದಿದೆ. ಅವಳಿ ಸಹೋದರಿಯರು ಅವಳಿ ಸಹೋದರರನ್ನು ಮದುವೆಯಾಗಿರುವ ಅಪರೂಪದ ಘಟನೆ ಇಲ್ಲಿ ನಡೆದಿದೆ. ಚಿಂದ್ವಾರಾದ ಧಿಮ್ರಿ ಪ್ರದೇಶದಲ್ಲಿ, ಅವಳಿ ವಧು-ವರರು ವಿವಾಹ ಸಂಪ್ರದಾಯಗಳಲ್ಲಿ ಪಾಲ್ಗೊಳ್ಳಲು ಮದುವೆಯ ಮೆರವಣಿಗೆಯಲ್ಲಿ ಆಗಮಿಸಿದರು. ಹೂಮಾಲೆಗಳನ್ನು ಬದಲಾಯಿಸಿಕೊಂಡು ಪವಿತ್ರ ಅಗ್ನಿಯ ಸುತ್ತಲೂ ಏಳು ಸುತ್ತು ನಡೆದರು. ಅವಳಿ ಜೋಡಿಗಳ ಮದುವೆ ನೋಡಲು ಬಂದಿದ್ದ ಜನರಲ್ಲೂ ಭಾರಿ ಉತ್ಸಾಹ ಕಂಡು ಬಂದಿತು.
ಅವಳಿ ಸಹೋದರಿಯರಾದ ಲತಾ ಮತ್ತು ಲಕ್ಷ್ಮಿ, ನಾಗಪುರ ನಿವಾಸಿ ಅವಳಿ ಸಹೋದರರಾದ ಅಮನ್ ಮತ್ತು ರಿಷಭ್ ಅವರನ್ನು ವಿವಾಹವಾದರು. ಮದುವೆ ಮೆರವಣಿಗೆ ಬಂದಾಗ, ಲತಾ ಅಮನ್ ಅವರಿಗೆ ಮತ್ತು ಲಕ್ಷ್ಮಿ ರಿಷಭ್ ಅವರಿಗೆ ಮಾಲೆ ಹಾಕಿದರು. ಎರಡೂ ಅವಳಿಗಳ ಅಭ್ಯಾಸಗಳು ಮತ್ತು ನೋಟಗಳು ಒಂದೇ ರೀತಿಯಾಗಿರುವುದು ಕಂಡು ಬಂದಿತು.
ಅವಳಿ ಸಹೋದರರನ್ನು ಮದುವೆಯಾದ ಅವಳಿ ಸಹೋದರಿಯರು ಇದೇ ಮೊದಲ ಬಾರಿಗೆ ಅವಳಿ ಜೋಡಿಗಳ ವಿವಾಹಕ್ಕೆ ಮಂತ್ರಗಳನ್ನು ಪಠಿಸುತ್ತಿದ್ದೇನೆ ಎಂದು ಮದುವೆ ನೆರವೇರಿಸಿದ ಪಂಡಿತರು ಹೇಳಿದರು. ಸುಮಾರು 1,000 ವಿವಾಹಗಳನ್ನು ನಡೆಸಿರುವ ಪಂಡಿತ್ ಪ್ರದೀಪ್ ದ್ವಿವೇದಿ, ವಧು-ವರರಿಬ್ಬರೂ ಅವಳಿಯಾಗಿರುವ ಇಂಥ ದಾಂಪತ್ಯಕ್ಕೆ ತಾವು ಪ್ರಥಮ ಬಾರಿಗೆ ಮಂತ್ರಗಳನ್ನು ಪಠಿಸುತ್ತಿರುವುದಾಗಿ ಹೇಳಿದರು.
ಅವಳಿ ಸಹೋದರಿಯರು ಮತ್ತು ಅವಳಿ ಸಹೋದರರು ಮದುವೆಯಾಗುವುದು ಅಪರೂಪವಾಗಿದ್ದು, ದೇವರೇ ಈ ಜೋಡಿಯನ್ನು ನಿರ್ಧಾರ ಮಾಡಿದಂತೆ ಕಾಣಿಸುತ್ತದೆ ಎಂದು ಪಂಡಿತರು ಹೇಳಿದರು. ವಾರ್ಡ್ ನಂ.29 ಧಿಮ್ರಿ ಮೊಹಲ್ಲಾದ ನಿವಾಸಿಯಾಗಿರುವ ಕೈಲಾಶ್ ಕಹಾರ್ ತಮ್ಮ ಅವಳಿ ಹೆಣ್ಣುಮಕ್ಕಳು ಅವಳಿ ಸಹೋದರರೊಂದಿಗೆ ವಿವಾಹವಾಗುತ್ತಿರುವುದಕ್ಕೆ ಭಾರಿ ಖುಷಿಯಾಗಿದ್ದಾರೆ. ಹುಟ್ಟಿನಿಂದಲೇ ಇಬ್ಬರು ಸಹೋದರಿಯರು ಯಾವತ್ತಿಗೂ ಬೇರೆಯಾಗಿ ವಾಸಿಸಿಲ್ಲ. ಈಗ ಮದುವೆಯ ನಂತರವೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಅವಳಿ ಸಹೋದರಿಯರ ಕಿರಿಯ ಸಹೋದರ ಸೂರಜ್ ಕಹರ್ ಹೇಳಿದ್ದಾರೆ.
ಅವಳಿ ಸಹೋದರರನ್ನು ಮದುವೆಯಾದ ಅವಳಿ ಸಹೋದರಿಯರು ಮಹಾರಾಷ್ಟ್ರದ ನಾಗ್ಪುರದಲ್ಲಿ ಬಾಲ್ಯವಿವಾಹ ತಡೆದ ಅಧಿಕಾರಿಗಳು: ಇಲ್ಲಿಗೆ ಹತ್ತಿರದ ಧಂತೋಳಿಯ ಟಕಿಯಾದಲ್ಲಿ ನಡೆಯಬೇಕಿದ್ದ 17 ವರ್ಷದ ಬಾಲಕಿಯ ವಿವಾಹವನ್ನು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿರುವ ಮಕ್ಕಳ ರಕ್ಷಣಾ ಸಮಿತಿ ತಡೆಗಟ್ಟಿದೆ. ಎನ್‌ಜಿಒ ಚೈಲ್ಡ್‌ಲೈನ್ ಕೂಡ ಬಾಲ್ಯ ವಿವಾಹವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಪ್ರಾಪ್ತ ಬಾಲಕಿಯ ವಿವಾಹವನ್ನು ಭಾನುವಾರ ಮದುವೆಯನ್ನು ಭಾನುವಾರ ನಡೆಸಲು ನಿರ್ಧರಿಸಲಾಗಿತ್ತು ಎಂದು ತಿಳಿದು ಬಂದಿದೆ. ಆದರೆ ಈ ಮದುವೆ ಅಕ್ರಮವಾಗಿ ನಡೆಯುತ್ತಿರುವ ಬಗ್ಗೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗಮನಕ್ಕೆ ಬಂದಿತ್ತು.
ಮದುವೆ ನಡೆಯುವ ಸಮಯದಲ್ಲಿ ಎನ್‌ಜಿಒ ಚೈಲ್ಡ್‌ಲೈನ್ ಸದಸ್ಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಮುಷ್ತಾಕ್ ಪಠಾಣ್ ಧಾಂತೋಳಿ ಪೊಲೀಸರ ನೇತೃತ್ವದಲ್ಲಿ ದಾಳಿ ನಡೆಸಿ ಮದುವೆಯನ್ನು ತಡೆದರು. ಎನ್‌ಜಿಒದ ಮೀನಾಕ್ಷಿ ದಢಾಡೆ, ಪೂಜಾ ಕಾಂಬಳೆ, ರೂಪಾಲಿ ಪಟೂರಕರ್ ಮತ್ತು ಇತರರು ಕಾರ್ಯಾಚರಣೆಯ ಸಮಯದಲ್ಲಿ ಪೊಲೀಸರಿಗೆ ಸಹಾಯ ಮಾಡಿದರು.
ಇದನ್ನೂ ಓದಿ : Mumbai crime: ಚಾಕು, ಬ್ಲೇಡ್ನಿಂದ ಯುವತಿಯ ಮೇಲೆ ಹಲ್ಲೆ, 46ಕ್ಕೂ ಹೆಚ್ಚು ಹೊಲಿಗೆ: ನಾಯಿಗಳಿಗೆ ಆಹಾರ ಹಾಕಿದ್ದಕ್ಕೆ ಅಟ್ಯಾಕ್!