ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಮನೆಗೆ ಹೊಸ ಅತಿಥಿಗಳ ಸೇರ್ಪಡೆಯಾಗಿದೆ. ಪುತ್ರಿ ಇಶಾ ಅಂಬಾನಿ ಇಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಇಶಾ ಅವರು ಗಂಡು ಮತ್ತು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಇಶಾ ಮತ್ತು ಅವರ ಪತಿ ಕೈಗಾರಿಕೋದ್ಯಮಿ ಆನಂದ್ ಪಿರಾಮಲ್ ಅವರು ಫೋಷಕರಾಗಿರುವ ಬಗ್ಗೆ ಅಂಬಾನಿ ಕುಟುಂಬ ಅಧಿಕೃತ ಮಾಹಿತಿ ನೀಡಿದೆ.
"ಇಶಾ ಮತ್ತು ಆನಂದ್ ಅವರು 19 ನವೆಂಬರ್ 2022 ರಂದು ಅವಳಿ ಮಕ್ಕಳ ಪೋಷಕರಾಗಿದ್ದಾರೆ. ಅವರು ಸರ್ವ ಶಕ್ತರಿಂದ ಆಶೀರ್ವದಿಸಲ್ಪಟ್ಟಿದ್ದಾರೆ ಎಂದು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ. ಹೆಣ್ಣು ಮಗು ಆದಿಯಾ, ಗಂಡು ಮಗು ಕೃಷ್ಣ ಸೇರಿ ಇಶಾ ಆರೋಗ್ಯವಾಗಿದ್ದಾರೆ. ಇಶಾ ಮತ್ತು ಆನಂದ್ ಅವರ ಜೀವನದ ಈ ಪ್ರಮುಖ ಹಂತದಲ್ಲಿ ನಾವು ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ಬಯಸುತ್ತೇವೆ" ಎಂದು ಅಂಬಾನಿ ಕುಟುಂಬ ತಿಳಿಸಿದೆ. ಹೇಳಿಕೆಯಲ್ಲಿ ಮಕ್ಕಳು ಎಲ್ಲಿ ಜನಿಸಿದರು ಎಂಬುದನ್ನು ಉಲ್ಲೇಖಿಸದಿದ್ದರೂ, ಯುಎಸ್ನಲ್ಲಿ ಹೆರಿಗೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಗುಜರಾತ್ ಸೋಮನಾಥ ದೇವಾಲಯಕ್ಕೆ ಪ್ರಧಾನಿ ಮೋದಿ ಭೇಟಿ, ವಿಶೇಷ ಪೂಜೆ ಸಲ್ಲಿಕೆ