ಕರ್ನಾಟಕ

karnataka

ETV Bharat / bharat

ಟಿವಿ ಚರ್ಚೆಗಳು ಹೆಚ್ಚು ಮಾಲಿನ್ಯ ಸೃಷ್ಟಿಸುತ್ತಿವೆ: ಸುಪ್ರೀಂಕೋರ್ಟ್

ಟಿವಿ ಸುದ್ದಿ ವಾಹಿನಿಗಳಲ್ಲಿನ ಚರ್ಚೆಗಳು ಎಲ್ಲಕ್ಕಿಂತಲೂ ಹೆಚ್ಚು ಮಾಲಿನ್ಯ ಉಂಟು ಮಾಡುತ್ತಿದ್ದು, ಅವರಿಗೆ ಏನಾಗುತ್ತಿದೆ ಹಾಗೂ ಏನು ಸಮಸ್ಯೆ ಎಂಬುದೇ ಅರ್ಥವಾಗುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಮಾಲಿನ್ಯ ಕಡಿಮೆ ಮಾಡಬೇಕಾಗಿರುವ ಜವಾಬ್ದಾರಿ ನಮ್ಮ ಮೇಲಿದೆ. ಪರಿಹಾರ ಕಂಡುಕೊಳ್ಳುವತ್ತ ಗಮನಹರಿಸಬೇಕು ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿತು.

SC
SC

By

Published : Nov 17, 2021, 4:08 PM IST

ನವದೆಹಲಿ:ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ ವಾಯು ಗುಣಮಟ್ಟ (Delhi Air pollution) ಸಂಪೂರ್ಣವಾಗಿ ಹಾಳಾಗಿದ್ದು, ನಿಯಂತ್ರಣಕ್ಕಾಗಿ ದೆಹಲಿ ಸರ್ಕಾರ ಈಗಾಗಲೇ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದೆ. ಇದೇ ವಿಚಾರವಾಗಿ ಸುಪ್ರೀಂಕೋರ್ಟ್​ ಕೂಡ ಕಳವಳ ವ್ಯಕ್ತಪಡಿಸಿದ್ದು, ಟಿವಿಯಲ್ಲಿನ ಚರ್ಚೆಗಳು ಹೆಚ್ಚು ಮಾಲಿನ್ಯಕ್ಕೆ ಕಾರಣವಾಗುತ್ತಿವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿರುವ ಕಾರಣದಿಂದಾಗಿ ಕಳೆದ ಸೋಮವಾರದಿಂದಲೇ ಒಂದು ವಾರ ಶಾಲೆಗಳನ್ನು ಬಂದ್​ ಮಾಡಲಾಗಿದೆ. ಸರ್ಕಾರಿ ಕಚೇರಿ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ನಿರ್ವಹಣೆ (Work from Home) ಮಾಡಲು ಸೂಚನೆ ನೀಡಲಾಗಿದೆ. ಇದರ ಬೆನ್ನಲ್ಲೇ ಸುಪ್ರೀಂಕೋರ್ಟ್ (Supreme Court on Delhi Pollution)​​ ಕೂಡ ಇದೇ ವಿಚಾರವಾಗಿ ಕೇಜ್ರಿವಾಲ್​ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಸುಪ್ರೀಂಕೋರ್ಟ್​ ಇಂದು ಕೂಡ ತನ್ನ ಅಭಿಪ್ರಾಯ ಹೊರಹಾಕಿದ್ದು, ಕೃಷಿ ತಾಜ್ಯ ಸುಡುವುದರಿಂದ ದೆಹಲಿ ವಾಯುಮಾಲಿನ್ಯ ಹದಗೆಡುತ್ತಿದೆ ಎಂಬುವುದಾದರೆ ರಾಜ್ಯ ಸರ್ಕಾರ ರೈತರ ಮನವೊಲಿಕೆ ಮಾಡಬೇಕು. ನಾವು ರೈತರಿಗೆ ದಂಡ ಹಾಕಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ (Justice N.V. Ramana) ತಿಳಿಸಿದರು.

ಇದನ್ನೂ ಓದಿ:ASER Report: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಗಣನೀಯ ಏರಿಕೆ, ಕಾರಣ ಇಲ್ಲಿದೆ..

ಇಂದಿನ ದಿನಮಾನಗಳಲ್ಲಿ ಟಿವಿಯಲ್ಲಿ ನಡೆಯುವ ಚರ್ಚೆಗಳೇ ಇತರ ಮೂಲಗಳಿಗಿಂತಲೂ ಹೆಚ್ಚು ಮಾಲಿನ್ಯ ಉಂಟು ಮಾಡುತ್ತಿವೆ. ಕೃಷಿ ತ್ಯಾಜ್ಯ ಸುಡುವಿಕೆಗೆ ಸಂಬಂಧಿಸಿದಂತೆ ಅಂಕಿ-ಅಂಶಗಳ ಕುರಿತಾಗಿ ದೆಹಲಿ ಸರ್ಕಾರ ಹಾಗೂ ಕೇಂದ್ರದ ಹೇಳಿಕೆಯಿಂದ ಅಸಮಾಧಾನಗೊಂಡಿರುವ ಮುಖ್ಯ ನ್ಯಾಯಮೂರ್ತಿ ಈ ಮೇಲಿನಂತೆ ಅಸಮಾಧಾನ ವ್ಯಕ್ತಪಡಿಸಿದರು.

ಟಿವಿ ಸುದ್ದಿ ವಾಹಿನಿಗಳಲ್ಲಿನ ಚರ್ಚೆಗಳು ಎಲ್ಲಕ್ಕಿಂತಲೂ ಹೆಚ್ಚು ಮಾಲಿನ್ಯ ಉಂಟು ಮಾಡುತ್ತಿದ್ದು, ಅವರಿಗೆ ಏನಾಗುತ್ತಿದೆ ಹಾಗೂ ಏನು ಸಮಸ್ಯೆ ಎಂಬುದೇ ಅರ್ಥವಾಗುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಮಾಲಿನ್ಯ ಕಡಿಮೆ ಮಾಡಬೇಕಾಗಿರುವ ಜವಾಬ್ದಾರಿ ನಮ್ಮ ಮೇಲಿದೆ. ಪರಿಹಾರ ಕಂಡುಕೊಳ್ಳುವತ್ತ ಗಮನಹರಿಸಬೇಕು ಎಂದರು.

ದೆಹಲಿ ಸರ್ಕಾರದ (Delhi Government) ಪರ ಹಿರಿಯ ವಕೀಲ ಅಭಿಷೇಕ್​ ಮನು ಸಿಂಘ್ವಿ ವಾದ ಮಂಡನೆ ಮಾಡಿದ್ದು, ಈ ವೇಳೆ ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ಸುಪ್ರೀಂಕೋರ್ಟ್‌ಗೆ ವಿವರಿಸಿದರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಟಿವಿ ಚರ್ಚೆಯಲ್ಲಿನ ಕೆಲವು ಅಂಶಗಳನ್ನು ಉಲ್ಲೇಖಿಸಿದರು.

ABOUT THE AUTHOR

...view details