ಕರ್ನಾಟಕ

karnataka

ETV Bharat / bharat

ಯುವತಿಗೆ ಕಿರುಕುಳ: ಧಾರಾವಾಹಿ ನಟ ಪ್ರಚೀನ್​ ಚೌಹಾನ್​ ಬಂಧನ - ಟಿವಿ ನಟ ಪ್ರಚೀನ್​​ ಚೌಹಾನ್​​ ವಿರುದ್ಧ ಪ್ರಕರಣ

22 ವರ್ಷದ ಯುವತಿಯೋರ್ವಳಿಗೆ ಕಿರುಕುಳ ನೀಡಿರುವ ಆರೋಪದ ಮೇಲೆ ಧಾರಾವಾಹಿ ನಟನ ಬಂಧನ ಮಾಡುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ.

TV actor Pracheen
TV actor Pracheen

By

Published : Jul 3, 2021, 3:16 PM IST

ಮುಂಬೈ:ಯುವತಿಯೋರ್ವಳಿಗೆ ಕಿರುಕುಳ ನೀಡಿರುವ ಆರೋಪದ ಮೇಲೆ ಧಾರಾವಹಿ ನಟ ಪ್ರಚೀನ್​​ ಚೌಹಾನ್​​ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನ ಬಂಧನ ಮಾಡುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಸೌತಿ ಜಿಂದಗಿ ಕೇ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟನೆ ಮಾಡಿರುವ ಈ ನಟನ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಅದರ ಆಧಾರದ ಮೇಲೆ ಬಂಧನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿರುದ್ಧ ಸೆಕ್ಷನ್​ 354, 323, ಹಾಗೂ 506 ಅಡಿ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.

ಇದನ್ನೂ ಓದಿರಿ: COVIDಗೆ ಮನೆಯಲ್ಲಿಯೇ ರಾಮಬಾಣ: ಅಕ್ಕಿ ತೊಳೆದ ನೀರಿನಲ್ಲಿದೆಯಂತೆ ಔಷಧೀಯ ಗುಣ!

ಲಭ್ಯವಾಗಿರುವ ಮಾಹಿತಿ ಪ್ರಕಾರ ಕುಡಿದ ಅಮಲಿನಲ್ಲಿ 22 ವರ್ಷದ ಮಹಿಳೆ ಜತೆ ಅಸಭ್ಯವಾಗಿ ನಡೆದುಕೊಂಡಿದ್ದು, ಇದೇ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಬಂಧನದ ವೇಳೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದಾರೆಂದು ಹೇಳಲಾಗುತ್ತಿದೆ.

ABOUT THE AUTHOR

...view details