ಕರ್ನಾಟಕ

karnataka

ETV Bharat / bharat

ಕೇಂದ್ರ ಸಚಿವ ಸಂಪುಟ ಪುನಾರಚನೆ ಕರಸತ್ತು: ಜೆಡಿಯು-ಬಿಜೆಪಿ ನಡುವೆ ಮಂತ್ರಿಗಿರಿಗಾಗಿ ಜಟಾಪಟಿ - ಕೇಂದ್ರ ಸಚಿವ ಸಂಪುಟ

2019 ರಲ್ಲಿ ನರೇಂದ್ರ ಮೋದಿ ಸರ್ಕಾರ ರಚನೆಯಾದ ನಂತರ ಬಿಜೆಪಿ-ಜೆಡಿಯುಗೆ ಕ್ಯಾಬಿನೆಟ್​​ನಲ್ಲಿ ಒಂದು ಸ್ಥಾನವನ್ನು ನೀಡಲಾಗಿತ್ತು. ಆದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ಪ್ರಸ್ತಾಪವನ್ನು ಸಾಂಕೇತಿಕ ಪ್ರಾತಿನಿಧ್ಯ ಎಂದು ತಿರಸ್ಕರಿಸಿದ್ದರು. ಇದೀಗ ಮತ್ತೊಮ್ಮೆ ಜಟಾಪಟಿ ಶುರುವಾಗಿದೆ.

tussle-for-union-cabinet-berth-between-jdu-and-bjp-in-bihar
ಜೆಡಿಯು-ಬಿಜೆಪಿ ನಡುವೆ ಮಂತ್ರಿಗಿರಿಗಾಗಿ ಜಟಾಪಟಿ

By

Published : Jun 19, 2021, 10:31 PM IST

ಪಾಟ್ನಾ (ಬಿಹಾರ್): ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ಮಾತುಕತೆ ನಡೆಯುತ್ತಿರುವ ನಡುವೆ ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ನಡುವಿನ ಒಳಜಗಳ ತೀವ್ರಗೊಂಡಿದೆ. ಮೈತ್ರಿ ಪಕ್ಷಗಳ ನಡುವೆ ಇದೀಗ ಪ್ರತಿಷ್ಠೆಯ ಸವಾಲು ಎದುರಾಗಿದೆ. ಈ ನಡುವೆ ಜೆಡಿಯು ನಾಯಕ ಆರ್​ಸಿಪಿ ಸಿಂಗ್​​ ಕೇಂದ್ರ ಸಂಪುಟದಲ್ಲಿ ಜೆಡಿಯು ಸಂಸದರಿಗೆ ಉತ್ತಮ ಸ್ಥಾನ ಸಿಗಬೇಕು ಎಂಬ ಹೇಳಿಕೆ ನೀಡಿದ್ದರು.

ಆದರೆ ಈ ನಡುವೆ ಜೆಡಿಯುನಲ್ಲಿ ಉಂಟಾದ ಗೊಂದಲ ಹಾಗೂ ಪಶುಪತಿ ಕುಮಾರ್ ಪರಾಸ್ ಅವರ ಬಂಡಾಯ ಹಿನ್ನೆಲೆ ಕೇಂದ್ರದಿಂದ ಪಕ್ಷದ ಬಗ್ಗೆ ಒಲವು ಹೆಚ್ಚಾಗಿ ಉಳಿದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಸ್ವತಃ ಅವರೇ ಕೇಂದ್ರದ ಸಚಿವ ಸ್ಥಾನ ಪಡೆಯುವ ಬಗ್ಗೆ ಸುಳಿವು ನೀಡಿದ್ದರು. ಅಲ್ಲದೆ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾದ ನಂತರ ಸಂಸದೀಯ ಮಂಡಳಿಯ ಅಧ್ಯಕ್ಷ ಹುದ್ದೆಯನ್ನು ತೊರೆಯುವುದಾಗಿ ಪರಾಸ್ ಒತ್ತಿ ಹೇಳಿದ್ದರು. ಆದರೆ ಪಕ್ಷ ಬೇಡಿಕೆ ಇಟ್ಟಿದ್ದ ಅನುಪಾತದಲ್ಲಿ ಮಂತ್ರಿಗಿರಿ ಒಲಿಯುವುದು ಕಷ್ಟ ಎಂಬಂತಾಗಿದೆ.

2019 ರಲ್ಲಿ ನರೇಂದ್ರ ಮೋದಿ ಸರ್ಕಾರ ರಚನೆಯಾದ ನಂತರ ಬಿಜೆಪಿ ಜೆಡಿಯುಗೆ ಕ್ಯಾಬಿನೆಟ್​​ನಲ್ಲಿ ಒಂದು ಸ್ಥಾನವನ್ನು ನೀಡಲಾಗಿತ್ತು. ಆದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ಪ್ರಸ್ತಾಪವನ್ನು ಸಾಂಕೇತಿಕ ಪ್ರಾತಿನಿಧ್ಯ ಎಂದು ತಿರಸ್ಕರಿಸಿದ್ದರು. ಎರಡು ವರ್ಷಗಳ ನಂತರ ಜೆಡಿಯು ಮತ್ತು ಬಿಜೆಪಿ ಮುಂದೆ ಇದೇ ರೀತಿಯ ಪರಿಸ್ಥಿತಿ ಉದ್ಭವಿಸಿದೆ. ಆದರೆ ಜೆಡಿಯು ಮೂರು ಕ್ಯಾಬಿನೆಟ್​ ಹಾಗೂ ಎರಡು ರಾಜ್ಯ ಖಾತೆಗಳ ಬೇಡಿಕೆ ಇರಿಸಿದೆ ಎನ್ನಲಾಗುತ್ತಿದೆ.

ಜೆಡಿಯು ಮತ್ತು ಬಿಜೆಪಿ ಒಟ್ಟಾಗಿ ರಾಜ್ಯದ 33 ಸಂಸದರನ್ನು ಹೊಂದಿದೆ. ಈ ಆಧಾರದ ಮೇಲೆ ಬಿಹಾರದಿಂದ ಐವರು ಮಂತ್ರಿ ಸ್ಥಾನ ಗಿಟ್ಟಿಸಿದ್ದಾರೆ. ಆದರೆ ಮಂತ್ರಿ ಸ್ಥಾನ ಏರಿದರವಲ್ಲಿ ಐವರು ಬಿಜೆಪಿ ಅವರೇ ಆಗಿದ್ದು, ಈಗ ಮಂತ್ರಿ ಸ್ಥಾನಕ್ಕಾಗಿ ಜೆಡಿಯು ಕಡೆಯಿಂದ ಬೇಡಿಕೆ ಹೆಚ್ಚಾಗಿದೆ.

ABOUT THE AUTHOR

...view details