ಕರ್ನಾಟಕ

karnataka

ETV Bharat / bharat

ಅರಿಶಿಣ ಎಂಬ ಅದ್ಭುತ ಮಸಾಲೆಯ ಪ್ರಯೋಜನಗಳು ಹತ್ತು ಹಲವು - ಶ್ವಾಸನಾಳಗಳ ಉರಿಯೂತ ಸಮಸ್ಯೆಗೆ ಅರಿಶಿಣ ಪರಿಹಾರ

ಅರಿಶಿನವನ್ನು ಅದ್ಭುತ ಮಸಾಲೆ ಎಂದು ಕರೆಯಲಾಗುತ್ತದೆ ಏಕೆಂದರೆ ಅದರ ಮಾಂತ್ರಿಕ ಗುಣಗಳು ನಮಗೆ ವಿವಿಧ ರೀತಿಯ ಪ್ರಯೋಜನವನ್ನು ನೀಡುತ್ತವೆ. ಇದನ್ನು ಹಿಂದಿನ ಕಾಲದಿಂದಲೂ ಇದು ಔಷಧೀಯ ಗಿಡಮೂಲಿಕೆಯಾಗಿ ಬಳಸಲಾಗುತ್ತದೆ.

turmeric-the-wonder-spice
turmericturmeric-the-wonder-spice

By

Published : May 4, 2021, 7:57 PM IST

ಒಣ ಅರಿಶಿನದಲ್ಲಿ ವಿಟಮಿನ್ ಎ, ಥಯಾಮಿನ್ (ಬಿ 1), ರಿಬೋಫ್ಲಾವಿನ್ (ಬಿ 2) ಸಮೃದ್ಧವಾಗಿದೆ. ವಿಟಮಿನ್ ಸಿ, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಸೋಡಿಯಂ ಮತ್ತು ಪೊಟ್ಯಾಸಿಯಮ್ ಕೂಡ ಅಧಿಕ ಪ್ರಮಾಣದಲ್ಲಿರುತ್ತದೆ.

ಇತ್ತೀಚೆಗೆ ಕೆಲವು ವೈದ್ಯಕೀಯ ಅಧ್ಯಯನಗಳೊಂದಿಗೆ ಸಂಶೋಧನೆ ಮಾಡಲು ಪ್ರಾರಂಭಿಸಿದ್ದು, ಇದು "ಕರ್ಕ್ಯುಮಿನಾಯ್ಡ್ಸ್" ಎಂದು ಕರೆಯಲ್ಪಡುವ ಸಂಯುಕ್ತಗಳನ್ನು ಹೊಂದಿದೆ, ಇದು ವಿವಿಧ ಕಾಯಿಲೆಗಳು ಮತ್ತು ಅನಾರೋಗ್ಯಕ್ಕೆ ಚಿಕಿತ್ಸೆ ನೀಡುವ ಉತ್ತಮ ಔಷಧಿಯಾಗಿ ಬಳಕೆಯಾಗುತ್ತದೆ.

ಆರೋಗ್ಯ ಮತ್ತು ಸ್ವಾಸ್ಥ್ಯ ತಜ್ಞರಾದ ಅನಿಲ್ ಖಂಡೇಲ್ವಾಲ್, ಯೋಗಿಕ್ ಸೀಕ್ರೆಟ್ಸ್ ಅರಿಶಿನದ ಪ್ರಯೋಜನಗಳನ್ನು ಈ ರೀತಿ ಹಂಚಿಕೊಂಡಿದ್ದಾರೆ.

ಅರಿಶಿನವು ಕರ್ಕ್ಯುಮಿನ್ ಅನ್ನು ಹೊಂದಿರುತ್ತದೆ, ಇದು ನೈಸರ್ಗಿಕ ಆ್ಯಂಟಿ- ಇನ್​ಫ್ಲಮೇಟರಿ ಗುಣ ಹೊಂದಿದ್ದು, ಇದು ಯಾವುದೇ ಕಾಯಿಲೆ ಅಥವಾ ಅನಾರೋಗ್ಯದಿಂದ ಉಂಟಾಗುವ ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಅರಿಶಿನವು ದೇಹದ ಆ್ಯಂಟಿ- ಆಕ್ಸಿಡೆಂಟ್​ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅರಿಶಿನದಲ್ಲಿನ ಕರ್ಕ್ಯುಮಿನ್ ಅರಿವಿನ ಕಾರ್ಯವನ್ನು ಸುಧಾರಿಸಬಹುದು ಮತ್ತು ಮೆದುಳಿನಲ್ಲಿ ಬಿಡಿಎನ್ಎಫ್ ಮಟ್ಟವನ್ನು ಹೆಚ್ಚಿಸುವ ಮೂಲಕ ಮೆದುಳಿನ ಕಾರ್ಯಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಅರಿಶಿನವು ಜಾಯಿಂಟ್​ ಪೇನ್​ಗೆ ಅದ್ಭುತವಾದ ಮಸಾಲೆ.

ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಪರೀಕ್ಷಿಸಲು:ಹೊಟ್ಟೆಯಲ್ಲಿನ ಗ್ಯಾಸ್​ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಅಜೀರ್ಣ ಸಮಸ್ಯೆ ನಿವಾರಣೆಗೆ ಸಹಕಾರಿ

ಶ್ವಾಸನಾಳಗಳ ಉರಿಯೂತ ಸಮಸ್ಯೆಗೆ ಪರಿಹಾರ: ಒಂದು ಟೀಸ್ಪೂನ್ ಅರಿಶಿನ ಪುಡಿಯನ್ನು ಬೆಚ್ಚಗಿನ ನೀರಿಗೆ ಸೇರಿಸಿ ದಿನಕ್ಕೆ 3 ಬಾರಿ ಸೇವಿಸಿದರೆ ಅದು ಕಫವನ್ನು ಕರಗಿಸುತ್ತದೆ.

ಕ್ಯಾನ್ಸರ್ ವಿರುದ್ಧ ರಕ್ಷಣೆ ನೀಡಲು: ಒಂದು ಕಪ್ ನೀರಿನಲ್ಲಿ 2 ಟೀಸ್ಪೂನ್ ಅರಿಶಿನ ಪುಡಿ ಸೇರಿಸಿ ಮತ್ತು ದಿನಕ್ಕೆ ಎರಡು ಬಾರಿ ನಿಯಮಿತವಾಗಿ ತೆಗೆದುಕೊಳ್ಳಿ. ಇದು ಸಕ್ರಿಯ ಸಂಯುಕ್ತಗಳನ್ನು ಹೊಂದಿದೆ (ಕರ್ಕ್ಯುಮೋಲ್ ಮತ್ತು ಕರ್ಡಿಯೋನ್), ಇದು ಕೆಲವು ರೀತಿಯ ಕ್ಯಾನ್ಸರ್ ವಿರುದ್ಧ ಬಲವಾದ ಸೈಟೊಟಾಕ್ಸಿಕ್ ಪರಿಣಾಮಗಳನ್ನು ಹೊಂದಿರುತ್ತದೆ.

ಚರ್ಮದ ನೋವು ಮತ್ತು ತುರಿಕೆ ನಿವಾರಿಸಲು:ಅರಿಶಿನ ಪುಡಿಯನ್ನು ನಿಂಬೆ ರಸ ಮತ್ತು ಸ್ವಲ್ಪ ನೀರಿನೊಂದಿಗೆ ಬೆರೆಸಿ ಮೃದುವಾದ ಪೇಸ್ಟ್ ತಯಾರಿಸಿ. ಇದನ್ನು ನೇರವಾಗಿ ಗಾಯಗಳು , ಸೋರಿಯಾಸಿಸ್, ಮೊಡವೆಗಳು ಮತ್ತು ಕುಷ್ಠರೋಗದ ಹುಣ್ಣುಗಳಿಗೆ ಹಾಕಿ.

ಉಳುಕು ಮತ್ತು ಆಂತರಿಕ ಗಾಯಗಳನ್ನು ನಿವಾರಿಸಲು :2 ಕಪ್ ಹಾಲಿನಲ್ಲಿ ಕೇವಲ 1 ಚಮಚ ಅರಿಶಿನ ಪುಡಿಯನ್ನು ಬೆರೆಸಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಅದನ್ನು ಕುಡಿಯಿರಿ. ಉತ್ತಮ ಫಲಿತಾಂಶಕ್ಕಾಗಿ ಪ್ರತಿದಿನ ಹೀಗೆ ಮಾಡಿ.

ABOUT THE AUTHOR

...view details