ಕರ್ನಾಟಕ

karnataka

ETV Bharat / bharat

ಆಗಸ್ಟ್​ ತಿಂಗಳ ತಿಮ್ಮಪ್ಪನ ದರ್ಶನಕ್ಕೆ ಬುಕ್ಕಿಂಗ್​ ಆರಂಭ: ವಿಶೇಷ ದರ್ಶನಕ್ಕೆ 300 ರೂ. ನಿಗದಿ - ತಿರುಪತಿ ಆಗಸ್ಟ್​ ತಿಂಗಳ ಬುಕ್ಕಿಂಗ್​

ಮುಂದಿನ ತಿಂಗಳು ತಿರುಪತಿ ತಿರುಮಲದಲ್ಲಿರುವ ವೆಂಕಟೇಶ್ವರನ ದರ್ಶನ ಪಡೆದುಕೊಳ್ಳುವ ಭಕ್ತರಿಗೆ ಇಂದಿನಿಂದ ಆನ್​ಲೈನ್ ಬುಕ್ಕಿಂಗ್ ಆರಂಭಗೊಂಡಿದೆ.

Tirumala Tirupathi
Tirumala Tirupathi

By

Published : Jul 20, 2021, 7:28 PM IST

ತಿರುಪತಿ(ಆಂಧ್ರಪ್ರದೇಶ): ಪ್ರಸಿದ್ಧ ತಿರುಪತಿ ತಿಮ್ಮಪ್ಪನ ದರ್ಶನ ಪುನಾರಂಭಗೊಂಡಿದ್ದು, ಭಕ್ತರು ಈಗಾಗಲೇ ಅಲ್ಲಿಗೆ ತೆರಳಿ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಪ್ರತಿದಿನ 5 ಸಾವಿರ ಮೇಲ್ಪಟ್ಟು ಭಕ್ತರು ಆನ್​ಲೈನ್​ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಮುಂದಿನ ತಿಂಗಳ ದರ್ಶನಕ್ಕೆ ವೆಬ್​ಸೈಟ್ ಮೂಲಕ ಆನ್​ಲೈನ್​ ಬುಕ್ಕಿಂಗ್​ ಆರಂಭಗೊಂಡಿದೆ. ವಿಶೇಷ ದರ್ಶನಕ್ಕಾಗಿ 300 ರೂ. ನಿಗದಿ ಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಮಾಹಿತಿ ಹಂಚಿಕೊಂಡಿದೆ. ಆನ್​ಲೈನ್​ ಬುಕ್ಕಿಂಗ್​ ಆರಂಭಗೊಳ್ಳುತ್ತಿದ್ದಂತೆ ಟಿಟಿಡಿ ಸರ್ವರ್​​ ಕೂಡ ಕ್ರ್ಯಾಷ್​​​ ಆಗಿದ್ದು, ಕೆಲ ಗಂಟೆಗಳಲ್ಲಿ ಸರಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮೋದಿ ಬಂದ ಬಳಿಕ ಇದು ಆಗಿದ್ದಲ್ಲ, ಕಾಂಗ್ರೆಸ್‌ ಕೂಡಾ ಫೋನ್ ಕದ್ದಾಲಿಕೆ ಮಾಡಿದೆ: ಹೆಚ್​ಡಿಕೆ

ನಿನ್ನೆ ಒಂದೇ ದಿನ 17,073 ಭಕ್ತರು ಬಾಲಾಜಿ ದರ್ಶನ ಪಡೆದುಕೊಂಡಿದ್ದು, ಇದರಿಂದ 1.70 ಕೋಟಿ ರೂ. ಹುಂಡಿ ಹಣ ಸಂಗ್ರಹವಾಗಿದ್ದಾಗಿ ಟಿಟಿಡಿ ತಿಳಿಸಿದೆ. ಕೊರೊನಾ ವೈರಸ್ ಹಾವಳಿ ನಿಯಂತ್ರಣದಲ್ಲಿಡುವ ಉದ್ದೇಶದಿಂದ ಇಲ್ಲಿಗೆ ಭೇಟಿ ನೀಡುವ ಭಕ್ತರು, ಕೊರೊನಾ ಮಾರ್ಗಸೂಚಿ ಪಾಲನೆ ಮಾಡಬೇಕಾಗಿರುವುದು ಕಡ್ಡಾಯ. ವ್ಯಾಕ್ಸಿನ್ ಪಡೆದುಕೊಂಡವರಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ.

ABOUT THE AUTHOR

...view details