ವಿಶ್ವಾಸಾರ್ಹ ಮೂಲಗಳ ಮೂಲಕ ಆರೋಗ್ಯದ ಕಾಳಜಿ ಬಗ್ಗೆ ಕಲಿಯುವುದು ಹದಿಹರೆಯದವರು ತಮ್ಮನ್ನು ತಾವು ಚೆನ್ನಾಗಿ ನೋಡಿಕೊಳ್ಳಲು ಸಹಾಯ ಮಾಡುತ್ತದೆ, ಇದು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಕಾರಣವಾಗುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.
ಹದಿಹರೆಯದವರು ಆನ್ಲೈನ್ನಲ್ಲಿ ದೊರೆಯುವ ವಿಷಯಕ್ಕಿಂತ ಸಾಂಪ್ರದಾಯಿಕ ಮಾಧ್ಯಮಗಳಾದ ಟಿವಿ, ರೇಡಿಯೋ ಮತ್ತು ಪತ್ರಿಕೆಗಳಿಂದ ಲಭ್ಯವಾಗುವುದನ್ನು ಹೆಚ್ಚು ನಂಬಿದ್ದಾರೆ ಎಂದು ವರದಿ ಹೇಳಿದೆ. ಆದರೂ ಸಹ, ಸಾಮಾಜಿಕ ಮಾಧ್ಯಮ ಅಥವಾ ವೆಬ್‌ಸೈಟ್‌ಗಳಲ್ಲಿ ಸಿಗುವ ವಿಷಯ ಮಾತ್ರ ಹರೆಯದವರ ವರ್ತನೆಗಳಲ್ಲಿ ನಿಜವಾದ ಬದಲಾವಣೆಗಳಿಗೆ ಕಾರಣವಾಗಿದೆ. "ಈ ಅಧ್ಯಯನಕ್ಕೆ ನನ್ನ ವಿದ್ಯಾರ್ಥಿಗಳೆ ಸ್ಫೂರ್ತಿ, ಅವರಲ್ಲಿ ಅನೇಕರು ನನ್ನ ಬಳಿಗೆ ಬಂದ ನಂತರ ಈ ಕುರಿತು ಒತ್ತಿಹೇಳಿದ್ದಾರೆ" ಎಂದು ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕ ಬು ಜೋಂಗ್ ಹೇಳಿದ್ದಾರೆ.
ಈ ಕುರಿತ ಅಧ್ಯಯನಕ್ಕಾಗಿ ಮಕ್ಕಳ ಆರೋಗ್ಯ ಮತ್ತು ಕಲ್ಯಾಣ ಕುರಿತು ಪ್ರಕಟವಾದ ಜರ್ನಲ್ ಚೈಲ್ಡ್, ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 310 ಹದಿಹರೆಯದವರನ್ನು ನೇಮಕ ಮಾಡಿತ್ತು. ಸೆಮಿನಾರ್‌ಗಳು, ತರಗತಿಗಳು, ಕರಪತ್ರಗಳು ಮತ್ತು ಇತರ ಮಾಧ್ಯಮಗಳ ಮೂಲಕ ಆರೋಗ್ಯ ಮಾಹಿತಿ ತಿಳಿಯುವವರು, ಈ ಮೂಲಕ ಅವರ ಖಿನ್ನತೆಯ ಲಕ್ಷಣಗಳು ಮತ್ತು ಆರೋಗ್ಯ ಮಾಹಿತಿ ಪಡೆಯುವುದರಿಂದ ಅವರ ನಡವಳಿಕೆಯ ಬದಲಾವಣೆಗಳಿಗೆ ಕಾರಣವಾಗುತ್ತದೆಯೇ ಎಂಬ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ,