ಕರ್ನಾಟಕ

karnataka

ETV Bharat / bharat

ಕೋವಿಡ್​ನಿಂದ ಸತ್ತವರ ಶವ ಸಾಗಿಸಲು ಇಲ್ಲ ವಾಹನ.. ಟ್ರಕ್​ನಲ್ಲಿ ತುಂಬಿ ಶವಾಗಾರಕ್ಕೆ ರವಾನೆ!

ಮಹಾಮಾರಿ ಕೊರೊನಾ ವೈರಸ್​ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶವಾಗಾರಗಳಿಗೆ ಮೃತದೇಹ ರವಾನೆ ಮಾಡಲು ಇದೀಗ ತೊಂದರೆ ಆಗುತ್ತಿದೆ.

Trucks to ferry Covid patients
Trucks to ferry Covid patients

By

Published : Apr 15, 2021, 3:20 PM IST

ರಾಯ್ಪುರ್​​(ಛತ್ತೀಸ್​​​ಗಢ): ದೇಶದಲ್ಲಿ ಎರಡನೇ ಹಂತದ ಕೋವಿಡ್​ ಸೋಂಕಿತ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾವಿರಾರು ಜನರು ಮಹಾಮಾರಿಗೆ ಬಲಿಯಾಗುತ್ತಿದ್ದಾರೆ.

ಛತ್ತೀಸ್​ಗಢದಲ್ಲೂ ಮಹಾಮಾರಿ ಅಬ್ಬರ ಜೋರಾಗಿದ್ದು, ನೋರಾರು ಜನರು ಸಾವನ್ನಪ್ಪುತ್ತಿದ್ದಾರೆ. ಇದೀಗ ಮೃತದೇಹಗಳನ್ನ ಶವಾಗಾರಕ್ಕೆ ಹೊತ್ತು ಹೋಗಲು ವಾಹನಗಳ ಸಂಖ್ಯೆ ಕಡಿಮೆಯಾಗಿರುವ ಕಾರಣ, ಟ್ರಕ್​ಗಳಲ್ಲಿ ಅವುಗಳನ್ನ ಸಾಗಣೆ ಮಾಡಲಾಗುತ್ತಿದೆ. ರಾಯ್ಪುರ್​ ಮುನ್ಸಿಪಲ್ ಕಾರ್ಪೋರೇಷನ್​​ ಸುಮಾರು 10 ಮೃತದೇಹಗಳನ್ನ ಒಂದೇ ಟ್ರಕ್​​ನಲ್ಲಿ ಶವಗಾರಕ್ಕೆ ರವಾನೆ ಮಾಡಿದ್ದಾರೆ.

ಟ್ರಕ್​ನಲ್ಲಿ ತುಂಬಿ ಶವಾಗಾರಕ್ಕೆ ಕೋವಿಡ್​ ಮೃತದೇಹಗಳ ರವಾನೆ

ಇದನ್ನೂ ಓದಿ: ಒಂದೇ ದಿನ 2 ಲಕ್ಷ ಕೋವಿಡ್​ ಕೇಸ್​ಗೆ ಸಾಕ್ಷಿಯಾದ ಭಾರತ.. ಮತ್ತೆ ಸಾವಿರಕ್ಕೂ ಹೆಚ್ಚು ಮಂದಿ ಬಲಿ

ನವಾ ರಾಯ್ಪುರ್​​ದ ಭೀಮರಾವ್​​ ಅಂಬೇಡ್ಕರ್​ ಆಸ್ಪತ್ರೆಯಿಂದ ಮುಕ್ತಿಧಾಮಕ್ಕೆ ಟ್ರಕ್​​ನಲ್ಲಿ ಮೃತದೇಹ ತೆಗೆದುಕೊಂಡು ಹೋಗಲಾಗಿದ್ದು, ಅಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ 2 ಲಕ್ಷಕ್ಕೂ ಅಧಿಕ ಕೋವಿಡ್​ ಪ್ರಕರಣ ದಾಖಲಾಗಿದ್ದು, ಸಾವಿರಕ್ಕೂ ಅಧಿಕ ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.

ABOUT THE AUTHOR

...view details