ಗಾಂಧಿನಗರ(ಗುಜರಾತ್):ಹರಿಯಾಣ, ಜಾರ್ಖಂಡ್ನಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಟ್ರಕ್ ಹರಿಸಿ ಕೊಲೆ ಮಾಡಿರುವ ಘಟನೆ ಬೆನ್ನಲ್ಲೇ ಗುಜರಾತ್ನಲ್ಲೂ ಅಂತಹದೊಂದು ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ.
ರಾಜಸ್ಥಾನದ ಲೈಸೆನ್ಸ್ ನಂಬರ್ ಹೊಂದಿದ್ದ ಅನುಮಾನಾಸ್ಪದ ಟ್ರಕ್ ತಡೆಯಲು ಹೋದ ಗುಜರಾತ್ ಪೊಲೀಸ್ ಕಾನ್ಸ್ಟೇಬಲ್ ಮೇಲೆ ವಾಹನ ಹರಿಸಿ, ಕೊಲೆ ಮಾಡಲಾಗಿದೆ. ಈ ಮೂಲಕ ಕೇವಲ 24 ಗಂಟೆಗಳ ಅಂತರದಲ್ಲಿ ನಡೆದಿರುವ ಮೂರನೇ ಪ್ರಕರಣ ಇದಾಗಿದೆ.
ಗುಜರಾತ್ನ ಬೋರ್ಸಾದ್ ಎಂಬಲ್ಲಿ ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ. ಅನುಮಾನಾಸ್ಪದ ಟ್ರಕ್ ನಿಲ್ಲಿಸಲು ಮುಂದಾದ ಪೊಲೀಸ್ ಸಿಬ್ಬಂದಿ ಮೇಲೆ ಹರಿಸಲಾಗಿದ್ದು, ಇದರ ಬೆನ್ನಲ್ಲೇ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಡಿಎಸ್ಪಿ ಅಜಿತ್ ಆರ್ ಮಾತನಾಡಿದ್ದು, ಬುಧವಾರ ನಸುಕಿನ ಜಾವ ಕಾನ್ಸ್ಟೇಬಲ್ ಕಿರಣ್ ರಾಜ್ ರಾಜಸ್ಥಾನದ ಲೈಸನ್ಸ್ ಹೊಂದಿದ್ದ(ಫಲಕ) ಟ್ರಕ್ ತಡೆಯಲು ಮುಂದಾಗಿದ್ದಾರೆ. ಟ್ರಕ್ ಚಾಲಕ ವೇಗವಾಗಿ ಚಲಾಯಿಸಿ ಕಾನ್ಸ್ಟೇಬಲ್ ಮೇಲೆ ಹರಿಸಿದ್ದಾನೆ.