ಗೋರಾಖ್ಪುರ(ಉತ್ತರ ಪ್ರದೇಶ):ಗುರುವಾರ ತಡರಾತ್ರಿ ಗೋರಖ್ಪುರ್ ಮತ್ತು ಕುಶಿನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿತು. ಜಗದೀಶ್ಪುರ ಬಳಿ ನಿಂತಿದ್ದ ಬಸ್ಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ 6 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.ಗಂಭೀರವಾಗಿ ಗಾಯಗೊಂಡ 27 ಪ್ರಯಾಣಿಕರನ್ನು ಆಂಬ್ಯುಲೆನ್ಸ್‌ಗಳ ಸಹಾಯದಿಂದ ಜಿಲ್ಲಾಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.
ಮೃತರನ್ನು ನಂದಲಾಲ್ ಪಟೇಲ್ ಅವರ ಪುತ್ರ ಶೈಲೇಶ್ ಪಟೇಲ್ (25), ಕುಶಿನಗರದ ತುರ್ಕಪಟ್ಟಿ ನಿವಾಸಿ ಜವಾಹಿರ್ ಚೌಹಾಣ್ ಅವರ ಪುತ್ರ ಸುರೇಶ್ ಚೌಹಾಣ್ (35), ಮದರ್ಹಾ ಹಟ ಕುಶಿನಗರ ನಿವಾಸಿ ಅಶೋಕ್ ಸಿಂಗ್ ಅವರ ಪುತ್ರ ನಿತೇಶ್ ಸಿಂಗ್ (25), ಮಿಶ್ರಿಪಟ್ಟಿ ಪದರುಣ, ಕುಶಿನಗರ ನಿವಾಸಿ ಹಿಮಾಂಶು ಯಾದವ್ ಪುತ್ರ ಬನ್ಸಾರಿ ಯಾದವ್ (24) ಎಂದು ಗುರುತಿಸಲಾಗಿದೆ. ಇನ್ನುಳಿದಂತೆ ಇಬ್ಬರ ಗುರುತು ಪತ್ತೆಯಾಗಿಲ್ಲ. ಗಾಯಗೊಂಡ ಕೆಲವು ಪ್ರಯಾಣಿಕರ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬೈಕ್ಗೆ ಕೇಂದ್ರ ಸಚಿವರ ಕಾರು ಡಿಕ್ಕಿ: ಓರ್ವ ವ್ಯಕ್ತಿ ಸಾವು, ನಾಲ್ವರಿಗೆ ಗಾಯ