ಕೊಚ್ಚಿ (ಕೇರಳ):ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ಶಾಸಕರನ್ನು ಬಿಜೆಪಿ ಖರೀದಿಸುವ ಯತ್ನ ಆರೋಪ ಪ್ರಕರಣ ಕರ್ನಾಟಕ, ಕೇರಳ, ಹರಿಯಾಣ ರಾಜ್ಯಗಳಿಗೆ ಹಬ್ಬಿದೆ. ಕೇಸರಿ ಪಡೆಯ ಮೇಲಿರುವ ಆಪಾದನೆಯ ಕೇಸ್ ಅನ್ನು ತೆಲಂಗಾಣ ಪೊಲೀಸರು ಬೆನ್ನಟ್ಟಿದ್ದು, ಆರೋಪಿಗಳ ಆಸ್ತಿಪಾಸ್ತಿ ಮೇಲೆ ದಾಳಿ ನಡೆಸಿದೆ.
ಟಿಆರ್‌ಎಸ್ ಶಾಸಕರ ಕುದುರೆ ವ್ಯಾಪಾರ ಪ್ರಕರಣದ ತನಿಖೆಗಾಗಿ ತೆಲಂಗಾಣ ಪೊಲೀಸ್ ವಿಶೇಷ ತನಿಖಾ ತಂಡ ಸೋಮವಾರ ಕೇರಳದ ಕೊಚ್ಚಿ ತಲುಪಿದೆ. ಪ್ರಕರಣದಲ್ಲಿ ಬಂಧಿತರಾಗಿರುವ ರಾಮಚಂದ್ರ ಭಾರತಿ ಎಂಬುವರ ಸ್ನೇಹಿತ ಕೊಚ್ಚಿಯಲ್ಲಿ ತಲೆಮರೆಸಿಕೊಂಡ ಸುಳಿವು ಹಿಡಿದು ಪೊಲೀಸರು ಕೊಚ್ಚಿಗೆ ಬಂದಿದ್ದಾರೆ. ಸ್ವಾಮಿ ಎಂಬಾತನ ಸೆರೆಗಾಗಿ ಕಾರ್ಯಾಚರಣೆ ನಡೆಸುತ್ತಿರುವ ತೆಲಂಗಾಣ ಪೊಲೀಸರು, ಆತನಿಗೆ ಸಂಬಂಧಿಸಿದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.