ಟಿಆರ್‌ಎಸ್ ಶಾಸಕರಿಗೆ ಆಮಿಷ ಆರೋಪ: ಪೊಲೀಸರ ಮೆಮೊ ವಜಾಗೊಳಿಸಿದ ಕೋರ್ಟ್ - Moinabad police filed a memo
ಮೊಯಿನಾಬಾದ್ ಪೊಲೀಸರು ಪ್ರಕರಣದಲ್ಲಿ ನಾಲ್ವರನ್ನು ಆರೋಪಿಗಳೆಂದು ಉಲ್ಲೇಖಿಸಿ ಮೆಮೊವನ್ನು(ಜ್ಞಾಪನಾ ಪತ್ರ) ಕೋರ್ಟ್ಗೆ ಸಲ್ಲಿಸಿದ್ದರು. ಇದನ್ನು ಮಂಗಳವಾರ ಕೋರ್ಟ್ ವಜಾಗೊಳಿಸಿತು.
ಹೈದರಾಬಾದ್: ಟಿಆರ್‌ಎಸ್ ಶಾಸಕರಿಗೆ ಆಮಿಷವೊಡ್ಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಯಿನಾಬಾದ್ ಪೊಲೀಸರು ಮೆಮೊವನ್ನು ಕೋರ್ಟ್ಗೆ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಮೆಮೊ ವಜಾಗೊಳಿಸಿದೆ. ಬಿಜೆಪಿ ಮುಖಂಡ ಬಿ ಎಲ್ ಸಂತೋಷ್, ಕೇರಳದ ತುಷಾರ್, ಜಗ್ಗುಸ್ವಾಮಿ ಮತ್ತು ಕರೀಂನಗರದ ಶ್ರೀನಿವಾಸ್ ಅವರನ್ನು ಆರೋಪಿಗಳೆಂದು ಉಲ್ಲೇಖಿಸಿ ಮೆಮೊವನ್ನು ಸಲ್ಲಿಸಲಾಗಿತ್ತು. ಕಳೆದ ತಿಂಗಳ 22 ರಂದು ನಾಂಪಲ್ಲಿ ಭ್ರಷ್ಟಾಚಾರ ನಿಗ್ರಹ ಇಲಾಖೆಯ ವಿಶೇಷ ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಇದೀಗ ಮೆಮೊ ವಜಾಗೊಳಿಸಿದೆ.