ಹೈದ್ರಾಬಾದ್: ಶಾಸಕರ ಖರೀದಿ ಪ್ರಕರಣದ ಆರೋಪಿಯಾಗಿರುವ ಕೊರೆ ನಂದಕುಮಾರ್ ಬಂಧನಕ್ಕೆ ಬಂಜಾರ ಹಿಲ್ಸ್ ಪೊಲೀಸರು ನ್ಯಾಯಾಲಯದಲ್ಲಿ ಪಿಟಿ ವಾರೆಂಟ್ ಅರ್ಜಿ ಸಲ್ಲಿಸಿದ್ದಾರೆ. ಫಿಲ್ಮ್ನಗರ್ದ ದಗ್ಗುಬಾಟಿ ಸುರೇಶ್ ಬಾಬು ಸ್ಥಳವನ್ನು ನಂದಕುಮಾರ್ ಲೀಸ್ಗೆ ಪಡೆದಿದ್ದರು. ಅಲ್ಲದೇ, ಯಾವುದೇ ಅನುಮತಿಯಿಲ್ಲದೇ ನಿರ್ಮಾಣಕ್ಕೆ ಮುಂದಾಗಿದ್ದರು. ಸಬ್ಲೀಸ್ನಲ್ಲಿರುವ ಸ್ಥಳದಲ್ಲಿ ನಂದಕುಮಾರ್ಗೆ ಯಾವುದೇ ಅಧಿಕಾರ ಇಲ್ಲದಿದ್ದರೂ ಅವರು ಸೆಪ್ಟೆಂಬರ್ನಲ್ಲಿ ಬಾಂಬೆ ಗಾರ್ಮೆಂಟ್ ಎಂಬ ಶಾಪ್ ಅನ್ನು ನಿರ್ಮಾಣ ಮಾಡಿದ್ದಾರೆ ಎಂದು ಬಂಜಾರ ಹಿಲ್ಸ್ ಪೊಲೀಸರಿಗೆ ಕಳೆದ ತಿಂಗಳು ಕೊನೆ ಇಂದಿರಾ ದೂರು ಸಲ್ಲಿಸಿದ್ದರು.
ಶಾಪ್ ನಿರ್ಮಾಣಕ್ಕೆ 13.50 ಲಕ್ಷ ರೂಪಾಯಿ ನೀಡಿದ್ದು, ತಿಂಗಳಿಗೆ 1.50 ಲಕ್ಷ ಬಾಡಿಗೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನು ನೆಲಸಮ ಮಾಡಿದ್ದರಿಂದ ಈಗ ತಮಗೆ ನಷ್ಟ ಉಂಟಾಗಿದ್ದು, ನಂದಕುಮಾರ್ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
ಶಾಸಕರ ಖರೀದಿ ಆರೋಪ ಪ್ರಕರಣದಲ್ಲಿ ನಂದಕುಮಾರ್ ಜಾಮೀನು ಪಡೆದಿದ್ದಾರೆ. ಈ ಪ್ರಕರಣದಲ್ಲಿ ಅವರ ಬಂಧನ ಕುರಿತು ಪೊಲೀಸರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅವರ ವಾದ ಆಲಿಸಿದ ನಾಂಪಲ್ಲಿ ಮೂರನೇ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಚಾರಣೆಯನ್ನು ಮುಂದೂಡಿತ್ತು.
ಶಾಸಕರ ಖರೀದಿ ಪ್ರಕರಣದಲ್ಲಿ ಪೊಲೀಸರು ಶಾಸಕ ಪೈಲಟ್ ರೋಹಿತ್ ರೆಡ್ಡಿ ದೂರಿನ ಮೇರೆಗೆ ಮತ್ತೊಬ್ಬ ಆರೋಪಿ ರಾಮಚಂದ್ರ ಭಾರತಿ ಬಳಿ ಎರಡು ಆಧಾರ್ ಕಾರ್ಡ್, ಎರಡು ಪ್ಯಾನ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸೆನ್ಸ್ ಇದೆ ಎಂದು ದೂರ ದಾಖಲಿಸಿದ್ದಾರೆ. ಅಲ್ಲದೆ, ರಾಮಚಂದ್ರಭಾರತಿ ಅವರ ಫೋನ್‌ನಲ್ಲಿ ಎರಡು ವಿಭಿನ್ನ ಪಾಸ್‌ಪೋರ್ಟ್‌ಗಳ ಪ್ರತಿಗಳನ್ನು ಎಸ್‌ಐಟಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಬಿಆರ್ಎಸ್ ಪಕ್ಷದ ಶಾಸಕರಿಗೆ ಆಮಿಷವೊಡ್ಡಿದ ಪ್ರಕರಣದಲ್ಲಿ ಜಾಮೀನು ಪಡೆದಿರುವ ರಾಮಚಂದ್ರ ಭಾರತಿ ಜೈಲಿನಿಂದ ಹೊರ ಬಂದರೆ ಬಂಧಿಸಲು ಬಂಜಾರ ಹಿಲ್ಸ್ ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: ಶಾಸಕರ ಖರೀದಿ ಆರೋಪ ಪ್ರಕರಣ: ಶಾಸಕ ಪ್ರತಾಪ್ ಗೌಡ್ಗೆ ಕೇಂದ್ರದಲ್ಲಿ ಪ್ರಮುಖ ಸ್ಥಾನದ ಆಮಿಷ