ಹೈದರಾಬಾದ್ (ತೆಲಂಗಾಣ): ತೆಲಂಗಾಣದ ರಾಜಕೀಯದಲ್ಲಿ ಟಿಆರ್ಎಸ್ ಶಾಸಕರ ಖರೀದಿ ಆರೋಪ ಯತ್ನ ಪ್ರಕರಣವು ಈಗಾಗಲೇ ಭಾರಿ ಸಂಚಲನ ಮೂಡಿಸಿದೆ. ಇದೀಗ ಸ್ವತಃ ಟಿಆರ್ಎಸ್ ಅಧ್ಯಕ್ಷ, ಮುಖ್ಯಮಂತ್ರಿ ಕೆ ಚಂದ್ರಶೇಖರ್ ಅವರು ಪ್ರಮುಖ ವಿಡಿಯೋಗಳ ತುಕುಣುಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಒಟ್ಟಾರೆ ಮೂರು ಗಂಟೆಗಳ ವಿಡಿಯೋಗಳನ್ನು ಹೈಕೋರ್ಟ್ಗೆ ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.
ಶಾಸಕರ ಖರೀದಿ ಯತ್ನದ ಆರೋಪದ ಮೇಲೆ ಅಕ್ಟೋಬರ್ 26ರಂದು ರಾತ್ರಿ ಹೈದರಾಬಾದ್ ಸಮೀಪದ ಮೊಯಿನಾಬಾದ್‌ನಲ್ಲಿರುವ ಫಾರ್ಮ್‌ಹೌಸ್ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದರು. ಈ ವೇಳೆ ನಾಲ್ವರು ಟಿಆರ್ಎಸ್ ಶಾಸಕರು ಕೂಡ ಇದ್ದರು. ಅಲ್ಲದೇ, ಟಿಆರ್ಎಸ್ ಬಿಡಲು ನಮಗೆ ಬಿಜೆಪಿಯಿಂದ 100 ಕೋಟಿ ರೂ ಹಾಗೂ ಗುತ್ತಿಗೆ ಆಮಿಷವೊಡ್ಡಲಾಗಿದೆ ಎಂದು ಶಾಸಕರು ಆರೋಪಿಸಿದ್ದರು.
ಟಿಆರ್ಎಸ್ ಶಾಸಕರ ಖರೀದಿ ಯತ್ನ ಪ್ರಕರಣ: ವಿಡಿಯೋ ಬಿಡುಗಡೆ ಮಾಡಿದ ಸಿಎಂ ಕೆಸಿಆರ್ ಇದನ್ನೂ ಓದಿ:ತೆಲಂಗಾಣದಲ್ಲಿ ಸಿಬಿಐ ತನಿಖೆಗಿದ್ದ ಸಾಮಾನ್ಯ ಅನುಮತಿ ಹಿಂಪಡೆದ ಸರ್ಕಾರ
ಇದು ತೆಲಂಗಾಣದಲ್ಲಿ ರಾಜಕೀಯದಲ್ಲಿ ಹೊಸ ಸಂಚಲನ ಉಂಟು ಮಾಡಿತ್ತು. ಅಲ್ಲದೇ, ಆಡಳಿತಾರೂಢ ಬಿಜೆಪಿ ಮತ್ತು ಟಿಆರ್ಎಸ್ ನಡುವೆ ತೀವ್ರ ರಾಜಕೀಯ ಕೆಸರೆಚಾಟಕ್ಕೂ ಕಾರಣವಾಗಿತ್ತು. ಈಗ ಸಿಎಂ ಕೆಸಿಆರ್ ಮತ್ತೆ ಪ್ರಧಾನಿ ನರೇಂದ್ರ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ತೆಲಂಗಾಣ ಚಲನಶೀಲ ರಾಜ್ಯ ಎಂಬ ಕಾರಣಕ್ಕೆ ಕಡೆವಲು ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೇ, ಶಾಸಕರ ಖರೀದಿ ಯತ್ನ ಆರೋಪಕ್ಕೆ ಸಂಬಂಧಿಸಿದ ಕೆಲ ವಿಡಿಯೋ ತುಣುಕುಗಳನ್ನು ಬಿಡುಗಡೆ ಮಾಡಿರುವ ಕೆಸಿಆರ್, ಒಟ್ಟಾರೆ ಮೂರು ಗಂಟೆಗಳು ವಿಡಿಯೋ ದೃಶ್ಯಾವಳಿಯನ್ನು ಹೈಕೋರ್ಟ್ಗೆ ಒಪ್ಪಿಸಿದ್ದೇವೆ ಎಂದು ಹೇಳಿದ್ದಾರೆ. ಈಗಾಗಲೇ ಎಂಟು ಸರ್ಕಾರಗಳನ್ನು ಈ ಗ್ಯಾಂಗ್ ಉರುಳಿಸಿದೆ. ಇದರ ಮುಂದಿನ ಪಿತೂರಿಯನ್ನು ವಿಫಲಗೊಳಿಸಲು ನಾವು ಬಯಸಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಟಿಆರ್ಎಸ್ ಶಾಸಕರ ಖರೀದಿ ಯತ್ನ ಪ್ರಕರಣ: ದೇವಸ್ಥಾನದಲ್ಲಿ ಆಣೆ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ
ಈ ಗ್ಯಾಂಗ್ ಸಣ್ಣ ಅಲ್ಲ... 24 ಮಂದಿ ಈ ಗ್ಯಾಂಗ್ನಲ್ಲಿದ್ದಾರೆ. ರಾಜಸ್ಥಾನದ ಜೊತೆಗೆ ಉಳಿದೆಲ್ಲ ಸರ್ಕಾರಗಳನ್ನು ಉರುಳಿಸಲು ಷಡ್ಯಂತ್ರ ಮಾಡಲಾಗಿದೆ. ತೆಲಂಗಾಣ ನಂತರ ದೆಹಲಿ ಮತ್ತು ಆಂಧ್ರ ಪ್ರದೇಶದ ಸರ್ಕಾರವನ್ನೂ ಉರುಳಿಸಲು ಬಿಜೆಪಿ ಯೋಜಿಸುತ್ತಿದೆ. ಈ 24 ಜನರ ಗ್ಯಾಂಗ್ ವಿವಿಧ ರಾಜ್ಯಗಳಲ್ಲಿ ಶಾಸಕರ ಖರೀದಿ ಮತ್ತು ಚುನಾಯಿತ ಸರ್ಕಾರಗಳನ್ನು ಬುಲ್ಡೋಜರ್ ಮಾಡುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ಟಿಆರ್ಎಸ್ ಶಾಸಕರ ಖರೀದಿ ಯತ್ನ ಪ್ರಕರಣ: ವಿಡಿಯೋ ಬಿಡುಗಡೆ ಮಾಡಿದ ಸಿಎಂ ಕೆಸಿಆರ್ ಇವರಿಗೆ ನಕಲಿ ಆಧಾರ್ ಮತ್ತು ಪಾನ್ ಕಾರ್ಡ್ ಕೊಟ್ಟವರು ಯಾರು?. ಸಾವಿರಾರು ಕೋಟಿ ರೂಪಾಯಿ ಯಾರಿಂದ ಬಂತು?. ಶಾಸಕರ ಖರೀದಿ ವಿಚಾರದಲ್ಲಿ ದೆಹಲಿ ಸಿಎಂ ಎಚ್ಚೆತ್ತುಕೊಂಡಿದ್ದಾರೆ. ಈ ವಿಷಯವನ್ನು ಒಂದು ಪ್ರಕರಣವಾಗಿ ಪರಿಗಣಿಸಬೇಡಿ ಎಂದು ನಾವು ನ್ಯಾಯಾಧೀಶರನ್ನು ಕೇಳುತ್ತಿದ್ದೇವೆ. ನಾವು ಈ ವಿಡಿಯೋಗಳನ್ನು ಎಲ್ಲ ರಾಜ್ಯಗಳ ಡಿಜಿಪಿಗಳಿಗೆ ಕಳುಹಿಸುತ್ತಿದ್ದೇವೆ. ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಜನತೆ ಮತ್ತು ಯುವಕರ ಜವಾಬ್ದಾರಿಯಾಗಿದೆ. ವಿರೋಧ ಪಕ್ಷಗಳನ್ನು ನಾಶ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.
ಇದನ್ನೂ ಓದಿ:ಟಿಆರ್ಎಸ್ ಶಾಸಕರ ಖರೀದಿ ಯತ್ನ ಆರೋಪ: ಮಹತ್ವದ ಆಡಿಯೋ ಸಂಭಾಷಣೆ ವೈರಲ್