ಕರ್ನಾಟಕ

karnataka

ETV Bharat / bharat

ಟಿಆರ್‌ಪಿ ಹಗರಣ : ಅರ್ನಬ್ ಗೋಸ್ವಾಮಿ ಸೇರಿ 7 ಆರೋಪಿಗಳ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ

ಕಳೆದ ವರ್ಷ ಟಿಆರ್‌ಪಿ ಹಗರಣ ಬೆಳಕಿಗೆ ಬಂದಿದ್ದು, ಕೆಲವು ಟಿವಿ ಚಾನೆಲ್‌ಗಳು ಟಿಆರ್‌ಪಿ ಸಂಖ್ಯೆಯನ್ನು ರಿಗ್ಗಿಂಗ್ ಮಾಡುತ್ತಿವೆ ಎಂದು ಆರೋಪಿಸಿ ಬಾರ್ಕ್ ಹನ್ಸಾ ರಿಸರ್ಚ್ ಗ್ರೂಪ್ ಮೂಲಕ ದೂರು ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಬಾರ್ಕ್‌ನ ಮಾಜಿ ಸಿಒಒ ಸೇರಿದಂತೆ 13 ಜನರನ್ನು ಬಂಧಿಸಿದ್ದಾರೆ..

chargesheet
chargesheet

By

Published : Jun 22, 2021, 4:31 PM IST

ಮುಂಬೈ :ಟಿಆರ್‌ಪಿ ಹಗರಣ ಪ್ರಕರಣದಲ್ಲಿ ಮುಂಬೈ ಪೊಲೀಸರು ಇಂದು ಮತ್ತೊಂದು ಚಾರ್ಜ್‌ಶೀಟ್ ಸಲ್ಲಿಸಿಕೆಯಾಗಿದೆ. ಒಟ್ಟು 1,912 ಪುಟಗಳ ಪೂರಕ ಚಾರ್ಜ್‌ಶೀಟ್ ಅನ್ನು ತನಿಖಾ ಸಂಸ್ಥೆಗಳು ನ್ಯಾಯಾಲಯಕ್ಕೆ ಸಲ್ಲಿಸಿವೆ. ಇತ್ತೀಚಿನ ಚಾರ್ಜ್‌ಶೀಟ್‌ನಲ್ಲಿ ಇನ್ನೂ ಏಳು ಜನರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.

ಅರ್ನಾಬ್ ಗೋಸ್ವಾಮಿ, ಪ್ರಿಯಾ ಮುಖರ್ಜಿ,ಶಿವಸುಬ್ರಮಣ್ಯಂ, ಅಮಿತ್ ಡೇವ್, ಸಂಜಯ್ ವರ್ಮಾ, ಶಿವೇಂದ್ರ ಮುಲ್ಧರ್ಕರ್ ಮತ್ತು ರಂಜಿತ್ ವಾಲ್ಟರ್ ಮುಖ್ಯ ಆರೋಪಿಗಳು ಮತ್ತು 16 ರಿಂದ 22 ಸಂಖ್ಯೆಯನ್ನು ಹೊಸದಾಗಿ ಸೇರಿಸಲಾಗಿದೆ.

ಕಳೆದ ವರ್ಷ ಟಿಆರ್‌ಪಿ ಹಗರಣ ಬೆಳಕಿಗೆ ಬಂದಿದ್ದು, ಕೆಲವು ಟಿವಿ ಚಾನೆಲ್‌ಗಳು ಟಿಆರ್‌ಪಿ ಸಂಖ್ಯೆಯನ್ನು ರಿಗ್ಗಿಂಗ್ ಮಾಡುತ್ತಿವೆ ಎಂದು ಆರೋಪಿಸಿ ಬಾರ್ಕ್ ಹನ್ಸಾ ರಿಸರ್ಚ್ ಗ್ರೂಪ್ ಮೂಲಕ ದೂರು ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಬಾರ್ಕ್‌ನ ಮಾಜಿ ಸಿಒಒ ಸೇರಿದಂತೆ 13 ಜನರನ್ನು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಹನ್ಸ ರಿಸರ್ಚ್ ಗ್ರೂಪ್‌ನ ಮಾಜಿ ಅಧಿಕಾರಿಗಳು, ಸುದ್ದಿ ವಾಹಿನಿಗಳ ಮಾಲೀಕರು ಮತ್ತು ಒಬ್ಬ ರಿಪಬ್ಲಿಕ್ ಮೀಡಿಯಾ ಉದ್ಯೋಗಿ, ಸಹಾಯಕ ಉಪಾಧ್ಯಕ್ಷ (ವಿತರಣೆ) ಘಾನ್ಶ್ಯಾಮ್ ಸಿಂಗ್ ಸೇರಿದಂತೆ 12 ಮಂದಿ ವಿರುದ್ಧ ಚಾರ್ಜ್‌ಶೀಟ್ ತಯಾರು ಮಾಡಲಾಗಿದೆ. ಮೋಸ, ಕ್ರಿಮಿನಲ್ ಪಿತೂರಿ ಮತ್ತು ಸಾಕ್ಷ್ಯಗಳ ನಾಶದ ಆರೋಪಗಳನ್ನು ಅವರ ಮೇಲೆ ಹೊರಿಸಲಾಗಿದೆ.

ABOUT THE AUTHOR

...view details