ಧಮ್ತಾರಿ(ಛತ್ತೀಸ್ಗಢ): 500 ರೂಪಾಯಿ ಕಳ್ಳತನ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದರಿಂದ ಕುಟುಂಬದ ಎಲ್ಲ ಸದಸ್ಯರು ವಿಷ ಸೇವಿಸಿ, ಸಾವಿಗೆ ಯತ್ನಿಸಿರುವ ಘಟನೆ ಛತ್ತೀಸ್ಗಢದ ಧಮ್ತಾರಿ ಎಂಬಲ್ಲಿ ನಡೆದಿದೆ.
ದಿಲೀಪ್ ಯಾದವ್ ಕುಟುಂಬದ ಮೇಲೆ ನೆರೆ ಮನೆಯಲ್ಲಿ ವಾಸವಾಗಿದ್ದ ಕುಟುಂಬವೊಂದು ಹಣ ಕಳ್ಳತನದ ಆರೋಪ ಮಾಡಿದೆ. ತಾವು ಹಣ ಕದ್ದಿಲ್ಲ ಎಂದು ದಿಲೀಪ್ ಯಾದವ್ ಹೇಳಿದ್ದಾರೆ. ಆದರೆ ನೆರೆ ಮನೆಮಂದಿ ಇದನ್ನು ಊರು ತುಂಬೆಲ್ಲ ಹೇಳಲು ಶುರು ಮಾಡಿದ್ದರಂತೆ. ಇದರಿಂದ ನೊಂದಿರುವ ಕುಟುಂಬ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆ ನಡೆದ ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಹೀಗಾಗಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.