ಮುಂಬೈ: ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ರೀತಿ ಸಮಾಜಸೇವೆಯಲ್ಲಿ ತೊಡಗಿದ್ದ ಇಲ್ಲೋರ್ವರು ಈಗ ಆ ವೃತ್ತಿ ತೊರೆದು ಲೈಂಗಿಕ ಕಾರ್ಯಕರ್ತರ ಸಬಲೀಕರಣಕ್ಕೆ ಮುಂದಾಗಿದ್ದಾರೆ. ತ್ರಿವೇಣಿ ಆಚಾರ್ಯ, ವೇಶ್ಯೆಯರಿಗಾಗಿ ದುಡಿಯುತ್ತಿರುವ ಸಮಾಜಸೇವಕಿ, ಪತ್ರಿಕೋದ್ಯಮವನ್ನು ತೊರೆದು ವೇಶ್ಯಾವಾಟಿಕೆಯಲ್ಲಿ ಜೀವನ ಮಾಡುತ್ತಿರುವ ಜನರ ಏಳ್ಗೆಗೆ ಶ್ರಮಿಸುತ್ತಿದ್ದಾರೆ.
ಈಗ ಇವರು ಬರೋಬ್ಬರಿ ಆರು ಸಾವಿರ ಮಹಿಳೆಯರಿಗೆ ಆಸರೆಯಾಗಿದ್ದಾರೆ. 'ಈಟಿವಿ ಭಾರತ' ಜೊತೆ ತಮ್ಮ ಜೀವನದ ವೃತ್ತಾಂತವನ್ನು ಬಿಚ್ಚಿಟ್ಟಿದ್ದಾರೆ. ಪತ್ರಿಕೋದ್ಯಮ ತೊರೆದು ಪೂರ್ಣಾವಧಿ ಸಮಾಜಸೇವಕಿಯಾಗಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ತ್ರಿವೇಣಿ ಆಚಾರ್ಯ, ನಾನು ಪತ್ರಕರ್ತೆ ಆಗಿದ್ದ ವೇಳೆ ದೊಡ್ಡ ನಟರೊಬ್ಬರು ತಮ್ಮ ಹುಟ್ಟುಹಬ್ಬವನ್ನು ಆಚರಿಸಲು ವೇಶ್ಯಾಗೃಹಕ್ಕೆ ಹೋಗುತ್ತಿದ್ದರು. ಅಲ್ಲಿ ಸಾಕಷ್ಟು ಚಿಕ್ಕ ಹುಡುಗಿಯರಿದ್ದರು. ಕೆಲವರನ್ನು ಬಲವಂತವಾಗಿ ವ್ಯಾಪಾರಕ್ಕೆ ತಳ್ಳಲಾಗಿತ್ತು. ನಾನು ಅದನ್ನು ನೋಡಿ ಮರುಗಿ ಅವರೆಲ್ಲರನ್ನೂ ಅದರಿಂದ ಹೊರತರಲು ಬಯಸಿದ್ದೆ. ಹಾಗಾಗಿ ಪತ್ರಿಕೋದ್ಯಮ ತೊರೆದು ಪೂರ್ಣಾವಧಿ ಸಮಾಜ ಸೇವಕಿಯಾದೆ ಎನ್ನುತ್ತಾರೆ ತ್ರಿವೇಣಿ ಆಚಾರ್ಯ.
ಇದನ್ನೂ ಓದಿ: ಯುದ್ಧ ಹಳೆಯದು.. ಅಹಿಂಸೆಯೊಂದೇ ದಾರಿ.. ರಷ್ಯಾ-ಉಕ್ರೇನ್ ಯುದ್ಧದ ಕುರಿತು ದಲೈ ಲಾಮಾ ಮಾತು