ಕರ್ನಾಟಕ

karnataka

ETV Bharat / bharat

ಚೀನಾಗೆ ಕೌಂಟರ್​ ನೀಡಲು ಹೊಸ ಆಯುಧ.. ಭಾರತೀಯ ಸೇನೆಗೆ ತ್ರಿಶೂಲ್​, ವಜ್ರ! - ಭಾರತೀಯ ಸೇನೆಗೆ ಮಾರಕವಲ್ಲದ ಆಯುಧ

ಗಡಿಯಲ್ಲಿ ಚೀನಾ ಸೈನಿಕರಿಗೆ ತಿರುಗೇಟು ನೀಡಲು ಇದೀಗ ಭಾರತೀಯ ಬತ್ತಳಿಕೆಗೆ ಹೊಸದೊಂದು ಅಸ್ತ್ರ ಸೇರಿಕೊಳ್ಳಲಿದ್ದು, ಖಾಸಗಿ ಕಂಪನಿಯಿಂದ ಎಲೆಕ್ಟ್ರಿಕ್​ ತ್ರಿಶೂಲ ಹಾಗೂ ವಜ್ರ ಸಜ್ಜುಗೊಂಡಿದೆ.

Trishul
Trishul

By

Published : Oct 18, 2021, 8:36 PM IST

ನವದೆಹಲಿ: ಕಳೆದ ವರ್ಷ ಗಲ್ವಾನ್​ ವ್ಯಾಲಿ ಪ್ರದೇಶದಲ್ಲಿ ಭಾರತೀಯ ಯೋಧರ ಮೆಲೆ ಚೀನಿಯರು ಅನೇಕ ರೀತಿಯ ಮೊನಚಾದ ಆಯುಧ(ಮಾರಕವಲ್ಲ) ಬಳಕೆ ಮಾಡಿ ದಾಳಿ ನಡೆಸಿದ್ದರು. ಇದೀಗ ಭಾರತೀಯ ಯೋಧರು ಕೂಡ ಇಂತಹ ಆಯುಧ ಹೊಂದುವ ಕಾಲ ದೂರ ಉಳಿದಿಲ್ಲ. ಉಭಯ ದೇಶದ ಸೈನಿಕರು ಮುಖಾಮುಖಿಯಾದ ಸಂದರ್ಭದಲ್ಲಿ ಅವರನ್ನ ತಾತ್ಕಾಲಿಕವಾಗಿ ನಿಷ್ಕ್ರೀಯಗೊಳಿಸುವ ಉದ್ದೇಶದಿಂದ ಎಲೆಕ್ಟ್ರಿಕ್​ ತ್ರಿಶೂಲ ಹಾಗೂ ವಜ್ರ(ಸ್ಯಾಂಪರ್​​​ ಪಂಚ್​) ಆಯುಧ ಖಾಸಗಿ ಸಂಸ್ಥೆಯಿಂದ ಅಭಿವೃದ್ಧಿಗೊಳಿಸಲಾಗಿದೆ.

ಮೊನಚಾದ ವಜ್ರ ಮತ್ತು ತ್ರಿಶೂಲ್​​ ಅಪಾಸ್ಟರಾನ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯಂದ ಅಭಿವೃದ್ಧಿಗೊಂಡಿದ್ದು, ಎದುರಾಳಿ ಶತ್ರುವಿನೊಂದಿಗೆ ಹೋರಾಟ ನಡೆಸಲು ಇವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ಹೇಳಲಾಗಿದೆ.

ಇದನ್ನೂ ಓದಿರಿ:ಹಾವು ಕಚ್ಚಿ ಪ್ರಾಣ ಕಳೆದುಕೊಂಡ ಅಕ್ಕ-ತಮ್ಮ.. ಸಾಂಗ್ಲಿಯಲ್ಲಿ ದಾರುಣ ಘಟನೆ

ಕಂಪನಿ ತಿಳಿಸಿರುವ ಪ್ರಕಾರ, ಎಲೆಕ್ಟ್ರಿಕ್​ ತ್ರಿಶೂಲ್​ ಇದಾಗಿದ್ದು, ವ್ಯಕ್ತಿಯ ಪ್ರಾಣಕ್ಕೆ ಯಾವುದೇ ರೀತಿಯ ಹಾನಿಯಾಗಲ್ಲ. ಆದರೆ, ಶತ್ರುವನ್ನ ತಾತ್ಕಾಲಿಕವಾಗಿ ನಿಷ್ಕ್ರೀಯಗೊಳಿಸಬಹುದಾಗಿದೆ ಎಂದು ಹೇಳಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಂಡಿರುವ ಅಧಿಕಾರಿ ಮೋಹಿತ್ ಕುಮಾರ್​, ಸ್ಯಾಂಪರ್​ ಪಂಚ್​​ ಚಳಿಗಾಲದ ರಕ್ಷಣಾ ಕೈಗವಸುಗಳಂತೆ ಧರಿಸಬಹುದಾಗಿದ್ದು, ಶತ್ರು ಪಡೆಗಳಿಗೆ ಪಂಚ್​ ನೀಡುವುದರಿಂದ ಹಿಮ್ಮೆಟ್ಟಿಸಬಹುದು ಎಂದಿದ್ದಾರೆ.

ಗಲ್ವಾನ್ ವ್ಯಾಲಿ ಘರ್ಷಣೆ ಬಳಿಕ ಚೀನಿ ಸೈನಿಕರು ಬಳಕೆ ಮಾಡಿದ್ದ ಸ್ಟಿಕ್​​ ಹಾಗೂ ಟಾಸರ್​​ಗಳು ಮಾರಕವಲ್ಲದ ಉಪಕರಣವಾಗಿದ್ದು, ಅಂತಹ ಉಪಕರಣ ಅಭಿವೃದ್ಧಿಪಡಿಸಲು ಭಾರತೀಯ ಭದ್ರತಾ ಪಡೆ ನಮ್ಮನ್ನ ಕೇಳಿಕೊಂಡಿದ್ದವು. ಇದೀಗ ನಾವು ಅದೇ ರೀತಿಯ ಅಸ್ತ್ರ ತಯಾರು ಮಾಡಿದ್ದು, ವಜ್ರಗಳನ್ನ ಸೈನಿಕರ ಮೇಲೆ ಆಕ್ರಮಣಕಾರಿಯಾಗಿ ಬಳಕೆ ಮಾಡಲು ಬುಲೆಟ್​​ ಪ್ರೂಫ್​ ವಾಹನ ಪಂಕ್ಚರ್ ಮಾಡಲು ಬಳಸಬಹುದು ಎಂದಿದ್ದಾರೆ.

ಎಲೆಕ್ಟ್ರಿಕ್ ತ್ರಿಶೂಲ್ ಮಾರಣಾಂತಿಕವಲ್ಲ. ಆದರೆ, ವಿದ್ಯುತ್​ ಪ್ರಸರಣದ ಮೂಲಕ ಶತ್ರುಗಳನ್ನ ತಾತ್ಕಾಲಿಕವಾಗಿ ನಿಷ್ಕ್ರೀಯಗೊಳಿಸಬಹುದು ಎಂದು ಉತ್ತರ ಪ್ರದೇಶ ಮೂಲದ ಅಪಾಸ್ಟರಾನ್​ ಪ್ರೈವೇಟ್​ ಲಿಮಿಟೆಡ್​​ ಸಂಸ್ಥೆ ತಿಳಿಸಿದೆ.

ABOUT THE AUTHOR

...view details