ಕರ್ನಾಟಕ

karnataka

ETV Bharat / bharat

ಪತಿಯ ಚಿತೆಗೆ ಹಾರಿ ಮಹಿಳೆಯಿಂದ ಆತ್ಮಹತ್ಯಾ ಯತ್ನ: ತ್ರಿಪುರಾ ಶಿಕ್ಷಕರ ಕತೆ-ವ್ಯಥೆ..!

ಸುಪ್ರೀಂ ಕೋರ್ಟ್​ ಇತ್ತೀಚೆಗೆ ನೀಡಿದ ತೀರ್ಪಿನಿಂದ ತ್ರಿಪುರಾದಲ್ಲಿ ಸಾವಿರಾರು ಮಂದಿ ಶಿಕ್ಷಕರು ಉದ್ಯೋಗ ಕಳೆದುಕೊಂಡಿದ್ದು, ಇದರಿಂದ ನೊಂದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಪತ್ನಿ ಕೂಡಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

woman attempts suicide in tripura
ಪತಿಯ ಚಿತೆಗೆ ಹಾರಿ ಮಹಿಳೆಯಿಂದ ಆತ್ಮಹತ್ಯಾ ಯತ್ನ

By

Published : Jan 3, 2021, 4:45 AM IST

ಅಗರ್ತಲಾ (ತ್ರಿಪುರಾ):ಪತಿಯ ಚಿತೆಯೊಳಗೆ ಹಾರಿ ಪತ್ನಿಯೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತ್ರಿಪುರಾದ ಪುರಾನ್ ರಾಜ್​ಬಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಉವಾಂಗ್​ಚೆರಾ ಎಂಬಲ್ಲಿ ಘಟನೆ ನಡೆದಿದ್ದು, ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ.

ಶೆಫಾಲಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯಾಗಿದ್ದು, ಆಕೆಯ ಪತಿ ಉತ್ತಮ್ ಪ್ರಸಮಣಿ (33) ನಿರುದ್ಯೋಗದಿಂದ ಆತ್ಮಹತ್ಯೆ ಮಾಡಿಕೊಂಡಿದ್ದನು.

ಇತ್ತೀಚೆಗೆ ಸುಪ್ರೀಂ ಕೋರ್ಟ್​ ನೀಡಿದ ಆದೇಶದಿಂದ ತ್ರಿಪುರಾದ 10,323 ಮಂದಿ ಶಿಕ್ಷಕರು ತಮ್ಮ ಉದ್ಯೋಗ ಕಳೆದುಕೊಳ್ಳಬೇಕಾಗಿದ್ದು, ಈ ಶಿಕ್ಷಕರಲ್ಲಿ ಉತ್ತಮ್ ಪ್ರಸಮಣಿ ಕೂಡಾ ಒಬ್ಬನಾಗಿದ್ದನು.

ಇದನ್ನೂ ಓದಿ:ರೈತರ ನ್ಯಾಯ ಸಮ್ಮತ ಬೇಡಿಕೆ ಆಲಿಸದೆ ಕೇಂದ್ರದ ಜಾಣ ಕುರುಡುತನ: ಪ್ರಿಯಾಂಕಾ ಗಾಂಧಿ

ಸದ್ಯಕ್ಕೆ ನಿರುದ್ಯೋಗಿಯಾಗಿದ್ದ ಉತ್ತಮ್ ಪ್ರಸಮಣಿಗೆ ಜೀವನ ನಿರ್ವಹಣೆ ಕಷ್ಟವಾಗಿತ್ತು. ಹಲವಾರು ಮಂದಿಯಿಂದ ಹಾಗೂ ಬ್ಯಾಂಕ್​​ಗಳಿಂದ ಸಾಲ ತೆಗೆದುಕೊಂಡಿದ್ದನು. ತೆಗೆದುಕೊಂಡ ಸಾಲ ತೀರಿಸಲಾಗದೇ ಉತ್ತಮ್​ ಪ್ರಸಮಣಿ ತಾನು ಮಲಗುವ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇಬ್ಬರು ಮಕ್ಕಳ ತಂದೆಯಾಗಿರುವ ಉತ್ತಮ್ ಉದ್ಯೋಗ ಕಳೆದುಕೊಂಡಾಗಿನಿಂದ ಖಿನ್ನತೆಗೆ ಒಳಗಾಗಿದ್ದನು. ಸಾಲ ತೀರಿಸುವಂತೆ ಬ್ಯಾಂಕ್​ಗಳು ಹಾಗೂ ಖಾಸಗಿ ವ್ಯಕ್ತಿಗಳು ಸಾಕಷ್ಟು ಒತ್ತಡ ಹಾಕುತ್ತಿದ್ದರು ಎಂದು ಉತ್ತಮ್ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.

ABOUT THE AUTHOR

...view details