ಕರ್ನಾಟಕ

karnataka

By

Published : Jun 1, 2021, 4:35 PM IST

ETV Bharat / bharat

ಕೊರೊನಾ ವ್ಯಾಕ್ಸಿನೇಷನ್​ ಅಭಿಯಾನದಲ್ಲಿ ತ್ರಿಪುರಾ ರಾಜ್ಯಕ್ಕೆ ಅಗ್ರಸ್ಥಾನ

ತ್ರಿಪುರಾ ರಾಜ್ಯದಲ್ಲಿ 45 ವರ್ಷ ಮೇಲ್ಪಟ್ಟ ಸುಮಾರು ಶೇ.89 ಜನರಿಗೆ ಕೋವಿಡ್​ ಮೊದಲ ಹಂತದ ಲಸಿಕೆ ನೀಡಿಕೆ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ಬಿಪ್ಲಬ್​​ ಕುಮಾರ್​ ದೇಬ್​ ಹೇಳಿದ್ದಾರೆ..

biplab
biplab

ಅಗರ್ತಲಾ/ತ್ರಿಪುರಾ: 45 ವರ್ಷ ಮೇಲ್ಪಟ್ಟವರಿಗೆ ಹೆಚ್ಚು ಲಸಿಕೆ ಹಾಕಿದ ರಾಜ್ಯಗಳ ಪೈಕಿ ತ್ರಿಪುರಾ ಅಗ್ರಸ್ಥಾನದಲ್ಲಿದೆ. ಅಲ್ಲದೇ ಕೊರೊನಾ ಪಾಸಿಟಿವಿಟಿ ದರ ಸಹ ಕಡಿಮೆಯಾಗುತ್ತಿದೆ.

ರಾಜ್ಯದಲ್ಲಿ 45 ವರ್ಷ ಮೇಲ್ಪಟ್ಟ ಸುಮಾರು ಶೇ.89 ಜನರಿಗೆ ಕೋವಿಡ್​ ಮೊದಲ ಹಂತದ ಲಸಿಕೆ ನೀಡಿಕೆ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ಬಿಪ್ಲಬ್​​ ಕುಮಾರ್​ ದೇಬ್ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಕೋವಿಡ್​ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸರ್ಕಾರ ಕೈಗೊಂಡ ಕ್ರಮಗಳನ್ನು ಸರಿಯಾಗಿ ಅನುಸರಿಸಿದ ಕಾರಣ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಅವರು ಹೇಳಿದರು.

ವೈರಸ್ ವಿರುದ್ಧ ಹೋರಾಡುವಲ್ಲಿ ವೈದ್ಯರು, ದಾದಿಯರು ಮತ್ತು ಇತರ ಆರೋಗ್ಯ ಸಿಬ್ಬಂದಿಯ ಪಾತ್ರವನ್ನು ದೇಬ್ ಶ್ಲಾಘಿಸಿದರು. ಅವರ ಸಹಕಾರಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.

ತ್ರಿಪುರಾದಲ್ಲಿ ಕೋವಿಡ್​ ಪಾಸಿಟಿವಿಟಿ ದರ ಸಹ ಗಣನೀಯವಾಗಿ ಕಡಿಮೆಯಾಗ್ತಿದೆ. ಮೇ 29ರಂದು ರಾಜ್ಯವು ಶೇ.6.39ರಷ್ಟು ಪಾಸಿಟಿವಿಟಿ ದರವನ್ನು ದಾಖಲಿಸಿದ್ದರೆ, ಮೇ 30ರಂದು ಈ ಪ್ರಮಾಣ 2.51ಕ್ಕೆ ಇಳಿದಿದೆ.

ವ್ಯಾಕ್ಸಿನೇಷನ್ ಬಗ್ಗೆ ವಿವರಗಳನ್ನು ನೀಡಿದ ತ್ರಿಪುರಾ ಶಿಕ್ಷಣ ಸಚಿವ ರತನ್​ಲಾಲ್​ ನಾಥ್​, ರಾಜ್ಯದಲ್ಲಿ ಈವರೆಗೆ 16,06,456 ಡೋಸ್‌ಗಳನ್ನು ನೀಡಲಾಗಿದೆ. 10,98,818 ಜನರು ಮೊದಲ ಡೋಸ್ ಪಡೆದಿದ್ದರೆ, ಎರಡನೇ ಡೋಸ್‌ನ 5,07,638 ಜನರಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details