ಅಗರ್ತಲಾ (ತ್ರಿಪುರ) :6 ರಿಂದ 12ನೇ ತರಗತಿ ಓದುತ್ತಿರುವ ಎಲ್ಲಾ ಬಾಲಕಿಯರಿಗೆ ಉಚಿತ ನೈರ್ಮಲ್ಯ ಕರವಸ್ತ್ರ(ಸ್ಯಾನಿಟರಿ ನಾಪ್ಕಿನ್) ನೀಡುವ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎಂದು ತ್ರಿಪುರ ಶಿಕ್ಷಣ ಸಚಿವ ರತನ್ ಲಾಲ್ ನಾಥ್ ತಿಳಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮಾರುಕಟ್ಟೆಯಲ್ಲಿ ಒಂದು ಪ್ಯಾಕ್ ನೈರ್ಮಲ್ಯ ಕರವಸ್ತ್ರಕ್ಕೆ 28 ರಿಂದ 35 ರೂಪಾಯಿದೆ. ಹೀಗಾಗಿ, ಮುಟ್ಟಿನ ಆರೋಗ್ಯ ಉತ್ತೇಜಿಸುವುದಕ್ಕಾಗಿ ರಾಜ್ಯದ ಶಾಲಾ ಬಾಲಕಿಯರಿಗೆ ಉಚಿತ ಸ್ಯಾನಿಟರಿ ನಾಪ್ಕಿನ್ ನೀಡುವ ಪ್ರಸ್ತಾಪವನ್ನು ತ್ರಿಪುರ ಸರ್ಕಾರ ಅನುಮೋದಿಸಿದೆ.