ಅಗರ್ತಲಾ (ತ್ರಿಪುರಾ):ವಿಧಾನಸಭೆಯೊಳಗೆ ತ್ರಿಪುರಾ ಬಿಜೆಪಿ ಶಾಸಕರೊಬ್ಬರು ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಅಧಿವೇಶನ ನಡೆಯುತ್ತಿರುವಾಗ ಸದನದಲ್ಲಿ ಶಾಸಕ ಜದಾಬ್ಲಾಲ್ ನಾಥ್ ಅಶ್ಲೀಲ ವಿಡಿಯೋ ವೀಕ್ಷಿಸುತ್ತಿರುವುದು ಕಂಡುಬಂದಿದೆ.
ಈಗ ವೈರಲ್ ವಿಡಿಯೋದಲ್ಲಿ ಶಾಸಕರು ತಮ್ಮ ಟ್ಯಾಬ್ನಲ್ಲಿ ಅಶ್ಲೀಲ ವಿಡಿಯೋ ಪ್ಲೇ ಆಗುತ್ತಿರುವುದು ಸೆರೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ಚುನಾಯಿತ ಪ್ರತಿನಿಧಿಯೊಬ್ಬರು ಇಂತಹ ಕೆಲಸದಲ್ಲಿ ತೊಡಗಿರುವುದು ನಾಚಿಕೆಗೇಡು ಎಂದು ನೆಟಿಜನ್ಗಳು ಆಕ್ರೋಶ ಹೊರಹಾಕಿದ್ದಾರೆ.