ಗಯಾ:ಬಿಹಾರದ ಗಯಾದಲ್ಲಿ ಒಂದೇ ಕುಟುಂಬದ ಮೂವರ ಹತ್ಯೆ ಮಾಡಲಾಗಿದೆ. ಮನೆಯ ಅಳಿಯನೇ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗ್ತಿದೆ. ಕುಟುಂಬದ ಇತರ ಮೂವರ ಮೇಲೂ ಹಲ್ಲೆ ಮಾಡಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಎಲ್ಲರನ್ನೂ ಪಾಟ್ನಾಗೆ ರವಾನಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆಯಲ್ಲಿ ಒಂದು ಮಗು ಕೂಡ ಕೊಲೆಯಾಗಿದೆ. ರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆ ಮನೆಯ ಅಳಿಯ ಕುಡಿದ ಅಮಲಿನಲ್ಲಿ ಈ ಕೃತ್ಯವೆಸಗಿದ್ದಾನೆ ಎಂದು ಹೇಳಲಾಗುತ್ತಿದೆ.
ಸ್ಥಳೀಯರ ಪ್ರಕಾರ, ರಾಂಪುರ ಭೂನಿಟೋಳಿಯಲ್ಲಿ ಮೃತ ಮುನ್ನಾ ಮಾಂಝಿ ಅವರ ಅಳಿಯ ರಘು ಮಾಂಝಿ ಈ ಕೊಲೆಯ ಆರೋಪಿಯಾಗಿದ್ದಾನೆ. ಆರೋಪಿ ರಾಂಪುರ್ ಭುನಿಟೋಲಿಯಲ್ಲಿನ ಅತ್ತೆಯ ಮನೆಯಲ್ಲಿ ವಾಸಿಸುತ್ತಿದ್ದನು. ನಿನ್ನೆ ರಾತ್ರಿ ಆರೋಪಿ ತನ್ನ ಮಾವ ಮುನ್ನಾ ಮಾಂಝಿ, ಅತ್ತೆ ಗೀತಾದೇವಿ, ಅವರ ಮೂವರು ಮಕ್ಕಳಾದ ಲಕ್ಕಿ ಕುಮಾರ್, ಲೇದಾ ಕುಮಾರ್ , ಚಿಂಟು ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾನೆ. ರಘು ಮಾಂಝಿ ಪತ್ನಿ ಗೋರ್ಕಿ ದೇವಿಯ ಮೇಲೂ ಹಲ್ಲೆ ನಡೆಸಿದ್ದಾನೆ.
ಇದನ್ನೂ ಓದಿ:ಕೇರಳದಲ್ಲಿ ಗುಂಪು ಗಲಾಟೆ.. ಚಾಕುವಿನಿಂದ ಇರಿದು ಓರ್ವನ ಬರ್ಬರ ಹತ್ಯೆ
ಬೆಳಗ್ಗೆ ಮೂರರಿಂದ ನಾಲ್ಕು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಆರೋಪಿ ಮಾನ್‌ಪುರ ನಿವಾಸಿಯಾಗಿದ್ದಾನೆ. ಅವನ ಹೆಸರು ರಘು ಮಾಂಝಿ ಮತ್ತು ಆತ ಅತ್ತೆಯ ಮನೆಯಲ್ಲಿ ಇದ್ದ. ಆರೋಪಿ ಮನೆಯ ಬಾಗಿಲು ಮುಚ್ಚಿ ಎಲ್ಲರ ಮೇಲೂ ಹಲ್ಲೆ ಮಾಡಿದ್ದಾನೆ. ಒಂದು ಮಗು ಮತ್ತು ಮಹಿಳೆಯ ಶವ ಅಲ್ಲೇ ಬಿದ್ದಿತ್ತು. ಉಳಿದವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ ಇಲ್ಲಿಯ ತನಕ ಮೂವರು ಮೃತಪಟ್ಟಿದ್ದು, ಇನ್ನೂ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಕುಟುಂಬಸ್ಥರಾದ ಶಶಿ ಮಾಂಝಿ ತಿಳಿಸಿದ್ದಾರೆ.