ರತ್ಲಾಮ್:ಒಂದು ವಾರದ ಹಿಂದೆ ನಡೆದ ತ್ರಿವಳಿ ಕೊಲೆಯ ಪ್ರಮುಖ ಆರೋಪಿಯನ್ನು ಪೊಲೀಸರು ಗುರುವಾರ ರಾತ್ರಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಇಲ್ಲಿನ ಖಾಚ್ರೊದ್ ರಸ್ತೆಯಲ್ಲಿ ನಡೆದಿದೆ.
ವಾರದ ಹಿಂದೆ ನಡೆದ ತ್ರಿವಳಿ ಕೊಲೆ:
ರತ್ಲಾಮ್ ನಗರದ ಔದ್ಯೋಗಿಕ ಠಾಣಾ ವ್ಯಾಪ್ತಿಯ ರಾಜೀವ್ ನಗರದ ಮನೆಯೊಂದರಲ್ಲಿ 50 ವರ್ಷದ ಗೋವಿಂದ್ ರಾಮ್ ಸೋಲಂಕಿ, ಆತನ ಪತ್ನಿ ಶಾರದಾ ಮತ್ತು 20 ವರ್ಷದ ಮಗಳು ದಿವ್ಯಾ ವಾಸಿಸುತ್ತಿದ್ದರು. ದಿವ್ಯಾ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದರು. ನವೆಂಬರ್ 25ರಂದು ಈ ಮೂವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದು ಮನೆಗಳ್ಳತನ ಮಾಡಿ ಪರಾರಿಯಾಗಿದ್ದರು. ದಿವ್ಯಾ ಸ್ನೇಹಿತೆ ನವೆಂಬರ್ 26ರ ಬೆಳಗ್ಗೆ ಮನೆಗೆ ಬಂದು ನೋಡಿದಾಗ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಕೇಸು ದಾಖಲಿಸಿಕೊಂಡ ರತ್ಲಾಮ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದರು.
ಓದಿ:ಟ್ರಕ್-ಬೊಲೆರೊ ಮುಖಾಮುಖಿ ಡಿಕ್ಕಿ: ಐವರು ಸಾವು, 6 ಜನರಿಗೆ ಗಾಯ
ಪ್ರಮುಖ ಆರೋಪಿ ಎಸ್ಕೇಪ್:
ಬುಧವಾರ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಮೂವರನ್ನು ಬಂಧಿಸಿದ್ದರು. ಆದ್ರೆ ಈ ವೇಳೆ ಪ್ರಮುಖ ಆರೋಪಿ ದಿಲೀಪ್ ದೇವಲ್ ಪರಾರಿಯಾಗಿದ್ದ.