ಥಾಣೆ (ಮಹಾರಾಷ್ಟ್ರ):2018ರ ರಸ್ತೆ ಅಪಘಾತ ಪ್ರಕರಣವೊಂದರಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 47 ಲಕ್ಷ ರೂ. ಗೂ ಹೆಚ್ಚು ಪರಿಹಾರ ನೀಡಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೋಟಾರು ಅಪಘಾತಗಳ ಹಕ್ಕುಗಳ ನ್ಯಾಯಮಂಡಳಿ (Motor Accident Claims Tribunal - MACT) ಆದೇಶಿಸಿದೆ. ಎರಡು ತಿಂಗಳೊಳಗೆ ಪ್ರತಿ ವರ್ಷಕ್ಕೆ ಶೇ.7ರಷ್ಟು ಬಡ್ಡಿಯೊಂದಿಗೆ ಹಕ್ಕುದಾರರಿಗೆ ಹಣ ಪಾವತಿಸುವಂತೆ ಅಪರಾಧಿ ವಾಹನದ ಮಾಲೀಕರು ಮತ್ತು ಅದರ ವಿಮಾದಾರರಿಗೆ ಸೂಚಿಸಿದೆ.
2018ರ ಸೆಪ್ಟೆಂಬರ್ 9ರಂದು ಬಶೀರ್ ಶೇಖ್ (39) ಎಂಬುವರು ರಸ್ತೆ ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿದ್ದರು. ಆಟೋ ಬಿಡಿಭಾಗಗಳ ವ್ಯಾಪಾರದಲ್ಲಿ ತೊಡಗಿದ್ದ ಇವರು ವಾಹನ ರಿಪೇರಿ ಗ್ಯಾರೇಜ್ ನಡೆಸುತ್ತಿದ್ದರು. ತಿಂಗಳಿಗೆ ಸುಮಾರು 30 ಸಾವಿರ ರೂಪಾಯಿ ಗಳಿಸುತ್ತಿದ್ದರು. ಆ ವರ್ಷದ ಸೆ. 8ರಂದು ಬಶೀರ್ ಶೇಖ್ ತಮ್ಮ ಸೋದರ ಮಾವ ಮತ್ತು ಸ್ನೇಹಿತರೊಂದಿಗೆ ಮುಂಬೈ-ನಾಸಿಕ್ ಹೆದ್ದಾರಿಯಲ್ಲಿರುವ ರಸ್ತೆ ಬದಿಯ ಉಪಾಹಾರ ಗೃಹಕ್ಕೆ ಕಾರಿನಲ್ಲಿ ಊಟಕ್ಕೆ ಹೋಗಿದ್ದರು. ಸೆ.9ರಂದು ಬೆಳಗಿನ ಜಾವ 2.30ರ ಸುಮಾರಿಗೆ ಮನೆಗೆ ವಾಪಸಾಗುತ್ತಿದ್ದಾಗ ಧಾರಾಕಾರ ಮಳೆಯಾಗುತ್ತಿದ್ದರಿಂದ ರಸ್ತೆ ಬದಿ ವಾಹನ ನಿಲ್ಲಿಸಿದ್ದರು.
ಇದನ್ನೂ ಓದಿ:ನಿಂತಿದ್ದ ಲಾರಿಗೆ ಕಾರು ಡಿಕ್ಕಿ: 5 ಮಂದಿ ಸಾವು, 7 ಮಂದಿಗೆ ಗಂಭೀರ ಗಾಯ