ಭೋಪಾಲ್:ಮಧ್ಯಪ್ರದೇಶದ ಗುಣ್ ಜಿಲ್ಲೆಯಲ್ಲಿ ನಡೆದ ಘಟನೆವೊಂದು ಮಾನವ ಸಮಾಜ ತಲೆತಗ್ಗಿಸುವಂತೆ ಮಾಡಿದ್ದು, ಬುಡಕಟ್ಟು ಮಹಿಳೆಯೋರ್ವಳು ತನ್ನ ಗಂಡ ಕುಟುಂಬದ ಸದಸ್ಯನೋರ್ವನನ್ನ ಹೆಗಲ ಮೇಳೆ ಹೊತ್ತು ಮೂರು ಕಿಲೋ ಮೀಟರ್ ನಡೆದುಕೊಂಡು ಹೋಗಿದ್ದಾಳೆ.
ಭುಜದ ಮೇಲೆ ಗಂಡನ ಸಂಬಂಧಿ ಹೊತ್ತು ನಡೆಯುವ ಶಿಕ್ಷೆ ಇದರ ವಿಡಿಯೋ ಸದ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲೆಡೆಯಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ಯಾವ ಕಾರಣಕ್ಕಾಗಿ ಶಿಕ್ಷೆ!?
ಮಹಿಳೆ ನೀಡಿರುವ ದೂರಿನ ಪ್ರಕಾರ, ಈಗಾಗಲೇ ಗಂಡನಿಂದ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದುಕೊಂಡಿರುವ ಆಕೆ, ಬೇರೆ ವ್ಯಕ್ತಿ ಜತೆ ಸಂಬಂಧವಿಟ್ಟುಕೊಂಡಿದ್ದಾಳೆ. ಆದರೆ ಕಳೆದ ವಾರ ಆಕೆಯ ವಿಚ್ಛೇದಿತ ಗಂಡನ ಕುಟುಂಬದವರು ಹಾಗೂ ಗ್ರಾಮಸ್ಥರು ಮನೆಗೆ ನುಗ್ಗಿ ಮಹಿಳೆಯ ಅಪಹರಣ ಮಾಡಿ ಈ ಕ್ರೂರ ಶಿಕ್ಷೆ ನೀಡಿದ್ದಾರೆ. ಗಂಡನ ಕುಟುಂಬದ ವ್ಯಕ್ತಿಯೋರ್ವನನ್ನ ಹೆಗಲ ಮೇಲೆ ಹೊತ್ತುಕೊಂಡು ಮೂರು ಕಿಲೋ ಮೀಟರ್ ನಡೆದುಕೊಂಡು ಹೋಗುತ್ತಿರುವ ಮಹಿಳೆಗೆ ಹಿಂದಿನಿಂದ ಕೆಲವರು ದೊಣ್ಣೆ ಹಾಗೂ ಬ್ಯಾಟ್ನಿಂದ ಹೊಡೆದಿದ್ದಾರೆ.
ಮಧ್ಯಪ್ರದೇಶದಲ್ಲಿ ಮಹಿಳೆಗೆ ಕ್ರೂರ ಶಿಕ್ಷೆ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಇಲ್ಲಿಯವರೆಗೆ ನಾಲ್ವರು ಆರೋಪಿಗಳ ಬಂಧನ ಮಾಡಲಾಗಿದೆ. ಮಧ್ಯಪ್ರದೇಶದಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ, ಈ ಹಿಂದೆ ಜುಲೈನಲ್ಲಿ ಬೇರೆ ವ್ಯಕ್ತಿ ಜತೆ ಸಂಬಂಧ ಹೊಂದಿದ್ದ ಮಹಿಳೆಯೋರ್ವಳನ್ನ ಇದೇ ರೀತಿ ಅವಮಾನಿಸಲಾಗಿತ್ತು.