ಕರ್ನಾಟಕ

karnataka

ETV Bharat / bharat

ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಭೇಟಿ ಮಾಡಲು ಬುಡಕಟ್ಟು ನಾಯಕರಿಗೆ ಅವಕಾಶ ನಿರಾಕರಣೆ: ಗೃಹ ಬಂಧನ - ಬುಡಕಟ್ಟು ಸಂಘಟನೆ

ಪಶ್ಚಿಮ ಬಂಗಾಳದ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲು ಬುಡಕಟ್ಟು ಸಂಘಟನೆಗಳ ಪ್ರಮುಖರಿಗೆ ಅವಕಾಶ ನಿರಾಕರಿಸಲಾಗಿದೆ.

tribal-leaders-not-allowed-to-meet-the-president-droupadi-murmu-put-on-house-arrest
ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಭೇಟಿ ಮಾಡಲು ಬುಡಕಟ್ಟು ನಾಯಕರಿಗೆ ಅವಕಾಶ ನಿರಾಕರಣೆ: ಗೃಹ ಬಂಧನ

By

Published : Mar 28, 2023, 7:18 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ):ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರದಿಂದ ಎರಡು ದಿನಗಳ ಕಾಲ ಪಶ್ಚಿಮ ಬಂಗಾಳದ ಪ್ರವಾಸದಲ್ಲಿದ್ದಾರೆ. ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಷ್ಟ್ರಪತಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದ ಆರು ಬುಡಕಟ್ಟು ಸಂಘಟನೆಗಳ ಪ್ರಮುಖರನ್ನು ಪೊಲೀಸರು ಗೃಹ ಬಂಧನದಲ್ಲಿರಿಸಿದ್ದಾರೆ.

ಇಂದು ಶಾಂತಿನಿಕೇತನದಲ್ಲಿ ವಿಶ್ವಭಾರತಿಯ ವಾರ್ಷಿಕ ಘಟಿಕೋತ್ಸವದಲ್ಲಿ ದ್ರೌಪದಿ ಮುರ್ಮು ಪಾಲ್ಗೊಂಡಿದ್ದಾರೆ. ಈ ಸಂದರ್ಭದಲ್ಲಿ ರಾಷ್ಟ್ರಪತಿಗಳ ಭೇಟಿಗೆ ಅವಕಾಶ ಕೋರಿ ಆದಿವಾಸಿ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದ್ದರು. ಈ ಸಂಬಂಧ ವಿಶ್ವಭಾರತಿಯ ಹಂಗಾಮಿ ಕಾರ್ಯದರ್ಶಿ ಅಶೋಕ್ ಮಹತ್ ಅವರಿಗೆ ಪತ್ರ ಬರೆದಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ವಿಶ್ವವಿದ್ಯಾಲಯವು ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲು ಮುಖಂಡರಿಗೆ ಅನುಮತಿಯನ್ನು ನಿರಾಕರಿಸಿದೆ. ಹೀಗಾಗಿ ಎಲ್ಲ ಆರು ಸಂಘಟನೆಗಳು ಪ್ರಮುಖರನ್ನು ಇಂದು ಬೆಳಗ್ಗೆ 6 ಗಂಟೆಯಿಂದಲೇ ಅವರವರ ಮನೆಗಳಲ್ಲೇ ಗೃಹಬಂಧನದಲ್ಲಿ ಇರಿಸಲಾಗಿದೆ. ಮುಖಂಡರಾದ ರಾಮ್ ಸೊರೆನ್, ಸೋನಾ ಮುರ್ಮು, ಡಾ.ಬಿನೋಯ್ ಕುಮಾರ್ ಸೊರೆನ್, ಮಿಂಟಿ ಹೆಂಬ್ರಾಮ್, ರಥಿನ್ ಕಿಸ್ಕು, ಶಿಬು ಸೊರೆನ್ ಅವರನ್ನು ರಾಜ್ಯ ಪೊಲೀಸರು ಗೃಹ ಬಂಧನದಲ್ಲಿ ಇರಿಸಿದ್ದಾರೆ. ಮನೆಗಳ ಮುಂದೆ ಪೊಲೀಸರು ನಿಯೋಜಿಸಲಾಗಿದೆ. ರಾಷ್ಟ್ರಪತಿಗಳು ಶಾಂತಿನಿಕೇತನದಲ್ಲಿ ಇರುವವರೆಗೂ ಈ ಮುಖಂಡರು ತಮ್ಮ ಮನೆಗಳನ್ನು ಬಿಟ್ಟು ಹೋಗುವಂತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬುಡಕಟ್ಟು ಮುಖಂಡರ ಬೇಡಿಕೆಗಳೇನು?: ಬಿರ್ಭೂಮ್ ಜಿಲ್ಲೆಯ ದೆಯುಚಾ ಪಚಾಮಿ ಪ್ರದೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆಗಾಗಿ ರಾಜ್ಯ ಸರ್ಕಾರವು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ. ಆದರೆ, ಈ ಭಾಗದ ಮೂಲ ನಿವಾಸಿಗಳು ಗಣಿಗಾರಿಕೆಗೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ಬೋಲ್ಪುರ್​, ಶಾಂತಿನಿಕೇತನ ಪ್ರದೇಶದಲ್ಲಿ ಅನೇಕ ಬುಡಕಟ್ಟು ಜನರ ಭೂಮಿಯನ್ನು ಅತಿಕ್ರಮಿಸಲಾಗುತ್ತಿದೆ ಎಂಬ ಆರೋಪವನ್ನು ಬುಡಕಟ್ಟು ಸಂಘಟನೆಗಳು ಮಾಡುತ್ತಿವೆ.

ಬುಡಕಟ್ಟು ಜನರ ಭೂಮಿಯಲ್ಲಿ ರೆಸಾರ್ಟ್‌ಗಳು, ಹೋಟೆಲ್‌ಗಳು, ವಸತಿ, ಕಾಟೇಜ್‌ಗಳು, ಎತ್ತರದ ಕಟ್ಟಡಗಳು ಇತ್ಯಾದಿಗಳನ್ನು ನಿರ್ಮಿಸಲಾಗಿದೆ. ಈ ಸಮಸ್ಯೆಗಳಲ್ಲದೆ, ಬುಡಕಟ್ಟು ಸಂತಲ್ ಜನರ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ಕುರಿತು ತಮ್ಮ ಮನವಿಯನ್ನು ಸಲ್ಲಿಸಲು ಬುಡಕಟ್ಟು ಸಂಘಟನೆಗಳು ಮುಖ್ಯಸ್ಥರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲು ತೀರ್ಮಾನಿಸಿದ್ದರು.

"ದ್ರೌಪದಿ ಮುರ್ಮು ಅವರು ದೇಶದ ಮೊದಲ ಬುಡಕಟ್ಟು ರಾಷ್ಟ್ರಪತಿಗಳಾಗಿದ್ದಾರೆ. ಆದ್ದರಿಂದ ಆದಿವಾಸಿ ಜನರ ಸಮಸ್ಯೆಗಳ ಬಗ್ಗೆ ರಾಷ್ಟ್ರಪತಿಗಳ ಭೇಟಿಗೆ ನಿರ್ಧಾರ ಮಾಡಿದ್ದೆವು. ನಮ್ಮ ಸಮುದಾಯಗಳ ಬಡತನ, ಶಿಕ್ಷಣ ಮತ್ತು ಆರೋಗ್ಯದ ಸಮಸ್ಯೆ ಸೇರಿದಂತೆ ಬುಡಕಟ್ಟು ಜನಾಂಗದವರ ಹಲವು ಕಂದುಕೊರತೆಗಳ ಬಗ್ಗೆ ಗಮನ ಸೆಳೆಯಲು ನಿರ್ಧರಿಸಿದ್ದೇವು'' ಎಂದು ಮುಖಂಡರಾದ ರಾಮ್ ಸೊರೆನ್ ಮತ್ತು ಮಿಂಟಿ ಹೆಂಬ್ರಾಮ್ ತಿಳಿಸಿದ್ದಾರೆ.

''ಶಾಂತಿನಿಕೇತನದಲ್ಲಿ ವಿಶ್ವಭಾರತಿಯ ವಾರ್ಷಿಕ ಘಟಿಕೋತ್ಸವದಲ್ಲಿ ದ್ರೌಪದಿ ಮುರ್ಮು ಪಾಲ್ಗೊಳ್ಳುವ ಸಂದರ್ಭದಲ್ಲಿ ಭೇಟಿಗೆ ಅವಕಾಶ ಕಲ್ಪಿಸುವಂತೆ ವಿಶ್ವಭಾರತಿಗೆ ಪತ್ರ ಬರೆದಿದ್ದೇವೆ. ಆದರೆ, ಕೊನೆ ಕ್ಷಣದಲ್ಲಿ ನಮಗೆ ಅವಕಾಶ ನೀಡಲಿಲ್ಲ. ಬದಲಿಗೆ ಇಂದು ಬೆಳಗ್ಗೆಯಿಂದ ನನ್ನ ಮನೆಗಳ ಮುಂದೆ ಪೊಲೀಸರನ್ನು ನಿಯೋಜಿಸಿ, ಮನೆಯಲ್ಲೇ ನಮ್ಮನ್ನು ಇರಿಸಲಾಗಿದೆ. ಇವತ್ತು ಮನೆಯಿಂದ ಹೊರ ಹೋಗುವಂತಿಲ್ಲ ಎಂದು ಪೊಲೀಸರು ನಮ್ಮ ಮೇಲೆ ನಿಗಾ ವಹಿಸಿದ್ದಾರೆ'' ಎಂದು ಬುಡಕಟ್ಟು ಮುಖಂಡರು ಆರೋಪಿಸಿದ್ದಾರೆ.

ಇದನ್ನೂ ಓದಿ:ಪ್ರಬಲ ಹೋರಾಟಕ್ಕೆ ಸಿದ್ಧರಾಗಿರಿ: ಬಿಜೆಪಿ ನಾಯಕರಿಗೆ ಪ್ರಧಾನಿ ಮೋದಿ ಕರೆ

ABOUT THE AUTHOR

...view details