ಕರ್ನಾಟಕ

karnataka

ETV Bharat / bharat

ಕೇಂದ್ರದಿಂದ 'ಶಾಲಾ ನಾವೀನ್ಯತೆ ರಾಯಭಾರಿ ತರಬೇತಿ ಕಾರ್ಯಕ್ರಮ'ಕ್ಕೆ ಚಾಲನೆ : ಇದರ ವೈಶಿಷ್ಟ್ಯ ಏನು? - ನವದೆಹಲಿ

ಎಲ್ಲಾ ಏಕಲವ್ಯ ಮಾದರಿ ಶಾಲೆಗಳು, ನವೋದಯ ವಿದ್ಯಾಲಯಗಳು ಮತ್ತು ಕೇಂದ್ರ ವಿದ್ಯಾಲಯಗಳನ್ನು ಈ ಕಾರ್ಯಕ್ರಮದ ವ್ಯಾಪ್ತಿಗೆ ತರಲಾಗುವುದು. ಮುಂಬರುವ ಮೂರು ವರ್ಷಗಳಲ್ಲಿ ಬುಡಕಟ್ಟು ಪ್ರದೇಶಗಳು ಸೇರಿದಂತೆ ದೇಶಾದ್ಯಂತ ಇಂತಹ 740 ಶಾಲೆಗಳನ್ನು ತೆರೆಯಲಾಗುವುದು..

ಕೇಂದ್ರದಿಂದ 'ಶಾಲಾ ನಾವೀನ್ಯತೆ ರಾಯಭಾರಿ ತರಬೇತಿ ಕಾರ್ಯಕ್ರಮ' ಕ್ಕೆ ಚಾಲನೆ
ಕೇಂದ್ರದಿಂದ 'ಶಾಲಾ ನಾವೀನ್ಯತೆ ರಾಯಭಾರಿ ತರಬೇತಿ ಕಾರ್ಯಕ್ರಮ' ಕ್ಕೆ ಚಾಲನೆ

By

Published : Jul 16, 2021, 5:04 PM IST

ನವದೆಹಲಿ: ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜಂಟಿಯಾಗಿ 'ಶಾಲಾ ನಾವೀನ್ಯತೆ ರಾಯಭಾರಿ ತರಬೇತಿ ಕಾರ್ಯಕ್ರಮ' ( School Innovation Ambassador Training Program)ಕ್ಕೆ ಚಾಲನೆ ನೀಡಿದಾರೆ.

ಈ ಕಾರ್ಯಕ್ರಮವು 50,000 ಶಾಲಾ ಶಿಕ್ಷಕರಿಗೆ ನಾವೀನ್ಯತೆ, ಉದ್ಯಮಶೀಲತೆ, ವಿನ್ಯಾಸ ಚಿಂತನೆ, ಉತ್ಪನ್ನ ಅಭಿವೃದ್ಧಿ ಮತ್ತು ಕಲ್ಪನಾಭಿವೃದ್ಧಿ ಸೇರಿದಂತೆ ಐದು ವಿಭಿನ್ನ ಮಾಡ್ಯೂಲ್‌ಗಳಲ್ಲಿ ತರಬೇತಿ ನೀಡುವ ಗುರಿ ಹೊಂದಿದೆ.

ಸಚಿವಾಲಯಗಳು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದವು. ಎರಡು ತಿಂಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮವನ್ನು ಶಿಕ್ಷಣ ಸಚಿವಾಲಯದ ಇನ್ನೋವೇಶನ್ ಸೆಲ್ ಮತ್ತು ಶಾಲಾ ಶಿಕ್ಷಕರಿಗೆ ಎಐಸಿಟಿಇ ಸೃಜನಶೀಲತೆ ಮತ್ತು ಹೊಸತನವನ್ನು ಉತ್ತೇಜಿಸಲು ವಿನ್ಯಾಸಗೊಳಿಸಿದೆ.

ಎಐಸಿಟಿಇಯ ಇನ್ನೋವೇಶನ್ ಸೆಲ್ ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ 40 ತರಬೇತುದಾರರನ್ನು ನಿಯೋಜಿಸಿಕೊಂಡಿದೆ. ಜುಲೈ 20ರಿಂದ ತರಬೇತಿ ಕಾರ್ಯ ಪ್ರಾರಂಭವಾಗಲಿದೆ. ತರಬೇತಿಯನ್ನು ಆನ್‌ಲೈನ್​ನಲ್ಲಿ ನೀಡಲಾಗುತ್ತದೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅರ್ಜುನ್ ಮುಂಡಾ, ಬುಡಕಟ್ಟು ಸಚಿವಾಲಯವು ಬುಡಕಟ್ಟು ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣವನ್ನು ನೀಡುವ ಗುರಿ ಹೊಂದಿದೆ.

ಶಿಕ್ಷಕರಿಗೆ ಉತ್ತಮ ರೀತಿಯಲ್ಲಿ ತರಬೇತಿ ನೀಡಿದರೆ ಬುಡಕಟ್ಟು ವಿದ್ಯಾರ್ಥಿಗಳಿಗೆ ಸರಿಯಾಗಿ ಕಲಿಸಲು ಸಾಧ್ಯವಾಗುತ್ತದೆ ಮತ್ತು ಉತ್ತಮ ಕಲಿಕೆಯ ವಾತಾವರಣವನ್ನು ಉತ್ತೇಜಿಸುವಾಗ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಬೆಳೆಯುವಂತೆ ಮಾಡಬಹದು ಎಂದು ಅಭಿಪ್ರಾಯಪಟ್ಟರು.

ಎಲ್ಲಾ ಏಕಲವ್ಯ ಮಾದರಿ ಶಾಲೆಗಳು, ನವೋದಯ ವಿದ್ಯಾಲಯಗಳು ಮತ್ತು ಕೇಂದ್ರ ವಿದ್ಯಾಲಯಗಳನ್ನು ಈ ಕಾರ್ಯಕ್ರಮದ ವ್ಯಾಪ್ತಿಗೆ ತರಲಾಗುವುದು. ಮುಂಬರುವ ಮೂರು ವರ್ಷಗಳಲ್ಲಿ ಬುಡಕಟ್ಟು ಪ್ರದೇಶಗಳು ಸೇರಿದಂತೆ ದೇಶಾದ್ಯಂತ ಇಂತಹ 740 ಶಾಲೆಗಳನ್ನು ತೆರೆಯಲಾಗುವುದು ಎಂದು ಇದೇ ವೇಳೆ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಭವಿಷ್ಯದಲ್ಲಿ ಭಾರತೀಯ ವಿದ್ಯಾರ್ಥಿಗಳು ಜಾಗತಿಕ ಸಮಸ್ಯೆಗಳನ್ನು ನಾವೀನ್ಯತೆಯ ಮೂಲಕ ಪರಿಹರಿಸುತ್ತಾರೆ ಎಂದ ಅವರು, ಈ 21ನೇ ಶತಮಾನದ ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯತೆಯ ಮಹತ್ವವನ್ನು ಅವರು ಒತ್ತಿ ಹೇಳಿದರು.

ABOUT THE AUTHOR

...view details