ಹೈದರಾಬಾದ್: ಕೊರೊನಾ ವೈರಸ್ ಎಂಬ ಕರಾಳ ರಕ್ಕಸನ ನಡುವೆ ಬ್ಲಾಕ್ ಫಂಗಸ್ ಮತ್ತು ವೈಟ್ ಫಂಗಸ್ ಜನರಲ್ಲಿ ಇನ್ನಷ್ಟು ಭೀತಿಗೆ ಕಾರಣವಾಗಿದೆ. ವೈದ್ಯರ ಪ್ರಕಾರ ಈ ಶಿಲೀಂದ್ರಗಳು ರೋಗಿಯ ಹೃದಯ, ಮೂಗು ಮತ್ತು ಕಣ್ಣುಗಳಿಗೆ ಹಾನಿಯುಂಟು ಮಾಡುತ್ತದೆ.
ಅಲ್ಲದೇ ಶ್ವಾಸಕೋಶದ ಮೇಲೂ ಹಾನಿ ಮಾಡುತ್ತದೆ. ಮತ್ತೊಂದೆಡೆ ವೈಟ್ ಫಂಗಸ್ ಬ್ಲಾಕ್ ಫಂಗಸ್ಗಿಂತಲೂ ಹೆಚ್ಚು ಅಪಾಯಕಾರಿ. ಇಷ್ಟಾದರೂ ಈ ಎರಡೂ ಫಂಗಸ್ಗಳಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಚಿಕಿತ್ಸೆ ಲಭ್ಯವಿದೆ ಎನ್ನತ್ತಾರೆ ವೈದ್ಯರು.
ವೈಟ್ ಫಂಗಸ್ ಪ್ರಕರಣವು ಪೂರ್ವಾಂಚಲ್‌ನ ಮೌ ಜಿಲ್ಲೆಯ ಜನರಲ್ಲಿ ಕಳವಳ ಉಂಟುಮಾಡುತ್ತಿದೆ. ಇದು ಕೊರೊನಾದಂತೆಯೆ ರೋಗಲಕ್ಷಣಗಳನ್ನು ಹೊಂದಿರುವ ಸೋಂಕಾಗಿದೆ ಎಂದು ಹೇಳಲಾಗುತ್ತದೆ. ವೈಟ್ ಫಂಗಸ್ ರೋಗವು ಶ್ವಾಸಕೋಶಕ್ಕೆ ಸೋಂಕು ತಗುಲಿಸುತ್ತದೆ ಮತ್ತು ಅವುಗಳ ಹಾನಿಗೆ ಕಾರಣವಾಗಿದೆ. ಇದಲ್ಲದೇ ರೋಗಿಯಲ್ಲಿ ಉಸಿರಾಟ ಸಮಸ್ಯೆ ಕಂಡು ಬರುತ್ತದೆ. ಜೊತೆಗೆ ನಿರಂತರ ಎದೆನೋವು ಕಾಣಿಸಿಕೊಳ್ಳುತ್ತದೆ.
ಕಪ್ಪು ಶಿಲೀಂದ್ರ ಎನ್ನುವುದ್ಯಾಕೆ?
ಕೆಜಿಎಂಯು ವೈದ್ಯಕೀಯ ಅಧ್ಯಯನ ಕೇಂದ್ರ ಮತ್ತು ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕಿ ಡಾ.ಜೋತಿ ಬಾಜ್ಪೈ ಹೇಳುವಂತೆ, ಈ ಫಂಗಸ್ ಇತರ ಸಾಮಾನ್ಯ ಫಂಗಸ್ಗಳಂತೆ ಇದೆ. ಇದು ವೈಟ್ ಅಥವಾ ಬ್ಲಾಕ್ ಎಂಬುದಲ್ಲ. ಮ್ಯೂಕೋರ್ಮೈಕೋಸಿಸ್ ಒಂದು ಸೋಂಕಿನ ಫಂಗಸ್ ಅಷ್ಟೇ. ಇದು ಕಪ್ಪು ಬಣ್ಣದ್ದಾಗಿರುವುದರಿಂದ ಇದಕ್ಕೆ ಕಪ್ಪು ಶಿಲೀಂಧ್ರ ಎಂದು ಹೆಸರಿಡಲಾಗಿದೆ.
ಇದು ಕಪ್ಪು ಕಲೆಗಳಿಂದಾಗಿ ರೂಪುಗೊಳ್ಳುವ ಸೋಂಕಾಗಿರುವುದರಿಂದ ಬ್ಲಾಕ್ ಫಂಗಸ್ ಎಂದು ಕರೆಯಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಬ್ಲಾಕ್ ವೈಟ್ ಎಂಬ ಬಣ್ಣದ ಫಂಗಸ್ಗಳಿಲ್ಲ. ಜನರಿಗೆ ಅರ್ಥವಾಗಲೆಂದು ಕಪ್ಪು ಮತ್ತು ಬಿಳಿ ಫಂಗಸ್ ಎಂಬ ಹೆಸರುಗಳನ್ನು ನೀಡಲಾಗಿದೆ. ವೈಟ್ ಫಂಗಸ್ ಅಥವಾ ಕ್ಯಾಂಡಿಡಿಯಾಸಿಸ್ (ಕ್ಯಾಂಡಿಡಾ) ಕಣ್ಣು, ಮೂಗು ಮತ್ತು ಗಂಟಲಿನ ಮೇಲೆ ಕಡಿಮೆ ಪರಿಣಾಮ ಬೀರಲಿದೆ. ಇದು ಶ್ವಾಸಕೋಶದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದಿದ್ದಾರೆ ತಜ್ಞರು.