ಕರ್ನಾಟಕ

karnataka

ETV Bharat / bharat

ಭೀಕರ ರಸ್ತೆ ಅಪಘಾತ.. 9 ಮಹಿಳೆಯರು ಸೇರಿ 17 ಮಂದಿಗೆ ಗಂಭೀರ ಗಾಯ - ರಾಜಸ್ತಾನದಲ್ಲಿ ನಡೆದ ರಸ್ತೆ ಅಪಘಾತದಲ್ಲಿ 17 ಜನರಿಗೆ ಗಾಯ

ರಾಜಸ್ಥಾನದ ಉದಯ್​ಪುರ ಮಾರ್ಗವಾಗಿ ಗುಜರಾತ್​ನ ರಾಜ್​ಕೋಟ್​ನಿಂದ ಮಧ್ಯಪ್ರದೇಶದ ಬಿಂದ್​ಗೆ ಪ್ರಯಾಣಿಸುತ್ತಿದ್ದ ಬಸ್​ ಕಾರಿಗೆ ಡಿಕ್ಕಿಯಾಗಿದೆ. ದುರ್ಘಟನೆಯಲ್ಲಿ ಬಸ್​ ಪಲ್ಟಿಯಾಗಿ ಮಗುಚಿ ಬಿದ್ದಿದೆ. ಇದರಲ್ಲಿದ್ದ ಪ್ರಯಾಣಿಕರ ಪೈಕಿ 17 ಜನರು ಗಾಯಗೊಂಡಿದ್ದಾರೆ.

overturned
ಭೀಕರ ರಸ್ತೆ ಅಪಘಾತ

By

Published : Feb 2, 2022, 10:56 AM IST

ಚಿತ್ತೋರ್​ಗಢ(ರಾಜಸ್ಥಾನ): ಇಲ್ಲಿನ ಉದಯ್​ಪುರ ಕೋಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 9 ಮಹಿಳೆಯರು ಸೇರಿದಂತೆ 17 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ರಾಜಸ್ತಾನದ ಉದಯ್​ಪುರ ಮಾರ್ಗವಾಗಿ ಗುಜರಾತ್​ನ ರಾಜ್​ಕೋಟ್​ನಿಂದ ಮಧ್ಯಪ್ರದೇಶದ ಬಿಂದ್​ಗೆ ಪ್ರಯಾಣಿಸುತ್ತಿದ್ದ ಬಸ್​ ಕಾರಿಗೆ ಡಿಕ್ಕಿಯಾಗಿದೆ. ದುರ್ಘಟನೆಯಲ್ಲಿ ಬಸ್​ ಪಲ್ಟಿಯಾಗಿ ಮಗುಚಿ ಬಿದ್ದಿದೆ. ಇದರಲ್ಲಿದ್ದ ಪ್ರಯಾಣಿಕರ ಪೈಕಿ 17 ಜನರು ಗಾಯಗೊಂಡಿದ್ದಾರೆ. 9 ಮಹಿಳೆಯರೂ ಇದರಲ್ಲಿದ್ದಾರೆ. ಈ ಪೈಕಿ ಇಬ್ಬರು ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಸ್ತಾನದಲ್ಲಿ ಭೀಕರ ರಸ್ತೆ ಅಪಘಾತ

ಬಸ್​ ಮಗುಚಿ ಬಿದ್ದು ಪ್ರಯಾಣಿಕರು ಕಿರುಚಾಡಲು ಶುರು ಮಾಡಿದಾಗ ಅಲ್ಲಿಯೇ ಇದ್ದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಲ್ಲದೇ ಪ್ರಯಾಣಿಕರ ರಕ್ಷಣೆಗೆ ಮುಂದಾಗಿದ್ದಾರೆ. ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಆ್ಯಂಬುಲೆನ್ಸ್​​​ ಮತ್ತು ಖಾಸಗಿ ವಾಹನಗಳ ಮೂಲಕ ಗಾಯಾಳುಗಳನ್ನು ಉದಯ್​ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details