ತಿರುವನಂತಪುರಂ(ಕೇರಳ): ಟ್ರಾನ್ಸ್ಜೆಂಡರ್ ಜೋಡಿಯಾಗಿರುವ ಶ್ಯಾಮ್ S. ಪ್ರಭಾ ಮತ್ತು ಮನು ಕಾರ್ತಿಕಾ ಪ್ರೇಮಿಗಳ ದಿನದಂದು ತಿರುವನಂತಪುರಂಮನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ವಿಶೇಷ ವಿವಾಹ ಕಾಯ್ದೆಯಡಿ ಕೇರಳ ಹೈಕೋರ್ಟ್ನಲ್ಲಿ ತಮ್ಮ ಮದುವೆ ನೋಂದಣಿ ಮಾಡಿಕೊಳ್ಳಲು ಮುಂದಾಗಿದ್ದೇವೆಂದು ಈ ಜೋಡಿ ಹೇಳಿಕೊಂಡಿದೆ.
ಐಡಿ ಕಾರ್ಡ್ಗಳಲ್ಲಿ ಪುರುಷ ಮತ್ತು ಮಹಿಳೆ ಎಂದು ಗುರುತು ಪಡೆದಿರುವ ಟ್ರಾನ್ಸ್ಜೆಂಡರ್ ಜೋಡಿ ಕುಟುಂಬದ ಆಶೀರ್ವಾದದೊಂದಿಗೆ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.