ಕರ್ನಾಟಕ

karnataka

ETV Bharat / bharat

ನನ್ನ ಇಚ್ಛೆಗೆ ವಿರುದ್ಧವಾಗಿ ಲಿಂಗ ಬದಲಾವಣೆ: ಇಬ್ಬರು ತೃತೀಯ ಲಿಂಗಿಗಳ ವಿರುದ್ಧ ತೃತೀಯ ಲಿಂಗಿಯ ಆರೋಪ - ಸೋಲಾಪುರದಲ್ಲಿ ತೃತೀಯಲಿಂಗಿಗಳಿಂದ ಮೋಸ

ಬೇರೆ ಗುಂಪಿನ ಇಬ್ಬರು ತೃತೀಯಲಿಂಗಿಗಳು ಸುಳ್ಳು ಮಾಹಿತಿ ನೀಡಿ ಪುಣೆಗೆ ಕರೆದುಕೊಂಡು ಹೋಗಿ ನನ್ನ ಇಚ್ಛೆಗೆ ವಿರುದ್ಧವಾಗಿ ನನ್ನ ಲಿಂಗ ಬದಲಾಯಿಸಲಾಗಿದೆ ಎಂದು ತೃತೀಯ ಲಿಂಗಿಯೊಬ್ಬರು ಆರೋಪಿಸಿದ್ದಾರೆ.

transgender-allegations-over-changed-his-gender-issue-in-solapur
ನನ್ನ ಇಚ್ಛೆಗೆ ವಿರುದ್ಧವಾಗಿ ನನ್ನ ಲಿಂಗ ಬದಲಾವಣೆ: ಇಬ್ಬರು ತೃತೀಯಲಿಂಗಿಗಳ ವಿರುದ್ಧ ತೃತೀಯಲಿಂಗಿಯ ಆರೋಪ

By

Published : Jul 26, 2022, 7:37 PM IST

ಸೊಲ್ಲಾಪುರ (ಮಹಾರಾಷ್ಟ್ರ): ಮಹಾರಾಷ್ಟ್ರದ ಸೋಲಾಪುರದಲ್ಲಿ ತೃತೀಯಲಿಂಗಿಯೊಬ್ಬರು ಮತ್ತೊಬ್ಬ ತೃತೀಯಲಿಂಗಿಗಳ ವಿರುದ್ಧ ಆಘಾತಕಾರಿ ಆರೋಪ ಮಾಡಿದ್ದಾರೆ. ನನ್ನ ಇಚ್ಛೆಗೆ ವಿರುದ್ಧವಾಗಿ ನನ್ನ ಲಿಂಗ ಬದಲಾಗಿದೆ ಹಾಗೂ ಹಣಕ್ಕಾಗಿ ಪೀಡಿಸಿ ಥಳಿಸಲಾಗುತ್ತಿದೆ ಎಂದು ದೂರಿದ್ದಾರೆ.

ಇಲ್ಲಿನ ಸಮಾಧಾನ ನಗರದಲ್ಲಿ ವಾಸವಾಗಿರುವ 26 ವರ್ಷದ ಸಂತ್ರಸ್ತೆ, ನಾನು ಹುಟ್ಟಿದ್ದೇ ತೃತೀಯಲಿಂಗಿಯಾಗಿ. ಕಳೆದ ಐದಾರು ವರ್ಷಗಳಿಂದ ಸೀರೆ ಉಟ್ಟುಕೊಂಡು ನಗರದ ವಿವಿಧೆಡೆ ಭಿಕ್ಷೆ ಬೇಡುತ್ತ ಜೀವನ ಸಾಗಿಸುತ್ತಿದ್ದೇನೆ. ನನ್ನ ತಂದೆ - ತಾಯಿ ಮತ್ತು ಸಹೋದರರ ಜವಾಬ್ದಾರಿ ನನ್ನ ಮೇಲಿದೆ ಎಂದು ಹೇಳಿಕೊಂಡಿದ್ದಾರೆ.

ನನ್ನ ಇಚ್ಛೆಗೆ ವಿರುದ್ಧವಾಗಿ ನನ್ನ ಲಿಂಗ ಬದಲಾವಣೆ: ಇಬ್ಬರು ತೃತೀಯಲಿಂಗಿಗಳ ವಿರುದ್ಧ ತೃತೀಯಲಿಂಗಿಯ ಆರೋಪ

ಆದರೆ, ಕಳೆದ ವರ್ಷ ಬೇರೆ ಗುಂಪಿನ ಇಬ್ಬರು ತೃತೀಯಲಿಂಗಿಗಳು ಸುಳ್ಳು ಮಾಹಿತಿ ನೀಡಿ ಪುಣೆಗೆ ಕರೆದುಕೊಂಡು ಹೋಗಿದ್ದರು. ಆಗ ಸಾಮಾನ್ಯ ಚಿಕಿತ್ಸೆ ಕೊಡಿಸುವುದಾಗಿ ಇದೆ ಎಂದು ಯಾವುದೋ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಗೆ ಹೋದ ನಂತರ ನನಗೆ ಪ್ರಜ್ಞೆ ತಪ್ಪಿಸಲಾಯಿತು. ಪ್ರಜ್ಞೆ ಬಂದ ಬಳಿಕ ನನಗೆ ನಿಜವಾಗಿಯೂ ಆಘಾತವಾಗಿತ್ತು. ಯಾಕೆಂದರೆ, ನನ್ನ ಇಚ್ಛೆಗೆ ವಿರುದ್ಧವಾಗಿ ಬಲವಂತದಿಂದ ನನ್ನ ಲಿಂಗವನ್ನು ಬದಲಾಯಿಸಲಾಗಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ.

ಅಲ್ಲದೇ, ಈ ಲಿಂಗ ಬದಲಾವಣೆಯ ವೆಚ್ಚ 5 ಲಕ್ಷ ರೂಪಾಯಿಗಳು ಆಗಿದೆಯಂತೆ. ಈ ವೆಚ್ಚವನ್ನೂ ನನ್ನಿಂದ ವಸೂಲಿ ಮಾಡಲಾಗುತ್ತಿದೆ. ಇದಕ್ಕಾಗಿ ನನಗೆ ಹೊಡೆದು ನನ್ನ ದೈನಂದಿನ ಸಂಪಾದನೆಯನ್ನು ಕಸಿದುಕೊಳ್ಳಲಾಗುತ್ತಿದೆ. ಈ ಇಬ್ಬರು ಆರೋಪಿ ತೃತೀಯಲಿಂಗಿಗಳ ಸೊಲ್ಲಾಪುರದವರಾಗಿದವೇ ಆಗಿದ್ದು, ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನನ್ನಂತೆಯೇ ಅನೇಕರು ಕೂಡ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇಂತಹ ದೌರ್ಜನ್ಯದಿಂದ ಸೊಲ್ಲಾಪುರ ತೊರೆಯುವಂತೆ ಆಗಿದೆ. ಈ ಬಗ್ಗೆ ನಾನು ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಲ್ಲಿ ಮತ್ತೋರ್ವ ಶಂಕಿತ ಉಗ್ರ ಅರೆಸ್ಟ್.. ಅಸ್ಸಾಮಿ ಭಾಷೆಯಲ್ಲಿ ಧರ್ಮ ಪ್ರಚೋದಕ ಸಂದೇಶ ಕಳುಹಿಸುತ್ತಿದ್ದವ ಬಲೆಗೆ

ABOUT THE AUTHOR

...view details