ಕರ್ನಾಟಕ

karnataka

ಹಿಂದೂ ಕುಟುಂಬದಲ್ಲಿ ಜನಿಸಿದ್ರೂ ಸಿಖ್ ಧರ್ಮದ ಅನುಯಾಯಿ: ಚಿನ್ನದಲ್ಲಿ ಮೂಡಿದ ಶ್ರೀ ಗುರುಗ್ರಂಥ ಸಾಹೀಬ್

By

Published : Jul 7, 2021, 6:02 AM IST

ವೃತ್ತಿಯಲ್ಲಿ ಸಂಗೀತ ಶಿಕ್ಷಕರಾದ ಮಂಕಿರತ್ ಹಿಂದೂ ಕುಟುಂಬದಲ್ಲಿ ಜನಿಸಿದರೂ ಪ್ರಭಾವಿತರಾಗಿದ್ದು ಗುರು ಗ್ರಂಥ ಸಾಹಿಬ್‌ನಿಂದ. ಇದೀಗ ಅವರು ಸಾಂಪ್ರದಾಯಿಕ ವಿಧಾನವನ್ನು ಬಳಸಿಕೊಂಡು ಶಬಾದ್ ಗುರು ಶ್ರೀ ಗುರು ಗ್ರಂಥ ಸಾಹೀಬ್ ಅನ್ನು ಚಿನ್ನದ ಶಾಯಿಯಿಂದ ನಕಲಿಸಿದ್ದಾರೆ.

ಚಿನ್ನದಲ್ಲಿ ಮೂಡಿದ ಶ್ರೀ ಗುರು ಗ್ರಂಥ ಸಾಹೀಬ್
ಚಿನ್ನದಲ್ಲಿ ಮೂಡಿದ ಶ್ರೀ ಗುರು ಗ್ರಂಥ ಸಾಹೀಬ್

ಬಟಿಂಡಾ (ಪಂಜಾಬ್‌):ಪಂಜಾಬ್‌ನ ಬಟಿಂಡಾ ನಿವಾಸಿ ಮಂಕಿರತ್ ಸಿಂಗ್ ಅವರು ಸಾಂಪ್ರದಾಯಿಕ ವಿಧಾನವನ್ನು ಬಳಸಿಕೊಂಡು ಶಬಾದ್ ಗುರು ಶ್ರೀ ಗುರು ಗ್ರಂಥ ಸಾಹೀಬ್ ಅನ್ನು ಚಿನ್ನದ ಶಾಯಿಯಿಂದ ನಕಲಿಸಿದ್ದಾರೆ.

ವೃತ್ತಿಯಲ್ಲಿ ಸಂಗೀತ ಶಿಕ್ಷಕರಾದ ಮಂಕಿರತ್ ಹಿಂದೂ ಕುಟುಂಬದಲ್ಲಿ ಜನಿಸಿದರೂ ಪ್ರಭಾವಿತರಾಗಿದ್ದು ಗುರು ಗ್ರಂಥ ಸಾಹಿಬ್ ನಿಂದ. ಇದರಿಂದ ಸಿಖ್ ಧರ್ಮವನ್ನು ಅಳವಡಿಸಿಕೊಂಡರು. ಮಂಕಿರತ್ ಈ ಸೇವೆಯನ್ನು ಒಂದೂವರೆ ವರ್ಷದ ಹಿಂದೆ ಪ್ರಾರಂಭಿಸಿದರು ಮತ್ತು ಇಲ್ಲಿಯವರೆಗೆ ಅವರು 1430 ಪುಟಗಳಲ್ಲಿ ಸುಮಾರು 270 ನಕಲು ಮಾಡಿದ್ದಾರೆ.

ಚಿನ್ನದಲ್ಲಿ ಮೂಡಿದ ಶ್ರೀ ಗುರು ಗ್ರಂಥ ಸಾಹೀಬ್

ಈ ಸೇವೆಗಾಗಿ ಅವರು ಜೈಪುರದಿಂದ ಹೆಡ್‌ವರ್ಕ್ ಪೇಪರ್ ಮತ್ತು ಪ್ರಾಚೀನ ವಿಧಾನದಿಂದ ಶಾಯಿ ತಯಾರಿಸಲು ವಿವಿಧ ರಾಜ್ಯಗಳಿಂದ ವಸ್ತುಗಳನ್ನು ತರಿಸಿದ್ದಾರೆ. ಮಂಕಿರತ್ ಸಿಂಗ್ ಅವರು ಪ್ರಾಚೀನ ವಿಧಾನ ಬಳಸಿ ಚಿನ್ನದ ಶಾಯಿ ತಯಾರಿಸಿದ್ದಾರೆ. ಶ್ರೀ ಗುರು ಗ್ರಂಥ ಸಾಹೀಬ್ ಪ್ರತಿಲೇಖನಕ್ಕಾಗಿ ಪ್ರತಿದಿನ ಎರಡು-ಮೂರು ಗಂಟೆಗಳ ಕಾಲ ಕಳೆಯುತ್ತಾರೆ. ಮುಂದಿನ 5-6 ವರ್ಷಗಳಲ್ಲಿ ಅವರು ಈ ಸೇವೆಯನ್ನು ಪೂರ್ಣಗೊಳಿಸಲಿದ್ದಾರೆ.

ಈ ಸೇವೆಗಾಗಿ ಅವರು ಸಾರ್ವಜನಿಕರಿಂದ ಸಾಕಷ್ಟು ಬೆಂಬಲವನ್ನು ಪಡೆಯುತ್ತಿದ್ದಾರೆ. ಕೋವಿಡ್ ಕಾರಣ, ಶಿಕ್ಷಕ ವೃತ್ತಿ ಇಲ್ಲದೇ, ಬುಕ್​ ಕೀಪರ್ ಆಗಿ ಕೆಲಸ ಮಾಡುವ ಮೂಲಕ ಹಣ ಸಂಪಾದಿಸುತ್ತಿದ್ದಾರೆ.

ಮುಂದಿನ ಪೀಳಿಗೆಗೆ ತಮ್ಮ ಪರಂಪರೆಯ ಬಗ್ಗೆ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಬಡತನ ಮತ್ತು ದುಃಖದ ನಡುವೆಯೂ ಮಂಕಿರತ್ ಸಿಂಗ್ ಗುರುಗಳ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

For All Latest Updates

TAGGED:

ABOUT THE AUTHOR

...view details