ಧೆಂಕನಲ್ (ಒಡಿಶಾ):ತರಬೇತಿ ವಿಮಾನವೊಂದು ಒಡಿಶಾದ ಧೆಂಕನಲ್ ಜಿಲ್ಲೆಯ ಬಿರಾಸಾಲ್ ಏರ್‌ಸ್ಟ್ರಿಪ್‌ನಲ್ಲಿ ಪತನಗೊಂಡಿದೆ. ಘಟನೆಯಲ್ಲಿ ಪೈಲಟ್, ಟ್ರೈನಿ ಪೈಲಟ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪತನಗೊಂಡ ತರಬೇತಿ ವಿಮಾನ: ಇಬ್ಬರ ಸ್ಥಿತಿ ಗಂಭೀರ - ಧೆಂಕನಲ್ ಜಿಲ್ಲೆಯ ಬಿರಾಸಾಲ್ ಏರ್‌ಸ್ಟ್ರಿಪ್‌ನಲ್ಲಿ ತರಬೇತಿ ವಿಮಾನ ಪತನ
ತರಬೇತಿ ವಿಮಾನ ಒಡಿಶಾದ ಧೆಂಕನಲ್ ಜಿಲ್ಲೆಯ ಬಿರಾಸಾಲ್ ಏರ್‌ಸ್ಟ್ರಿಪ್‌ನಲ್ಲಿ ಪತನಗೊಂಡಿದೆ.
ತರಬೇತಿ ವಿಮಾನ ಪತನ
ಟ್ರೈನಿಯನ್ನು ಮಹಾರಾಷ್ಟ್ರದ ಕಿರಣ್ ಮಲಿಕ್ ಎಂದು ಗುರುತಿಸಲಾಗಿದೆ. ಅವರನ್ನು ರಕ್ಷಿಸಿ ಚಿಕಿತ್ಸೆಗಾಗಿ ಕಾಮಾಖ್ಯಾನಗರ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿರಣ್ ಅವರು ಪೈಲಟ್ ತರಬೇತಿಗಾಗಿ ಸರ್ಕಾರಿ ಏವಿಯೇಷನ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್‌ಗೆ (ಜಿಎಟಿಐ) ದಾಖಲಾಗಿದ್ದರು. ವರದಿಗಳ ಪ್ರಕಾರ, ಇಂದು ಮಧ್ಯಾಹ್ನ ವಿಮಾನವು ಸುಮಾರು 15 ಅಡಿ ಎತ್ತರದಿಂದ ಬಿದ್ದಿದೆ. ಈ ವೇಳೆ ತರಬೇತಿ ವಿಮಾನಕ್ಕೂ ಹಾನಿಯಾಗಿದೆ.
ಇದನ್ನೂ ಓದಿ: ನಾಲ್ಕನೇ ಸ್ಥಾನಕ್ಕೆ ಬಿಜೆಪಿ - ಜೆಡಿಎಸ್ ನಡುವೆ ಪೈಪೋಟಿ, ಕಾಂಗ್ರೆಸ್ಗೆ ಗೆಲುವು ಕಠಿಣ