ಭಿಂದ್ (ಮಧ್ಯಪ್ರದೇಶ): ಭಾರತೀಯ ವಾಯುಪಡೆಯ ಮಿರಾಜ್ 2000 ವಿಮಾನವು ಭಿಂದ್ನಿಂದ ಸುಮಾರು 6 ಕಿ.ಮೀ ದೂರದಲ್ಲಿರುವ ಮನಕಾಬಾದ್ ನಲ್ಲಿನ ರಾಗಿ ಹೊಲದಲ್ಲಿ ಪತನಗೊಂಡಿದೆ.
ವಾಯುಪಡೆ ವಿಮಾನ ಪತನ : ಪೈಲಟ್ ಬದುಕಿದ್ದು ಹೀಗೆ - ವಿಡಿಯೋ - ವಾಯುಪಡೆಯ ಮಿರಾಜ್ 2000
ಭಾರತೀಯ ವಾಯುಪಡೆಯ (IAF) ವಿಮಾನವೊಂದು ತರಬೇತಿಯ ವೇಳೆ ಪತನವಾಗಿದೆ. ವಿಮಾನದ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದುರ್ಘಟನೆ ಭಿಂದ್ನಲ್ಲಿ ನಡೆದಿದೆ.
ಭಾರತೀಯ ವಾಯುಪಡೆ ವಿಮಾನ ಪತನ
ಟ್ರೈನಿ ಪೈಲಟ್ ಈ ವಿಮಾನವನ್ನು ಹಾರಿಸುತ್ತಿದ್ದರು. ವಿಮಾನದಿಂದ ಅವರು ತಮ್ಮ ರಕ್ಷಣೆಗಾಗಿ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಪ್ಯಾರಾಚೂಟ್ ಮೂಲಕ ಇಳಿಯುವ ವೇಳೆ ಅವರನ್ನು ಸ್ಥಳೀಯ ಜನರು ಗುರುತಿಸಿದ್ದಾರೆ. ಹಾಗೆ ಕೆಲವರು ವಿಡಿಯೋ ಕೂಡ ಮಾಡಿಕೊಂಡಿದ್ದಾರೆ.
ಪೈಲಟ್‌ಗಳು ಹೇಗೆ ಪ್ಯಾರಾಚೂಟ್ನ್ನು ಇಂತಹ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದಾಗಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
Last Updated : Oct 21, 2021, 6:00 PM IST