ಧನ್ಬಾರ್ದ್(ಜಾಖಂಡ್) :ಧನ್ಬಾರ್ದ್ ರೈಲ್ವೆ ವಿಭಾಗದ ಕೋಚಿಂಗ್ ಯಾರ್ಡ್‌ನಲ್ಲಿ ಇದ್ದಕ್ಕಿದ್ದಂತೆ 6 ರೈಲು ಬೋಗಿಗಳು ಚಲಿಸಿ 2 ಬೋಗಿಗಳು ಹಳಿ ತಪ್ಪಿರುವ ಘಟನೆ ನಡೆದಿದೆ. ಯಾರ್ಡ್‌ನಲ್ಲಿ ನಿಲ್ಲಿಸಲಾಗಿದ್ದ ಬೋಗಿಗಳು ಇಂಜಿನ್ ಸಂಪರ್ಕವಿಲ್ಲದಿದ್ದರೂ ಚಲಿಸಿದ್ದು, ದೊಡ್ಡ ಅನಾಹುತ ತಪ್ಪಿದೆ.
ಯಾರ್ಡ್‌ನಲ್ಲಿ ನಿಂತ ಕೋಚ್ಗಳು ಇಂಜಿನ್ ಸಂಪರ್ಕ ಇಲ್ಲದಿದ್ದರೂ ಪುರಾಣ್ ಬಜಾರ್ ಕಡೆಗೆ ಏಕಾಏಕಿ ಚಲಿಸಿದೆ. ಜನರು ಆತಂಕಕ್ಕೆ ಒಳಗಾದರು. ಆದರೆ, ಮುಂದಿನ 2 ಬೋಗಿಗಳು ಹಳಿ ತಪ್ಪಿದ ಪರಿಣಾಮ ಎಲ್ಲಾ ಬೋಗಿಗಳು ಮುಂದೆ ಚಲಿಸದೆ ಅಲ್ಲೇ ನಿಂತವು.