ಕರ್ನಾಟಕ

karnataka

ETV Bharat / bharat

ಒಡಿಶಾ ರೈಲು ದುರಂತ: ಸಂಚಾರದಲ್ಲಿ ತೊಡಕು, ಮಾರ್ಗ ಬದಲಾವಣೆ, ರದ್ದು ಮಾಹಿತಿ - Train cancellation information

ಒಡಿಶಾದ ಬನಹಗಾ ರೈಲು ನಿಲ್ದಾಣದ ಬಳಿ ನಡೆದ ಭೀಕರ ದುರಂತದಿಂದ ರೈಲು ಸಂಚಾರದಲ್ಲಿ ತೊಡಕುಂಟಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಕೆಲ ರೈಲುಗಳು ರದ್ದಾದರೆ, ಇನ್ನು ಕೆಲವಕ್ಕೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಅದರ ವಿವರ ಇಲ್ಲಿದೆ.

ಒಡಿಶಾ ರೈಲು ದುರಂತ
ಒಡಿಶಾ ರೈಲು ದುರಂತ

By

Published : Jun 3, 2023, 7:59 AM IST

ಭುವನೇಶ್ವರ್​ (ಒಡಿಶಾ):ಒಡಿಶಾದಲ್ಲಿ ಕಂಡು ಕೇಳರಿಯದ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ರೈಲು ಸಂಚಾರಕ್ಕೆ ತೊಡಕುಂಟಾಗಿದೆ. ಈ ಮಾರ್ಗವಾಗಿ ಸಂಚರಿಸುವ ಕೆಲ ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಇನ್ನು ಕೆಲವು ರೈಲುಗಳು ಪರ್ಯಾಯ ಸಂಚಾರ, ಭಾಗಶಃ ರದ್ದು ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಪ್ರಯಾಣಿಕರ ಸಂಚಾರಕ್ಕ ತೊಂದರೆ ಉಂಟಾಗಬಾರದು ಎಂದು ಕೆಲ ರೈಲುಗಳಿಗೆ ಈ ಮಾರ್ಗದ ಬದಲಾಗಿ, ಪರ್ಯಾಯ ಮಾರ್ಗದಲ್ಲಿ ತೆರಳಲು ಸೂಚಿಸಲಾಗಿದೆ. ಇದೇ ಮಾರ್ಗವಾಗಿ ಸಂಚರಿಸುವ ಕೆಲ ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಇನ್ನು ಕೆಲವವನ್ನು ಭಾಗಶಃ ರದ್ದು ಮಾಡಲಾಗಿದೆ. ಅಂದರೆ, ಘಟನಾ ಸ್ಥಳವಾದ ನಿಲ್ದಾಣಕ್ಕೆ ಮಾತ್ರ ಸಂಪರ್ಕ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಪೂರ್ಣ ರದ್ದಾದ ರೈಲುಗಳು:ಪುರಿಯಿಂದ ಹೌರಾಕ್ಕೆ ಹೊರಟಿದ್ದ ಪುರಿ-ಹೌರಾ ಎಕ್ಸ್‌ಪ್ರೆಸ್(ರೈಲು ಸಂಖ್ಯೆ 12838 ), ಪುರಿ- ಶಾಲಿಮಾರ್​ನ ಜಗನ್ನಾಥ್ ಎಕ್ಸ್‌ಪ್ರೆಸ್(18410 ), ಪುರಿಯಿಂದ ಪುರಿ-ಭಂಜಾಪುರ ಸ್ಪೆಷಲ್​(08012) ರೈಲು ಸಂಚಾರವನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ.

ಪರ್ಯಾಯ ರೈಲು ಮಾರ್ಗ:ಪುರಿಯಿಂದ ಜಖಪುರ-ಜರೋಲಿ ಮಾರ್ಗವಾಗಿ ಚಲಿಸಬೇಕಿದ್ದ ಪುರಿ-ಪಾಟ್ನಾ ವಿಶೇಷ(03229), ಚೆನ್ನೈನಿಂದ ಜಖಾಪುರ ಮತ್ತು ಜರೋಲಿ ಮಾರ್ಗವಾಗಿ ಹೊರಬೇಕಿದ್ದ ಚೆನ್ನೈ-ಹೌರಾ ಮೇಲ್(12840 ), ವಾಸ್ಕೋದಿಂದ ಜಖಾಪುರ-ಜರೋಲಿ ಮಾರ್ಗದ ವಾಸ್ಕೋ ಡ ಗಾಮಾ-ಹೌರಾ ಅಮರಾವತಿ ಎಕ್ಸ್‌ಪ್ರೆಸ್(18048), ಸಿಕಂದರಾಬಾದ್‌ನಿಂದ ಜಖಪುರ ಮತ್ತು ಜರೋಲಿ ಮಾರ್ಗದ ಸಿಕಂದರಾಬಾದ್-ಶಾಲಿಮಾರ್ ಎಕ್ಸ್‌ಪಿ 5ಎಸ್(22850), ಪುರಿಯಿಂದ ಜಖಾಪುರ ಮತ್ತು ಜರೋಲಿ ಮಾರ್ಗದ ಪುರಿ-ನವದೆಹಲಿ ಪುರುಸೊತ್ತಮ್ ಎಕ್ಸ್‌ಪ್ರೆಸ್(12801), ಪುರಿಯಿಂದ ಅಂಗುಲ್-ಸಂಬಲ್‌ಪುರ್ ಸಿಟಿ-ಝಾರ್ಸುಗುಡಾ ರಸ್ತೆ-ಐಬಿ ಮಾರ್ಗದ ಪುರಿ-ಋಷಿಕೇಶ ಕಳಿಂಗ ಉತ್ಕಲ್ ಎಕ್ಸ್‌ಪ್ರೆಸ್(18477), ಸಂಬಲ್‌ಪುರದಿಂದ ಸಂಬಲ್‌ಪುರ ಸಿಟಿ-ಝಾರ್ಸುಗುಡಾ ಮಾರ್ಗದ ಸಂಬಲ್‌ಪುರ-ಶಾಲಿಮಾರ್ ಎಕ್ಸ್‌ಪ್ರೆಸ್ (22804), ಬೆಂಗಳೂರಿನಿಂದ ವಿಜಯನಗರ- ತಿತಿಲಗಢ- ಝಾರ್ಸುಗುಡಾ-ಟಾಟಾ ಮಾರ್ಗದ ಬೆಂಗಳೂರು-ಗುವಾಹಟಿ ಎಕ್ಸ್‌ಪ್ರೆಸ್ (12509), ತಾಂಬರಂನಿಂದ ರಾನಿಟಾಲ್-ಜರೋಲಿ ಮಾರ್ಗವಾಗಿ ಹೋಗುವ ತಾಂಬರಂ-ನ್ಯೂ ಟಿನ್ಸುಕಿಯಾ ಎಕ್ಸ್‌ಪ್ರೆಸ್ (15929) ರೈಲುಗಳಿಗೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ.

ಭಾಗಶಃ ರದ್ದಾದ ರೈಲುಗಳು:ಖುರ್ದಾ ರಸ್ತೆ- ಖರಗ್‌ಪುರ ಎಕ್ಸ್‌ಪ್ರೆಸ್(18022) ಖುರ್ದಾ ರಸ್ತೆಯಿಂದ ಬೈತರಾಣಿ ರಸ್ತೆಯವರೆಗೆ ಸಂಚಾರವಿರಲಿದೆ. ಬೈತರಾಣಿ ರಸ್ತೆಯಿಂದ ಖರಗ್‌ಪುರಕ್ಕೆ ರದ್ದಾಗಿದೆ. ಇಂದಿನ ಖರಗ್‌ಪುರ-ಖುರ್ದಾ ರೋಡ್ ಎಕ್ಸ್‌ಪ್ರೆಸ್(18021 ) ಖರಗ್‌ಪುರದಿಂದ ಬೈತರಾಣಿಯಿಂದ ಖುರ್ದಾವರೆಗೆ ಸಂಚಾರವಿರಲಿದೆ. ಖರಗ್‌ಪುರದಿಂದ ಬೈತರಾಣಿಗೆ ರದ್ದು ಮಾಡಲಾಗಿದೆ. ಭುವನೇಶ್ವರದಿಂದ ಹೊರಡುವ ಭುವನೇಶ್ವರ-ಬಂಗಿರಿಪೋಸಿ ಎಕ್ಸ್‌ಪ್ರೆಸ್ (12892) ರೈಲು ಜಾಜ್‌ಪುರ್ ಕಿಯೋಂಜರ್​​ವರೆಗೆ ಚಲಿಸುತ್ತದೆ. ಜಜ್‌ಪುರ್ ಕೆ ರೋಡ್‌ನಿಂದ ಬಂಗಿರಿಪೋಸಿವರೆಗೆ ರದ್ದಾಗಲಿದೆ.

ಇಂದು ಸಂಚರಿಸಲಿರುವ ಬಂಗಿರಿಪೋಸಿ-ಭುವನೇಶ್ವರ್​ ಎಕ್ಸ್‌ಪ್ರೆಸ್(12891) ರೈಲು ಬಂಗಿರಿಪೋಸಿಯಿಂದ ಜಜ್‌ಪುರ್ ಕಿಯೋಂಜಾರ್​ನಿಂದ ಭುವನೇಶ್ವರಕ್ಕೆ ಹೊರಡಲಿದೆ. ಬಂಗಿರಿಪೋಸಿಯಿಂದ ಜಜ್‌ಪುರ್ ಕೆ ಸಂಚಾರ ಇರುವುದಿಲ್ಲ. ಭುವನೇಶ್ವರ-ಬಾಲಸೋರ್ ಮೆಮು(08412) ಭುವನೇಶ್ವರದಿಂದ ಜೆನಾಪುರದವರೆಗೆ ಚಲಿಸುತ್ತದೆ. ಜೆನಾಪುರದಿಂದ ಬಾಲಸೋರ್‌ಗೆ ಇರುವುದಿಲ್ಲ. ಬಾಲಸೋರ್-ಭುವನೇಶ್ವರ್ ಮೆಮು(18411) ಬಾಲಸೋರ್‌ನಿಂದ ಭುವನೇಶ್ವರದ ಬದಲಾಗಿ ಜೆನಾಪುರದಿಂದ ಭುವನೇಶ್ವರಕ್ಕೆ ಹೊರಡಿಸಲಿದೆ.

ಇದನ್ನೂ ಓದಿ:ಘನಘೋರ ರೈಲು ದುರಂತ: ರೈಲ್ವೆ ಸಚಿವರ ರಾಜೀನಾಮೆಗೆ ಒತ್ತಾಯ, ಉನ್ನತ ಮಟ್ಟದ ತನಿಖೆಗೆ ಆದೇಶ

ABOUT THE AUTHOR

...view details