ಶಾದ್‌ನಗರ (ರಂಗಾರೆಡ್ಡಿ): ರಂಗಾರೆಡ್ಡಿ ಜಿಲ್ಲೆಯ ಶಾದ್‌ನಗರ ಪುರಸಭೆ ವ್ಯಾಪ್ತಿಯ ಸೋಲಿಪುರ ನಗರದಲ್ಲಿ ನೀರಿನ ಹೊಂಡಕ್ಕೆ ಬಿದ್ದು ಮೂವರು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಮೃತ ಮಕ್ಕಳನ್ನು ಅಕ್ಷಿತ್ ಗೌಡ್, ಫರೀದ್ ಮತ್ತು ಫರೀನ್ ಎಂದು ಗುರುತಿಸಲಾಗಿದ್ದು, ಮೃತ ಮಕ್ಕಳು ಹತ್ತು ವರ್ಷದೊಳಗಿನವರು ಎಂದು ಹೇಳಲಾಗಿದೆ.
ಇಂದು ಬೆಳಗ್ಗೆ ಅಕ್ಷಿತ್ ಗೌಡ್, ಫರೀದ್ ಮತ್ತು ಫರೀನ್ ಆಟವಾಡಲು ಹೋಗಿದ್ದರು. ಈ ಸಂದರ್ಭ ಅಲ್ಲೇ ಇದ್ದ ಒಂದು ನೀರಿನ ಹೊಂಡಕ್ಕೆ ಮೀನು ಹಿಡಿಯಲು ಇಳಿದಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.