ಕರ್ನಾಟಕ

karnataka

ETV Bharat / bharat

ಘೋರ ದುರಂತ.. ಗೆಳೆಯನ ಹುಟ್ಟುಹಬ್ಬದಂದೇ ಮಸಣ ಸೇರಿದ ಇಬ್ಬರು ಸ್ನೇಹಿತರು - ಹುಟ್ಟುಹಬ್ಬ ಆಚರಣೆಗೆ ತೆರಳಿ ನದಿಗೆ ಬಿದ್ದ ಯುವಕರು

ಗೆಳೆಯನ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಲು ನದಿಗೆ ತೆರಳಿದ್ದ ವೇಳೆ, ಆಯತಪ್ಪಿ ಇಬ್ಬರು ಯುವಕರು ನದಿಗೆ ಬಿದ್ದಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

ಗೆಳೆಯನ ಹುಟ್ಟುಹಬ್ಬದಂದೇ ಮಸಣ ಸೇರಿದ ಇಬ್ಬರು ಸ್ನೇಹಿತರು
ಗೆಳೆಯನ ಹುಟ್ಟುಹಬ್ಬದಂದೇ ಮಸಣ ಸೇರಿದ ಇಬ್ಬರು ಸ್ನೇಹಿತರು

By

Published : Oct 18, 2021, 3:47 PM IST

Updated : Oct 18, 2021, 4:28 PM IST

ಸಂಗಾರೆಡ್ಡಿ (ತೆಲಂಗಾಣ):ಗೆಳೆಯನ ಹುಟ್ಟುಹಬ್ಬವನ್ನು ದೋಣಿಯಲ್ಲಿ ಆಚರಿಸುತ್ತಿದ್ದ ವೇಳೆ ಮದ್ಯಪಾನ ಸೇವಿಸಿದ್ದ ಇಬ್ಬರು ಆಯತಪ್ಪಿ ನದಿಗೆ ಬಿದ್ದು ಮೃತಪಟ್ಟಿರುವ ಘಟನೆ ಜಿಲ್ಲೆಯ ಅಮೀನ್​ಪುರ್​ ಮಂಡಲ್​ನಲ್ಲಿ ನಡೆದಿದೆ.

ಪವನ್ ಹಾಗೂ ನರ್ಸಿಂಗ್ ಮೃತದುರ್ದೈವಿಗಳು. ಜಿಲ್ಲೆಯ ಅಮೀನ್ ಪುರ ಮೂಲದ ಐವರು ಸ್ನೇಹಿತರು ಬರ್ತಡೇ ಸೆಲಬ್ರೇಷನ್ ಮಾಡಲು ನದಿಗೆ ತೆರಳಿದ್ದರು. ಈ ವೇಳೆ, ಅತಿಯಾಗಿ ಮದ್ಯಪಾನ ಸೇವಿಸಿದ್ದ ಇಬ್ಬರು, ನೀರಿಗೆ ಬಿದ್ದಿದ್ದಾರೆ. ಉಳಿದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರು, ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಪವನ್ ಮೃತದೇಹ ಪತ್ತೆಯಾಗಿದೆ.

ಈಜುತಜ್ಞರು ನರ್ಸಿಂಗ್​​ಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಪುಣೆ - ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ: ಮೂವರು ಬಲಿ

Last Updated : Oct 18, 2021, 4:28 PM IST

ABOUT THE AUTHOR

...view details