ಕರ್ನಾಟಕ

karnataka

ETV Bharat / bharat

ಬಳೆ, ಬಟ್ಟೆ ಬಾಕ್ಸ್​ನಲ್ಲಿ ಡ್ರಗ್ಸ್​ ಸಾಗಣೆ; ಅಂತಾರಾಷ್ಟ್ರೀಯ ಪೆಡ್ಲರ್​ಗಳ ಬಂಧನ - ಅಂತರಾಷ್ಟ್ರೀಯ ಡ್ರಗ್​​ ಪೆಡ್ಲರ್

ಆಸ್ಟ್ರೇಲಿಯಾ, ನ್ಯೂಜಿಲೆಂಡ್‌​ಗೆ ಡ್ರಗ್​​ ಸಾಗಣೆ- ಆರೋಪಿಗಳ ಹೆಡೆಮುರಿ ಕಟ್ಟಿದ ಹೈದರಾಬಾದ್​ ಪೊಲೀಸರು - ಮುಂದುವರಿದ ತನಿಖೆ

Etv Bharat
Etv Bharat

By

Published : Feb 15, 2023, 1:37 PM IST

ಹೈದರಾಬಾದ್​: ಅಂತಾರಾಷ್ಟ್ರೀಯ ಡ್ರಗ್ಸ್​​​ ಪೆಡ್ಲರ್​ಗಳನ್ನು ಮಲ್ಕಜಿಗಿರಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಶೇಖ್​ ಫರಿದ್​ ಮೊಹಮ್ಮದ್​ ಆಲಿ (30) ಮತ್ತು ಫೈಜಾನ್​ ಅರುಣ್​ ಮುಜಾಹಿದ್​ (28) ಬಂಧಿತ ಆರೋಪಿಗಳು. ಇವರು ಶಂಶಾಬಾದ್ ವಿಮಾನ ನಿಲ್ದಾಣದಿಂದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೆ ಡ್ರಗ್​ ಅನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಜೀವಕ್ಕೆ ಮಾರಕವಾದ ಡ್ರಗ್​ ಅನ್ನು ಬಳೆ ಬಾಕ್ಸ್​​ ಮತ್ತು ಬ್ರಾಂಡೆಡ್​ ಬಟ್ಟೆ ಬಾಕ್ಸ್​ಗಳಲ್ಲಿ ಇಟ್ಟು ಕೊರಿಯರ್​ ಏಜೆನ್ಸಿ ಮೂಲಕ ಕಳುಹಿಸುತ್ತಿದ್ದರು. ಕಳೆದ ವರ್ಷ ಡಿಸೆಂಬರ್​ನಲ್ಲಿ ರಾಚಕೊಂಡದಲ್ಲಿ ದೊಡ್ಡ ಪ್ರಮಾಣದ ಡ್ರಗ್​ ವಶ ಪಡಿಸಿಕೊಂಡ ಪ್ರಕರಣದಲ್ಲಿ ಈ ಇಬ್ಬರು ಆರೋಪಿಗಳು ಭಾಗಿಯಾಗಿದ್ದರು. ಈ ಪ್ರಕರಣದ ಬೆನ್ನಲ್ಲೇ ಇವರು ತಮ್ಮ ಕಾರ್ಯಚಟುವಟಿಕೆಯನ್ನು ಕೊಂಚ ದಿನಗಳ ಮಟ್ಟಿಗೆ ನಿಲ್ಲಿಸಿದ್ದು, ಮತ್ತೆ ಇದೀಗ ದಂಧೆಯನ್ನು ಪುನಾರಂಭಿಸಿದ್ದಾರೆ. ಆಸ್ಟ್ರೇಲಿಯಾಗೆ ಅವರು ಸರಕು ಕಳುಹಿಸುತ್ತಿದ್ದಾಗ ವಶಕ್ಕೆ ಪಡೆಯಲಾಗಿದೆ. ಅವರಿಂದ 55 ಲಕ್ಷ ಮೊತ್ತದ ಅರ್ಧ ಕೆಜಿ ಡ್ರಗ್ಸ್​, 80 ಗ್ರಾಂ ಚಿನ್ನ, ಪಾಸ್​ಪೋರ್ಟ್​ ಮತ್ತು ಎರಡು ಫೋನ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಡ್ರಗ್​ ಡಾನ್​ ರಹಿಂ ತಲೆ ಮರೆಸಿಕೊಂಡಿದ್ದಾನೆ. ಈತ ಎಲ್​ಬಿ ನಗರ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬುದರ ಕುರಿತು ಕಮಿಷನರ್​ ಡಿಎಸ್​ ಚೌಹಾಣ್​ ಮಾಹಿತಿ ನೀಡಿದ್ದಾರೆ.

ಸಹೋದರಿಯನ್ನು ನೋಡಲು ಹೋಗಿ, ಸ್ಮಗ್ಲರ್​ ಆದ: ಶೇಕ್​ ಫರೀದ್​ ಮತ್ತು ಫೈಜಾನ್​ ಪುಣೆಯಲ್ಲಿ ಸ್ನೇಹಿತರಾಗಿದ್ದರು. ಫರೀದ್​ ಆಗಾಗ್ಗೆ ಚೆನ್ನೈಗೆ ತನ್ನ ತಂಗಿಯನ್ನು ನೋಡಲು ಹೋಗುತ್ತಿದ್ದಾಗ, ಈ ಕಳ್ಳಸಾಗಣೆ ದಂಧೆಯಲ್ಲಿ ಸೇರಿದ. ಆತನ ಸ್ನೇಹಿತ ಫೈಜಾನ್​ ಕೂಡ ಇದರಲ್ಲಿ ಭಾಗಿಯಾದ. ಈ ವೇಳೆ ಅವರು ಚೆನ್ನೈನಲ್ಲಿ ರಸುಲುದ್ದೀನ್​ (39)ಅನ್ನು ಭೇಟಿಯಾಗಿ ಡ್ರಗ್ಸ್​ ಸರಬರಾಜು ಮಾಡುತ್ತಿದ್ದರು. ಡ್ರಗ್ಸ್​ ತಂದರೆ ಲಾಭ ಮಾಡಬಹುದು ಎಂಬ ಆಮಿಷವನ್ನು ರಸೂಲ್​ ತೋರಿಸಿದ್ದ. ಕೆಲವು ದಿನಗಳ ಬಳಿಕ ಈ ವೃತ್ತಿಗೆ ಮೊಹಮ್ಮದ್​ ಕಸೀಂ (33) ಕೂಡ ಸೇರಿದ. ಡ್ರಗ್ಸ್​​ ಡಾನ್​ ರಹೀಂ ಅಡಿಯಲ್ಲಿ ರಸೂಲ್​, ಫರಿದ್​, ಫೈಜಾನ್​ ಮತ್ತು ಕಸಿಂ ಕಾರ್ಯ ನಿರ್ವಹಿಸುತ್ತಿದ್ದರು. ಸ್ಯೂಡೋಫೆಡ್ರಿನ್ ಅನ್ನು ಪುಣೆ ಮತ್ತು ಶಂಶಾಬಾದ್​ ವಿಮಾನ ನಿಲ್ದಾಣದ ಮೂಲಕ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​​ಗೆ ಸಾಗಿಸುತ್ತಿದ್ದರು. ಸಾಮಾನ್ಯವಾಗಿ ಈ ರೀತಿಯ ಡ್ರಗ್​ಗಳು ವಿಮಾನ ನಿಲ್ದಾಣದಲ್ಲಿ ಸ್ಕಾನಿಂಗ್​​ ಮಷಿನ್​ ಮೂಲಕ ಪತ್ತೆ ಮಾಡಲಾಗಿದೆ ಎಂದು ಪೊಲೀಸ್​ ಅಧಿಕಾರಿ ವಿವರಿಸಿದರು.

ಎರಡು ತಿಂಗಳಲ್ಲಿ ಸೇರೆ: ಈ ನಾಲ್ವರು ನೂರಾರು ಕೋಟಿಯ ಡ್ರಗ್ಸ್​ಗಳನ್ನು ಡಿಸೆಂಬರ್​ವರೆಗೆ 15 ಬಾರಿ ಶಂಶಬಾದ್​ ಮತ್ತು ಪುಣೆ ವಿಮಾನ ನಿಲ್ದಾಣದ ಮೂಲಕ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​​ಗೆ ಸಾಗಿಸಿದ್ದಾರೆ. ಚೆನ್ನೈನಲ್ಲಿದ್ದ ರಹೀಂ ಸರಕು ಎಲ್ಲಿದೆ, ಎಲ್ಲಿಗೆ ಸಾಗಿಸಬೇಕು ಎಂದು ತಿಳಿಸುತ್ತಾನೆ. ಈತ ಪ್ರಯಾಣದ ವೆಚ್ಚ ಮತ್ತು ವಿಳಾಸವನ್ನು ನೀಡುತ್ತಿದ್ದ. ಸರಕು ಸಾಗಿಸಿದ್ದಕ್ಕೆ ಈ ನಾಲ್ವರು ಕಮಿಷನ್​ ಅನ್ನು ಕೂಡ ಪಡೆಯುತ್ತಿದ್ದರು. ಹೈದ್ರಾಬಾದ್​ನಲ್ಲಿ ಕಳೆದ ಡಿಸೆಂಬರ್​ನಲ್ಲಿ 8.5 ಕೆಜಿಯ 9 ಕೋಟಿ ಮೊತ್ತದ ಡ್ರಗ್ಸ್​ ಪ್ರಕರಣದಲ್ಲಿ ಕಸೀಂ ಮತ್ತು ರಸುಲುದ್ದಿನ್​ ನನ್ನು ಬಂದಿಸಿದರು. ಈ ವೇಳೆ ಫರೀದ್​, ಫೈಜಾನ್​ ಮೊಬೈಲ್​ ಸ್ವಿಚ್​ ಆಫ್​ ಮಾಡಿ ನಾಪತ್ತೆಯಾಗಿದ್ದರು.

ಹೈದರಾಬಾದ್​ಗೆ ನಾಲ್ಕು ದಿನದ ಹಿಂದೆ ಆರೋಪಿಗಳು ಎಂಟ್ರಿ:ಹೈದಬಾದ್​ನಲ್ಲಿ ತಮ್ಮ ಸಹೋದ್ಯೋಗಿ ಬಂಧನವಾಗುತ್ತಿದ್ದಂತೆ ಫರಿದ್​ ಮತ್ತು ಫೈಜಾನ್​ ನಾಪತ್ತೆಯಾಗಿದ್ದರು. ಫೆಬ್ರವರಿಯಿಂದ ಮತ್ತೆ ಕಾರ್ಯಚಾರಣೆಗೆ ಇಳಿದಿದ್ದಾರೆ. ನಾಲ್ಕು ದಿನಗಳ ಹಿಂದೆ ಹೈದ್ರಾಬಾದ್​ಗೆ ಬಂದ ಅವರು ಶಂಶಾಬಾದ್​ ವಿಮಾನ ನಿಲ್ದಾಣದ ಮೂಲಕ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ಗೆ ಡ್ರಗ್ಸ್​ ಸಾಗಿಸಲು ಮುಂದಾಗಿದ್ದರು. ಈ ವೇಳೆ ಸ್ವಾಟ್​ ಇನ್ಸ್​ಪೆಕ್ಟರ್​ ರಾಮುಲು ತಂಡ ಈ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, 1 ಕೋಟಿ ಮೊತ್ತದ ಡ್ರಗ್ಸ್​​ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ಯುವತಿಯರಿಗೆ ಡ್ರಗ್ಸ್​ ನೀಡಿ, ಲೈಂಗಿಕ ದೌರ್ಜನ್ಯ; ಮುಂಬೈ ಗ್ಯಾಂಗ್​ ಬಂಧನ

ABOUT THE AUTHOR

...view details