ಸುರೇಂದ್ರನಗರ: ಮಹಿಳೆಗೆ ಮದುವೆಯಾಗುವಂತೆ ಕಿರುಕುಳ ನೀಡಿ, ಒಂದು ವೇಳೆ ಆಗದಿದ್ದರೇ ಆಕೆ ಮತ್ತು ಆಕೆಯ ಕುಟುಂಬಸ್ಥರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿರುವ ಆರೋಪ ಸೂರತ್ನ ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್ ಮೇಲೆ ಕೇಳಿಬಂದಿದೆ. ಇನ್ಸ್ಪೆಕ್ಟರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಸುರೇಂದ್ರನಗರದ ಘುಘಾರಿ ಪಾರ್ಕ್ ಸೊಸೈಟಿಯಲ್ಲಿ ವಾಸಿಸುತ್ತಿರುವ ಮಹಿಳೆ ಗುರುವಾರ ಸಂಜೆ ದೂರು ನೀಡಿದ್ದಾರೆ. ದೂರಿನಲ್ಲಿ ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್ ಯಶಪಾಲ್ ಗೋಹಿಲ್ 2016 ರಿಂದ ಅವರನ್ನು ಮದುವೆಯಾಗುವಂತೆ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ನವೆಂಬರ್ 2021 ರಲ್ಲಿ ಗೋಹಿಲ್ ಅವರ ಚಾಲಕ ಜತಿನ್ ಮಹಿಳೆ ಸಂಪರ್ಕಿಸಿ, ಆರೋಪಿಯೊಂದಿಗೆ ಮಾತನಾಡುವಂತೆ ಒತ್ತಾಯಿಸಿದ್ದರು.